ಸಾಯಿ ಬಾಬಾ ದೇವರಲ್ಲ: ದ್ವಾರಕಾಪೀಠ ಶಂಕರಾಚಾರ್ಯ ಸ್ವಾಮಿ

ಮುಂಬೈ: ಸಾಯಿ ಬಾಬಾ ಮನುಷ್ಯ, ಅವರು ದೇವರಲ್ಲ...ಅವರನ್ನು ನಂಬಬೇಡಿ ಎಂದು ದ್ವಾರಕಾಪೀಠದ ಶಂಕರಾಚಾರ್ಯ ಸ್ವಾಮಿ ಸ್ವರೂಪಾನಂದ ಹೇಳಿದ್ದಾರೆ.
ಸಾಯಿಬಾಬಾ ದೇವರಲ್ಲ, ಆದ್ದರಿಂದ ಅವರಿಗೆ ದೇವಸ್ಥಾನ ನಿರ್ಮಿಸುವ ಅಗತ್ಯವೂ ಇಲ್ಲ ಎಂದು ಶಂಕರಾಚಾರ್ಯ ಸ್ವಾಮಿ ಹೇಳಿದ್ದಾರೆ.
ವಿದೇಶೀ ಸಂಸ್ಥೆಗಳು ದುಡ್ಡು ಮಾಡುವುದಕ್ಕಾಗಿ ಇಂಥಾ ಪಿತೂರಿ ನಡೆಸುತ್ತವೆ. ಹಿಂದೂಗಳು ಒಗ್ಗಟ್ಟಾಗಿ ಇರುವುದು ಅವರಿಗೆ ಇಷ್ಟವಿಲ್ಲ ಎಂದು ಸ್ವಾಮಿ ಹೇಳಿರುವುದಾಗಿ ವೆಬ್ಸೈಟೊಂದು ಉಲ್ಲೇಖಿಸಿದೆ.
ಸನಾತನ ಧರ್ಮದಲ್ಲಿ ಭಗವಾನ್ ವಿಷ್ಣು 34 ಅವತಾರಗಳನ್ನೆತ್ತಿದ್ದಾನೆ ಎಂಬುದು ನಂಬಿಕೆ. ಕಲಿಯುಗದಲ್ಲಿ ಕಲ್ಕಿ ಮತ್ತು ಬುದ್ಧನ ನಂತರ ಯಾವುದೇ ಅವತಾರ ಇಲ್ಲ. ಹಾಗಿರುವಾಗ ಸಾಯಿಬಾಬಾ ಅವತಾರವಲ್ಲ ಎಂದು ಶಂಕರಾಚಾರ್ಯ ಸ್ವಾಮಿ ವಾದಿಸಿದ್ದಾರೆ.
ಸಾಯಿಬಾಬಾ ಅವರನ್ನು ಗುರು ಎಂದು ನಂಬಬಹುದೇ ವಿನಾ ದೇವರೆಂದು ನಂಬಲು ಸಾಧ್ಯವಿಲ್ಲ. ಆದಾಗ್ಯೂ , ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣದ ಕಾವು ಏರುವ ಹೊತ್ತಲ್ಲಿ ದೇಶದ ಚಿಂತನೆಯ ದಿಕ್ಕನ್ನು ಬದಲಿಸುವ ಸಲುವಾಗಿ ಸಾಯಿಬಾಬಾ ಅವರನ್ನು ದೇವಾಲಯದಲ್ಲಿ ಪೂಜಿಸಲಾಗಿತ್ತು ಎಂದು ಶಂಕರಾಚಾರ್ಯರು ಅಭಿಪ್ರಾಯ ಪಟ್ಟಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


