ಈಗಿನ ಸುದ್ದಿ

100 ಕೋಟಿ ಕ್ಲಬ್ಗೆ 'ಹಾಲಿ ಡೇ'

100 ಕೋಟಿ ಕ್ಲಬ್ಗೆ 'ಹಾಲಿ ಡೇ'
Published On :

ಮುಂಬೈ: ನಟ ಅಕ್ಷಯ್ ಕುಮಾರ್ ಅಭಿನಯದ 'ಹಾಲಿ ಡೇ: ಎ ಸೋಲ್ಜರ್ ಈಶ್ ನೆವರ್ ಆಫ್ ಡ್ಯೂಟಿ' ಚಿತ್ರ ಭರ್ಜರಿಯಾಗಿ ಪ್ರದರ್ಶನ ಕಾಣುತ್ತಿದೆ. ಬಾಕ್ಸ್ ಆಫೀಸ್ನಲ್ಲಿ ಯಶಸ್ವಿಯಾಗಿರುವ ಈ ಸಿನಿಮಾ ಇದೀಗ 100 ಕೋಟಿ ರುಪಾಯಿ ಚಿತ್ರಗಳ ಕ್ಲಬ್ ಸೇರಿದೆ.

ಗುರುವಾರ ಹೊತ್ತಿಗೆ 99.71 ಕೋಟಿ ಗಳಿಕೆಯನ್ನು ಈ ಚಿತ್ರ ದಾಖಲಿಸಿದೆ. ಇದರೊಂದಿಗೆ 2014ರ ಅತಿ ಹೆಚ್ಚು ಗಳಿಸಿದ ಚಿತ್ರಗಳ ಸಾಲಿನಲ್ಲಿ ಸದ್ಯ 3ನೇ ಸ್ಥಾನದಲ್ಲಿದೆ.

ಈ ಮಧ್ಯೆ, ಭಾರಿ ನಿರೀಕ್ಷೆಯೊಂದಿಗೆ ತೆರೆ ಕಂಡಿದ್ದ ಸಜಿದ್ ಖಾನ್ ಅವರ 'ಹಮ್‌ಶಕಲ್‌' ಚಿತ್ರ ರಸಿಕರ ಮನ ಗೆಲ್ಲುವಲ್ಲಿ ವಿಫಲವಾಗಿದೆ. ತೆರೆಕಂಡ ಮೊದಲ ದಿನ ಕೇವಲು 4.5ಕೋಟಿ ಗಳಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.