ಈಗಿನ ಸುದ್ದಿ

ಜು.17 -19 ರವರೆಗೆ ಸೆರೈ ಛಾಯಾಚಿತ್ರ ಕಾರ್ಯಗಾರ

ಜು.17 -19 ರವರೆಗೆ ಸೆರೈ ಛಾಯಾಚಿತ್ರ ಕಾರ್ಯಗಾರ
Published On :

ಬೆಂಗಳೂರು: ಒಂದು ಶ್ರೇಷ್ಟ ಛಾಯಚಿತ್ರವನ್ನು ಸೆರೆಹಿಡಿಯಲು ಒಂದು ಕ್ಷಣ ಸಾಕು ಆದರೆ ಅದಕ್ಕೆ ಸಿದ್ಧವಾಗಲು ಒಂದು ಜೀವಮಾನವೇ ಬೇಕು. ವನ್ಯಮೃಗ ಮತ್ತು ಪ್ರಕೃತಿ ಛಾಯಾಚಿತ್ರಣವು ಬಹಳ ಕಷ್ಟಕರವಾದ, ಭಾವೋದ್ದೀಪ್ತ ಪ್ರಕ್ರಿಯೆಯಾಗಿರಬಹುದು, ಆದರೆ ಅದು ವಿಸ್ಮಯದ, ಪ್ರೇರೇಪಿಸುವ ಫಲಿತಾಂಶಗಳನ್ನು ನೀಡುತ್ತದೆ. ದಿ ಸೆರೈ ಜುಲೈ 17-19ರವರೆಗೂ ದಿ ಸೆರೈ ಬಂಡೀಪುರದಲ್ಲಿ ಶಟರ್ ಬಗ್ 2014 ಎಂಬ ಮೂರು ದಿನಗಳ ಕಾಯರ್ಾಗಾರದ ಸರಣಿಯನ್ನು ಆಯೋಜಿಸುತ್ತಲಿದೆ.

ಶ್ರೇಷ್ಟ ಛಾಯಗ್ರಾಹಕರಾದ ಸುಧೀರ್ ಶಿವರಾಂ ಅವರು ಈ ಕಾಯರ್ಾಗಾರವನ್ನು ನಡೆಸಿಕೊಡಲಿದ್ದು, ವನ್ಯಜೀವಿಗಳ ಚಿತ್ರವನ್ನು ಸೆರೆಹಿಡಿಯುವ ಸೂಕ್ಷ್ಮತೆಗಳನ್ನು ಕಲಿಯಬಯಸುವ ಛಾಯಾಚಿತ್ರ ಉತ್ಸಾಹಿಗಳಿಗೆ ಮತ್ತು ಅರಳುತ್ತಿರುವ ಹವ್ಯಾಸಿಗಳಿಗೆ ಆಯೋಜಿಸಲಾಗುತ್ತಿದೆ. ಸಹಭಾಗಿಗಳಿಗೆ ಛಾಯಾಚಿತ್ರದ ಪ್ರಾಥಮಿಕ ತತ್ವಗಳ ಪಕ್ಶಿನೋಟ, ಸ್ಥಳದ ಪ್ರಾಕೃತಿಕ ಇತಿಹಾಸ ಮತ್ತು ವಸ್ತುಗಳು ಬಗ್ಗೆ ಅಂತದರ್ೃಷ್ಟಿ ಮತ್ತು ಅವುಗಳನ್ನು ಸೆರೆಹಿಡಿಯು ಬಗೆ, ಇವನ್ನು ತಿಳಿಸಿಕೊಡಲಾಗುತ್ತದೆ. ಸಹಭಾಗಿಗಳಿಗೆ ವನ್ಯಜೀವಿ ಮತ್ತು ಪ್ರಕೃತಿ ಛಾಯಾಚಿತ್ರಣದ ನೈತಿಕ ಅಂಶಗಳ ಬಗ್ಗೆಯೂ ಜಾಗೃತಿ ಮೂಡಿಸಲಾಗುತ್ತದೆ.

ದಿ ಸೆರೈ ಬಂಡೀಪುರದ ಕಾಯರ್ಾಗಾರವು, ಪಶ್ಚಿಮ ಘಟ್ಟಗಳ ತಪ್ಪಲಿನ ದಟ್ಟಾರಣ್ಯಗಳಲ್ಲಿ ಕಂಡುಬರುವ ವೈವಿಧ್ಯಮಯ ವನ್ಯಜೀವಿಗಳನ್ನು ಛಾಯಾಗ್ರಾಹಕರಿಗೆ ಪರಿಚಯಿಸುತ್ತ, ಈ ಋತುಮಾನದಲ್ಲಿ ಈ ರಮ್ಯತಾಣವನ್ನು ಆಕ್ರಮಿಸುವಂತಹ ವಿವಿಧ ರೀತಿಯ ವಲಸೆ ಹಕ್ಕಿಗಳನ್ನೂ ತಮ್ಮ ಮಸೂರದಲ್ಲಿ (ಲೆನ್ಸ್) ಸೆರೆಹಿಡಿಯಲೂ ಛಾಯಾಗ್ರಾಹಕರಿಗೆ ಅನುವು ಮಾಡಿಕೊಡಲಿದೆ. ಇದರ ಜೊತೆಗೆ, ಈ ಕಾಯರ್ಾಗಾರವು ಭೂದೃಶ್ಯ, ನಕ್ಷತ್ರ ಜಾಡು, ಟೈಮ್ ಲ್ಯಾಪ್ಸೆ ಮತ್ತು ಇರುಳಿನ ಛಾಯಾಚಿತ್ರಣದ ಮೇಲೂ ಕೇಂದ್ರೀಕರಿಸುತ್ತದೆ.

ಆನಂದ ಮೆನನ್, ಮಾಕರ್ೆಟಿಂಗ್ ಮುಖ್ಯಸ್ಥರು, ಕಾಫಿ ಡೇ ಹೋಟೆಲ್ಸ್ ಆಂಡ್ ರೆಸಾಟ್ಸರ್್ ಹೇಳಿದರು - ದಿ ಸೆರೈದಲ್ಲಿ ಯಾವಾಗಲೂ ನಮ್ಮ ಗುರಿಯು ನಮ್ಮ ಅತಿಥಿಗಳಿಗೆ ಅನನ್ಯ ಅನುಭವಗಳ ಸರವನ್ನು ಕೊಡುವುದಾಗಿದೆ. ಮರೆಯಲಾಗದಂಥ ನೆನಪುಗಳನ್ನು ಸೃಷ್ಟಿಸುವ ನಮ್ಮ ನೀತಿಗೆ ಅನುಗುಣವಾಗಿ, ದಿ ಸೆರೈ ಪ್ರಸ್ತುತ ಪಡಿಸುತ್ತಿದೆ ದಿ ಶಟರ್ ಬಗ್ 2014.

ಮನ್ನಣೆ ಪಡೆದಂತಹ ಶ್ರೇಷ್ಟ ಛಾಯಾಗ್ರಾಹಕರಾದ ಮತ್ತು ಹೆಸರಾಂತ ಹಸಿರು ಪ್ರಚಾರಕರಾದ ಸುಧೀರ್ ಶಿವರಾಂ ಅವರು, ಸಹಭಾಗಿಗಳಿಗೆ ಅದ್ಭುತವಾದ ಛಾಯಾಚಿತ್ರಗಳನ್ನು ಸೆರೆಹಿಡಿಯುವ ಬಗ್ಗೆ ಸಲಹೆ-ಸೂಚನೆಗಳನ್ನು ನೀಡಿ, ಅದರ ಹಿಂದಿರುವ ನೈತಿಕತೆ, ಸಮಯ ಪ್ರಜ್ಞೆ, ತಂತ್ರಗಳು ಮತ್ತು ಮುಖ್ಯವಾಗಿ ಅದರ ಮರ್ಮವನ್ನು ತಿಳಿಸುತ್ತಾರೆ.

ಈ ಕಾಯರ್ಾಗಾರದ ಬಗ್ಗೆ ಮಾತನಾಡುತ್ತಾ, ಸುಧೀರ್ ಶಿವರಾಂ ಹೇಳಿದರು - ವನ್ಯಜೀವಿ ಛಾಯಾಗ್ರಹಣದಲ್ಲಿ ಹಲವಾರು ಸೂಕ್ಷ್ಮತೆಗಳಿವೆ ಮತ್ತು ಪ್ರತಿ ಚಿತ್ರವಸ್ತುವಿನ ನಡವಳಿಕೆಯು ಭಿನ್ನವಾಗಿದ್ದು, ಅದನ್ನು ಅಧ್ಯಯನ ಮಾಡುವ ಅವಶ್ಯಕತೆಯಿದೆ. ಈ ಕಾಯರ್ಾಗಾರವು ವನ್ಯಜೀವಿ ಛಾಯಾಚಿತ್ರಣದ ವಿವಿಧ ಮಜಲುಗಳು ಮತ್ತು ಚಿತ್ರಗಳನ್ನು ತೆಗೆಯುವ ಮತ್ತು ಸೃಷ್ಟಿಸುವ ನಡುವಿನ ಅಂತರವನ್ನು ಕಲಿಸಲಿದೆ. ಇದರ ಜೊತೆಗೆ, ವಿವಿಧ ವನ್ಯಜೀವಿಗಳ ನಡವಳಿಕೆಯ ಬಗ್ಗೆ ತಿಳಿದುಕೊಳ್ಳುವ ಮತ್ತು ಅರ್ಥಮಾಡಿಕೊಳ್ಳುವ ಅವಶ್ಯಕತೆಯನ್ನು ಒತ್ತಿ ಹೇಳುತ್ತದೆ, ಮತ್ತು ವನ್ಯಜೀವಿ ಛಾಯಾಗ್ರಹಣಕ್ಕೆ ಸಂಬಂಧಿಸಿದಂತೆ ಇರುವ ಕೆಲವು ಮಾರ್ಗಸೂಚಿಗಳನ್ನು ಅನುಸರಿಸುವುದನ್ನೂ ತಿಳಿಸಲಿದೆ.

ಈ ಕಾಯರ್ಾಗಾರವು ಎಲ್ಲಾ ಛಾಯಾಚಿತ್ರಣ ಉತ್ಸಾಹಿಗಳಿಗೂ ಮತ್ತು ತಮ್ಮ ಆಸಕ್ತಿಯನ್ನು ಮುಂದಿನ ಹಂತಕ್ಕೆ ಒಯ್ಯಲು ಇಚ್ಛಿಸುವವರಿಗೆ ತೆರೆದಿದೆ. ಈ ಪ್ಯಾಕೇಜ್, ದಿ ಸೆರೈ ರಿಸಾಟರ್್ (ಬಂಡೀಪುರ)ದಲ್ಲಿ ಸುಖಕರವಾದ ವಸತಿಯನ್ನು, ಆಹಾರ, ತೆರಿಗೆಗಳು, ಸುಧೀರ್ ಶಿವರಾಂ ಅವರೊಂದಿಗೆ ಕಾರ್ಯಗಾರ ಮತ್ತು ಬಂಡೀಪುರದಲ್ಲಿ ನಾಲ್ಕು ವನ್ಯ ಸಫಾರಿಯನ್ನು ಒಳಗೊಂಡಿದೆ.

ಕಾರ್ಯಾಗಾರದ ವಿವರಗಳು:
ದಿ ಸೆರೈ ಬಂಡೀಪುರ - ಜು.17 ರಿಂದ 19 ರವರೆಗೆ, ರೂ. 19,500 ನಿಂದ ಆರಂಭ

ವಿಚಾರಣೆಗೆ ಕರೆ ಮಾಡಿ - +91 80 4001 2260/9632223676

ಅಥವಾ ಲಾಗ್-ಆನ್ ಮಾಡಿ http://shutterbug.theserai.in/

* ನಿಯಮಗಳು ಮತ್ತು ನಿಬಂಧನೆಗಳು ಅನ್ವಯಿಸುತ್ತವ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.