ಪ್ರೀತಿ ಕೊಂದ ಕೊಲೆಗಾತಿಗೆ ಜೀವಾವಧಿ ಶಿಕ್ಷೆ

ಚಿಕ್ಕಮಗಳೂರು: ಜೀವಕ್ಕೆ ಜೀವವಾಗಿ ಪ್ರೀತಿಸುತ್ತಿದ್ದ ಪ್ರಿಯಕರನನ್ನು ಕೊಲೆ ಮಾಡಿದ ಆರೋಪದಡಿ ಪ್ರಿಯತಮೆ ಸೇರಿ ಐವರಿಗೆ ಜಿಲ್ಲಾ ಸೆಷನ್ಸ್ ನ್ಯಾಯಾಲಯ ಮಂಗಳವಾರ ಜೀವಾವಧಿ ಶಿಕ್ಷೆ ವಿಧಿಸಿದೆ.
2013 ಫೆಬ್ರವರಿ 14ರ ಪ್ರೇಮಿಗಳ ದಿನದಂದೇ ಎಂಜಿನಿಯರಿಂಗ್ ವಿದ್ಯಾರ್ಥಿಯಾಗಿದ್ದ ದಿಲೀಪ್ ನನ್ನು ಪ್ರೀತಿಸುತ್ತಿದ್ದ ಮೀನಾಕ್ಷಿ ತನ್ನ ಭಾವಿ ಪತಿಯೊಂದಿಗೆ ಸೇರಿ ಕೊಲೆ ಮಾಡಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಿನ್ನೆ ತೀರ್ಪು ನೀಡಿದ್ದ ಕೋರ್ಟ್ ಐವರು ಅಪರಾಧಿಗಳೆಂದು ಘೋಷಿಸಿ, ಶಿಕ್ಷೆಯ ಪ್ರಮಾಣವನ್ನು ಇಂದಿಗೆ ಕಾಯ್ದಿರಿಸಿತ್ತು.
ಇಂದು ತೀರ್ಪು ಪ್ರಕಟಿಸಿದ ಸೆಷನ್ಸ್ ಕೋರ್ಟ್ ನ್ಯಾಯಾಧೀಶರಾದ ಹೆಚ್.ಎಸ್. ಕಮಲಾ ಅವರು, ಐವರು ಅಪರಾಧಿಗಳಾದ ಮೀನಾಕ್ಷಿ, ಪತಿ ಪ್ರತಾಪ್, ನರಸಿಂಹರಾಜು, ವಿನಯ್ ಹಾಗೂ ಪರಮೇಶ್ಗೆ ಜೀವಾವಧಿ ಶಿಕ್ಷೆ ಹಾಗೂ ಒಂದೂವರೆ ಲಕ್ಷ ದಂಡ ವಿಧಿಸಿದ್ದಾರೆ.
2011 ರಿಂದ ಸುಮಾರು 2 ವರ್ಷಗಳ ಕಾಲ ಮೀನಾಕ್ಷಿ ಹಾಗೂ ದಿಲೀಪ್ ಪರಸ್ಪರ ಪ್ರೀತಿಸಿದ್ದರು. ಆ ನಂತರ ಮನೆಯಲ್ಲಿ ನೋಡಿದ ಹುಡುಗನೊಂದಿಗೆ ಮದುವೆಯಾಗಲು ಮೀನಾಕ್ಷಿ ಸಮ್ಮತಿಸಿದ್ದಳು. ಮುಂದೆ ವೈವಾಹಿಕ ಜೀವನಕ್ಕೆ ತೊಂದರೆ ಕೊಡಬಹುದೆಂಬ ಕಾರಣದಿಂದಾಗಿ ಭಾವಿ ಪತಿಯೊಂದಿಗೆ ಸೇರಿ 2013 ಫೆಬ್ರವರಿ 14ರ ಪ್ರೇಮಿಗಳ ದಿನದಂದು ಚಿಕ್ಕಮಗಳೂರು ಜಿಲ್ಲೆಯ ಕಳಸಾಪುರ ಸೇತುವೆ ಬಳಿ ಕಾರ್ನಿಂದ ಡಿಕ್ಕಿ ಹೊಡೆದು ದಿಲೀಪ್ ನನ್ನು ಕೊಲೆ ಮಾಡಿದ್ದರು.
ಸೋಜಿಗವೆಂದರೆ ಪ್ರಿಯಕರನನ್ನು ಕೊಲೆ ಮಾಡಿದ ಮಾರನೇ ದಿನವೇ 2013ರ ಫೆಬ್ರವರಿ 15ರಂದು ಮೀನಾಕ್ಷಿ ಪ್ರತಾಪ್ನನ್ನು ಮದುವೆಯಾಗಿದ್ದರು. ಕೊಲೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿಕೊಂಡಿದ್ದ ಚಿಕ್ಕಮಗಳೂರು ಗ್ರಾಮಾಂತರ ಪೊಲೀಸರು ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದರು
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


