ಈಗಿನ ಸುದ್ದಿ

ಫೋರಂ ಮಾಲ್‌ನಲ್ಲಿ ನಟ ಸತೀಶ್‌ನ 'ನೈಟ್ ಸಫಾರಿ'

ಫೋರಂ ಮಾಲ್‌ನಲ್ಲಿ ನಟ ಸತೀಶ್‌ನ 'ನೈಟ್ ಸಫಾರಿ'
Published On :

ಬೆಂಗಳೂರು: ಬೆಂಗಳೂರಿನ ಕೋರಮಂಗಲದಲ್ಲಿರುವ ಫೋರಂ ಮಾಲ್‌ನಲ್ಲಿ ನಡೆದ ಮೂರು ದಿನಗಳ 'ನೈಟ್ ಸಫಾರಿ' ಭಾನುವಾರ ಅಂತ್ಯಗೊಂಡಿದ್ದು, ಶಾಪಿಂಗ್ ಸಫಾರಿಯಲ್ಲಿ ನಟ ನಿನಾಸಂ ಸತೀಶ್ ಅವರು ಭಾಗವಹಿಸಿದ್ದರು.

ಈ ಮೂರು ದಿನಗಳ 'ಮಿಡ್ನೈಟ್ ಷಾಪಿಂಗ್ ಸಫಾರಿ'ಯಲ್ಲಿ ಪಿವಿಆರ್ ಸಿನಿಮಾಗಳಲ್ಲಿ ಹಾರರ್ ಚಲನಚಿತ್ರಗಳ ಪ್ರದರ್ಶನ ನಡೆಯಿತು. ಈ ಚಿತ್ರಗಳನ್ನು ವೀಕ್ಷಿಸಲು ಗ್ರಾಹಕರು ಮುಗಿಬಿದ್ದುದು ವಿಶೇಷವಾಗಿತ್ತು.!
'ಲೂಸಿಯ' ಚಿತ್ರದ ನಟ ಸತೀಶ್ ಅವರ ಉಪಸ್ಥಿತಿ ಎಲ್ಲರ ಗಮನ ಸೆಳೆಯಿತು. ಬೆಂಗಳೂರಿನಲ್ಲಿ ಈ ರೀತಿ ತಡರಾತ್ರಿಯವರೆಗೆ ವಿಶೇಷ ಷಾಪಿಂಗ್ ಮೇಳವನ್ನು ಆಯೋಜಿಸುವ ಮೂಲಕ ಫೋರಂ ಮಾಲ್ ಬೆಂಗಳೂರಿಗರಿಗೆ ವಿಶೇಷ ಅನುಭವವನ್ನು ನೀಡುವ ಪರಿಕಲ್ಪನೆಯನ್ನು ಅವರು ಶ್ಲಾಘಿಸಿದರು.

ತಡೆರಹಿತ ಷಾಪಿಂಗ್ನಲ್ಲಿ ಸಮಗ್ರವಾದ ಆಹಾರ ಮೇಳ ಹಾಗೂ ಚಲನಚಿತ್ರಗಳು ಎಲ್ಲರ ಮನರಂಜಿಸುವಲ್ಲಿ ಯಶಸ್ವಿಯಾಯಿತು. ಮಾಲ್ನ ಪ್ರವೇಶದ್ವಾರದ ಬಳಿ, ಕುಲ್ಫಿ, ಐಸ್ ಕ್ರೀಂ, ಕೇಂಡಿ, ಪಾಪ್ಕಾನರ್್, ಮೊಮೊಸ್, ಪಾವ್ ಭಾಜಿ ಹಾಗೂ ವಿವಿಧ ಚಾಟ್ಸ್ಗಳ ಆಹಾರ ಮಳಿಗೆಗಳನ್ನು ಸ್ಥಾಪಿಸಲಾಗಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.