ಮಹಾರಾಷ್ಟ್ರದ ಸಿಎಂ ಆಗ್ತಾಳಂತೆ ರಾಖಿ ಸಾವಂತ್

ಮುಂಬೈ: ಮುಖ್ಯಮಂತ್ರಿ ಆಗುವ ಹಗಲು ಕನಸು ಕಾಣುತ್ತಿರುವ ಬಾಲಿವುಡ್ ಹಾಟ್ ನಟಿ ರಾಖಿ ಸಾವಂತ್ ಒಂದಲ್ಲಾ ಒಂದು ದಿನ ನಾನು ಮಹಾರಾಷ್ಟ್ರದ ಸಿಎಂ ಆಗಿಯೇ ತೀರುತ್ತೇನೆ ಎಂದು ಹೇಳಿದ್ದಾಳೆ.
ಕಳೆದ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ತಮ್ಮದೇ ಸ್ವಂತ ರಾಷ್ಟ್ರೀಯ ಆಮ್ ಪಾರ್ಟಿ(ಆರ್ಎಪಿ) ಸ್ಥಾಪಿಸಿದ್ದ ರಾಖಿ ಸಾವಂತ್, ಮುಂಬೈನ ಆಗ್ನೇಯ ಕ್ಷೇತ್ರದಲ್ಲಿ ಸ್ಪರ್ಧಿಸಿ ಕೇವಲ 1995 ಮತಗಳನ್ನು ಗಳಿಸಿ ಹೀನಾಯ ಸೋಲು ಕಂಡಿದ್ದರು.
ಇದೀಗ ರಾಮದಾಸ್ ಅಠಾವಾಲೆ ನೇತೃತ್ವದ ಆರ್ಪಿಐ ಪಕ್ಷವನ್ನು ಸೇರಿಕೊಂಡಿರುವ ರಾಖಿ ಸಾವಂತ್, ನಾನು ಬೋಲ್ಡ್ ಆಂಡ್ ಬ್ಯೂಟಿಫುಲ್ ಎಂದು ಬರ್ಣ್ಣಿಸಿಕೊಂಡಿದ್ದಾಳೆ. ನನಗೆ ಲಕ್ಷಾಂತರ ಮಂದಿ ಅಭಿಮಾನಿಗಳಿದ್ದು, ನನ್ನನ್ನು ಗೆಲ್ಲಿಸುತ್ತಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾಳೆ.
ಮುಂಬರುವ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ತಿಳಿಸಿದ ರಾಖಿ, ಈ ಚುನಾವಣೆಯಲ್ಲಿ ಮಹಾರಾಷ್ಟ್ರ ನವನಿರ್ಮಾಣ ಸೇನೆಯ ಮುಖ್ಯಸ್ಥ ರಾಜ್ ಠಾಕ್ರೆ ವಿರುದ್ಧ ನಿಲ್ಲಲು ನಾನು ರೆಡಿ ಎಂದು ತೊಡೆ ತಟ್ಟಿದ್ದಾಳೆ.
ರಾಜ್ ಠಾಕ್ರೆ ವಿರುದ್ಧ ನಿಲ್ಲುವ ಕುರಿತಂತೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ರಾಖಿ, ನಾನು ಯಾರಿಗೂ ಹೆದರುವವಳಲ್ಲ ಎಂದು ಗುಡುಗಿದಳು.
ರಾಖಿ ಸಾವಂತ್ ಸೇರ್ಪಡೆ ಬಗ್ಗೆ ಮಾತನಾಡಿದ ಆರ್ಪಿಐ ಪಕ್ಷದ ಅಧ್ಯಕ್ಷ ಅಠಾವಲೆ, ರಾಖಿ ಸಾವಂತ್ ತುಂಬಾ ಜನಪ್ರಿಯ ನಟಿಯಾಗಿದ್ದಾಳೆ. ಆಕೆಯ ಕುರಿತು ಪ್ರತಿಯೊಬ್ಬರಿಗೆ ಗೊತ್ತಿದೆ. ಕೇವಲ ನಗರ ಪ್ರದೇಶಗಳಲ್ಲದೆ ದೇಶದ ಪ್ರತಿ ಹಳ್ಳಿ ಹಳ್ಳಿಯ ಜನತೆಗೆ ಆಕೆಯ ಪರಿಚಯವಿದೆ. ರಾಖಿ ಸಾವಂತ್ ಕೇವಲ ನಟಿಯಲ್ಲಿ. ಆಕೆಯೊಬ್ಬ ಸಾಮಾಜಿಕ ಕಾರ್ಯಕರ್ತೆ ಮತ್ತು ಸಮಾಜ ಸುಧಾರಕಿ ಕೂಡಾ ಆಗಿದ್ದಾರೆ. ಜನತೆಯ ಸೇವೆ ಮಾಡುವಂತಹ ಕಲಾವಿದರು ನಮಗೆ ಬೇಕಾಗಿದ್ದಾರೆ ಎಂದು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


