ಸದ್ದಾಂಗೆ ಗಲ್ಲು ಶಿಕ್ಷೆ ವಿಧಿಸಿದ್ದ ನ್ಯಾಯಾಧೀಶನ ಹತ್ಯೆ: ವರದಿ

ಬಾಗ್ದಾದ್: ಇರಾಕ್ನ ಮಾಜಿ ಸರ್ವಾಧಿಕಾರಿ ಸದ್ದಾಂ ಹುಸೇನ್ಗೆ ಗಲ್ಲು ಶಿಕ್ಷೆ ವಿಧಿಸಿದ್ದ ನ್ಯಾಯಾಧೀಶ ರೌಫ್ ಅಬ್ದುಲ್ ರೆಹಮಾನ್ ಅವರನ್ನು ಇಸ್ಲಾಂ ಉಗ್ರ ಸಂಘಟನೆ ಐಎಸ್ಐಎಸ್ ಉಗ್ರರು ಹತ್ಯೆ ಮಾಡಿದ್ದಾರೆ ಎಂದು ಮಂಗಳವಾರ ಅರಬ್ ಮಾಧ್ಯಮಗಳು ವರದಿ ಮಾಡಿದೆ.
2003 ಮತ್ತು 2007ರ ವೇಳೆಯಲ್ಲಿ ಮಾರಣಹೋಮ ನಡೆಸಿದ ಆರೋಪದ ಮೇಲೆ ಸದ್ದಾಂ ಹುಸೇನ್ಗೆ ನ್ಯಾಯಾಧೀಶರು ಗಲ್ಲು ಶಿಕ್ಷೆ ವಿಧಿಸಿದ್ದರು. ಇದಕ್ಕೆ ಪ್ರತೀಕಾರವಾಗಿ ಉಗ್ರರು ಜೂನ್ 16 ರಂದು ಅಪಹರಿಸಿ ಅವರನ್ನು ಹತ್ಯೆ ಮಾಡಿದ್ದಾರೆ ಎಂದು ವರದಿಯಾಗಿದೆ.
ಇಸ್ಲಾಂ ಉಗ್ರರ ಮುಖಂಡ ಇಬ್ರಾಹಿಂ ಅಲ್ ಧೋರಿ ನ್ಯಾಯಾಧೀಶರನ್ನು ಅಪಹರಿಸಿ ಸಿರಿಯಾಕ್ಕೆ ಹೊಂದಿಕೊಂಡಿರುವ ರಹಸ್ಯ ಸ್ಥಳವೊಂದರಲ್ಲಿ ಹತ್ಯೆ ಮಾಡಿದ್ದಾನೆ ಎಂದು ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.
ಜೋರ್ಡಾನಿನ ಸಚಿವರೊಬ್ಬರು ನ್ಯಾಯಾಧೀಶ ರೌಫ್ ಅಬ್ದುಲ್ ರೆಹಮಾನ್ ಅವರನ್ನು ಉಗ್ರರು ಅಪಹರಿಸಿ ಹತ್ಯೆ ಮಾಡಿದ್ದಾರೆ ಎಂದು ಫೇಸ್ಬುಕ್ನಲ್ಲಿ ಹಾಕಿಕೊಂಡಿದ್ದಾರೆ.
ಆದರೆ ಇರಾಕ್ ಸರ್ಕಾರ ಇದನ್ನು ನಿರಾಕರಿಸಿಯೂ ಇಲ್ಲ ಅಥವಾ ಖಚಿತ ಪಡಿಸಿಯೂ ಇಲ್ಲ. ನ್ಯಾಯಾಧೀಶರು ಅಪಹರಣಕ್ಕೊಳಗಾಗಿರುವ ಸಾಧ್ಯತೆ ಇದ್ದು, ಅವರನ್ನು ಸುರಕ್ಷಿತವಾಗಿ ಕರೆ ತರಲು ಎಲ್ಲಾ ರೀತಿಯ ಸರ್ವಪ್ರಯತ್ನ ನಡೆಸುವುದಾಗಿ ಸಚಿವರೊಬ್ಬರು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


