ಈಗಿನ ಸುದ್ದಿ

ವೈಯಕ್ತಿಕ ಹೂಡಿಕೆ ತೆರಿಗೆ ವಿನಾಯ್ತಿ, ಲಕ್ಷದಿಂದ 2 ಲಕ್ಷಕ್ಕೆ ಏರಿಕೆ?

ವೈಯಕ್ತಿಕ ಹೂಡಿಕೆ ತೆರಿಗೆ ವಿನಾಯ್ತಿ, ಲಕ್ಷದಿಂದ 2 ಲಕ್ಷಕ್ಕೆ ಏರಿಕೆ?
Published On :

ನವದೆಹಲಿ: ಗೃಹ ಉಳಿತಾಯವನ್ನು ಉತ್ತೇಜಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ವೈಯಕ್ತಿಕ ಹೂಡಿಕೆಯ ತೆರಿಗೆ ವಿನಾಯಿತಿ ಮಿತಿಯನ್ನು 2 ಲಕ್ಷ ರು.ಗೆ ಹೆಚ್ಚಿಸುವ ಬಗ್ಗೆ ಚಿಂತನೆ ನಡೆಸುತ್ತಿದೆ.

ಪ್ರಸ್ತುತ ಇನ್‌ಕಮ್ ಟ್ಯಾಕ್ ಆಕ್ಟ್ 80ಸಿ, 80ಸಿಸಿ, ಮತ್ತು 80ಸಿಸಿಸಿ ಅನ್ವಯ ಹೂಡಿಕೆ ಮತ್ತು ವೆಚ್ಚಗಳು ಒಟ್ಟಾಗಿ 1 ಲಕ್ಷ ರು. ಮಿತಿಯೊಳಗೆ ಮಾತ್ರ ತೆರಿಗೆ ವಿನಾಯಿತಿಗೆ ಅವಕಾಶವಿದೆ. ಈ ಮಿತಿಯನ್ನು ಹೆಚ್ಚಿಸುವುದರಿಂದ ಬೊಕ್ಕಸಕ್ಕೆ ಆಗುವ ನಷ್ಟದ ಕುರಿತು ಕಂದಾಯ ಇಲಾಖೆ ಲೆಕ್ಕ ಹಾಕುತ್ತಿದೆ.

2014-15ನೇ ಸಾಲಿನ ಸಾಮಾನ್ಯ ಬಜೆಟ್‌ನ್ನು ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ಜುಲೈ 10ರಂದು ಲೋಕಸಭೆಯಲ್ಲಿ ಮಂಡಿಸಲಿದ್ದು, ಈ ಬಜೆಟ್‌ನಲ್ಲಿ ಈ ಕುರಿತ ಕ್ರಮಗಳು ಘೋಷಣೆಯಾಗುವ ನಿರೀಕ್ಷೆಯಿದೆ.

ಗೃಹ ಉಳಿತಾಯವನ್ನು ಉತ್ತೇಜಿಸಲು ವಿಮಾ ಹೂಡಿಕೆಗಳ ಮೇಲಿನ ತೆರಿಗೆ ವಿನಾಯಿತಿ ಮಿತಿಯನ್ನು ವಾರ್ಷಿಕ 1 ಲಕ್ಷ ರು.ನಿಂದ 2 ಲಕ್ಷ ರು.ಗಳಿಗೆ ಏರಿಸಬೇಕು ಎಂದು ಬ್ಯಾಂಕ್‌ಗಳು ಮತ್ತು ವಿಮಾ ಸಂಸ್ಥೆಗಳು ಬೇಡಿಕೆಯಿಟ್ಟಿದ್ದವು. ಈ ಕುರಿತು ವಿತ್ತ ಸಚಿವಾಲಯ ತೆರಿಗೆ ವಿನಾಯಿತಿ ಮಿತಿಯನ್ನು ಹೆಚ್ಚಿಸುವ ಚಿಂತನೆ ನಡೆಸಿದೆ.

ಮೊದಲೇ ಹಣದುಬ್ಬರದಿಂದ ಕಂಗೆಟ್ಟಿರುವ ತಿಂಗಳ ವೇತನದಾರರಿಗೆ ಈ ಮಿತಿಯ ಹೆಚ್ಟಳದಿಂದ ಅನುಕೂಲವಾಗಲಿದೆ ಎಂದು ಮೂಲಗಳು ತಿಳಿಸಿವೆ.

ಜೀವ ವಿಮೆ ಪ್ರೀಮಿಯಂ, ಪಬ್ಲಿಕ್‌ ಪ್ರಾವಿಡೆಂಟ್‌ ಫಂಡ್‌ (ಪಿಪಿಎಫ್‌), ಎಂಪ್ಲಾಯೀಸ್‌ ಪ್ರಾವಿಡೆಂಟ್‌ ಫಂಡ್‌ (ಇಪಿಎಫ್‌), ರಾಷ್ಟ್ರೀಯ ಉಳಿತಾಯ ಪತ್ರಗಳು, ಗೃಹಸಾಲದ ಮರುಪಾವತಿ, ಮ್ಯೂಚ್ಯುವಲ್ ಫಂಡ್‌ಗಳು ಮಾರಾಟ ಮಾಡುವ ಈಕ್ವಿಟಿ ಲಿಂಕ್ಡ್‌ ಉಳಿತಾಯ ಯೋಜನೆಗಳು ಮತ್ತು ಐದು ವರ್ಷಗಳ ಅವಧಿಯ ಬ್ಯಾಂಕ್‌ ನಿಗದಿತ ಠೇವಣಿಗಳಿಗೆ ಈ ವಿನಾಯಿತಿ ಅನ್ವಯವಾಗಲಿದೆ.

2008ರಲ್ಲಿ ಜಿಡಿಪಿ ಶೇ. 38 ರಷ್ಟಿದ್ದ ಉಳಿತಾಯ ದರ 2013-13ರ ವೇಳೆಗೆ ಶೇ. 30ಕ್ಕೆ ಕುಸಿದಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.