ಈಗಿನ ಸುದ್ದಿ

ಬ್ಲಾಕ್‌ಮೇಲ್ ಪ್ರಕರಣ: ವೈದ್ಯರೊಂದಿಗೆ ಸೆಕ್ಸ್ ಮಾಡಿದ್ದು ನಟಿ ನಯನಾ

ಬ್ಲಾಕ್‌ಮೇಲ್ ಪ್ರಕರಣ: ವೈದ್ಯರೊಂದಿಗೆ ಸೆಕ್ಸ್ ಮಾಡಿದ್ದು ನಟಿ ನಯನಾ
Published On :

ಬೆಂಗಳೂರು: ವೈದ್ಯನ ಜತೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದು ಸ್ಯಾಂಡಲ್‌ವುಡ್ ನಟಿ ನಯನಾ ಕೃಷ್ಣ ಅವರೇ ಎಂದು ಸಿಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಕರಣ ತನಿಖೆ ನಡೆಸುತ್ತಿರುವ ಸಿಸಿಬಿ ಪೊಲೀಸರು ಪ್ರಕರಣದ ಆರೋಪಿಗಳು ಬಳಸಿದ್ದ ಕ್ಯಾಮೆರಾವನ್ನು ವಶಕ್ಕೆ ತೆಗೆದುಕೊಂಡು ಪರೀಕ್ಷೆ ನಡೆಸಿದರು. ಈ ವೇಳೆ ವೈದ್ಯರ ಜತೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿರುವುದು ನಟಿ ನಯನಾ ಕೃಷ್ಣ ಎಂದು ಅಧಿಕಾರಿಗಳು ಸ್ಪಷ್ಟ ಪಡಿಸಿದ್ದಾರೆ.

ನಯನಾ ಹಾಗೂ ವೈದ್ಯನು ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದ ದೃಶ್ಯವನ್ನು ಸುಮಾರು ಎಂಟು ನಿಮಿಷಗಳವರೆಗೆ ಚಿತ್ರೀಕರಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ವೈದ್ಯರೊಬ್ಬರ ಜತೆ ನಯನಾ ಕೃಷ್ಣ ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದ ದೃಶ್ಯವನ್ನು ಚಿತ್ರೀಕರಿಸಿಕೊಂಡು ಹಣಕ್ಕಾಗಿ ಬೆದರಿಕೆ ಹಾಕಿದ್ದ ಕೆಂಪೇಗೌಡನಗರ ಠಾಣೆಯ ಕಾನ್‌ಸ್ಪೆಬಲ್ ಮಲ್ಲೇಶ್, ಹೇಮಂತ್ ಕುಮಾರ್ ಹಾಗೂ ಸುನೀಲ್ ಎಂಬುವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದು, ಆರೋಪಿಗಳಿಂದ ಜಪ್ತಿ ಮಾಡಿದ ಕ್ಯಾಮೆರಾವನ್ನು ಪರಿಶೀಲಿಸಿದಾಗ ದೂರು ನೀಡಿದ್ದ ವೈದ್ಯರ ಜತೆ ನಯನಾ ಕೃಷ್ಣ ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದ ದೃಶ್ಯ ಆ ಕ್ಯಾಮೆರಾದಲ್ಲಿ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ನಯನಾ, ರಿಹಾನಾ ಮತ್ತು ರಘು ಅವರು ಬಂಧಿತರ ಜತೆ ಅನಾರೋಗ್ಯದ ನೆಪವೊಡ್ಡಿ ಕಳೆದ ಸೋಮವಾರ ವೈದ್ಯರ ಮನೆಗೆ ಹೋಗಿದ್ದರು. ನಂತರ ಚಿಕಿತ್ಸೆಗೆಂದು ನಯನಾ ಒಬ್ಬಳನ್ನೇ ವೈದ್ಯರ ಕೊಠಡಿಯೊಳಗೆ ಕಳುಹಿಸಿದ್ದ ಆರೋಪಿಗಳು, ಕೊಠಡಿಯಲ್ಲಿನ ಚಟುವಟಿಕೆಗಳನ್ನು ಕಿಟಿಕಿ ಮೂಲಕ ಕ್ಯಾಮೆರಾದಿಂದ ರಹಸ್ಯವಾಗಿ ಸೆರೆ ಹಿಡಿದಿದ್ದು, ಆ ನಂತರ ವೈದ್ಯನಿಗೆ ಆ ದೃಶ್ಯಾವಳಿಯನ್ನು ವೈದ್ಯರಿಗೆ ತೋರಿಸಿ ರು. 11 ಲಕ್ಷ ನೀಡುವಂತೆ ಬ್ಲಾಕ್‌ಮೇಲ್ ಮಾಡಿದ್ದಾರೆ. ಹಣ ಕೊಡಲು ನಿರಾಕರಿಸಿದರೆ ದೃಶ್ಯಗಳನ್ನು ಮಾಧ್ಯಮಗಳಲ್ಲಿ ಬಹಿರಂಗಪಡಿಸುವುದಾಗಿ ಬೆದರಿಕೆ ಹಾಕಿದ್ದರು.

ಪ್ರಕರಣ ನಂತರ ಇತರ ಆರೋಪಿಗಳಾದ ನಯನಾ ಕೃಷ್ಣ, ರಿಹಾನಾ ಮತ್ತು ರಘು ತಲೆ ಮರೆಸಿಕೊಂಡಿದ್ದು ಅವರ ಪತ್ತೆಗಾಗಿ ಪೊಲೀಸರು ಕಾರ್ಯಾಚರಣೆ ಕೈಗೊಂಡಿದ್ದಾರೆ. ಮೂಲಗಳ ಪ್ರಕಾರ ಆರೋಪಿಗಳು ತಮಿಳುನಾಡಿಗೆ ಪರಾರಿಯಾಗಿರುವ ಶಂಕೆ ವ್ಯಕ್ತವಾಗಿದ್ದು, ಸಿಸಿಬಿ ಪೊಲೀಸರ ಒಂದು ತಂಡ ತಮಿಳುನಾಡಿಗೆ ದೌಡಾಯಿಸಿದೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.