ಉಸ್ತಾದ್ ಅಮ್ಜದ್ ಅಲಿ ಖಾನ್ ಕೈ ಸೇರಿದ ಸರೋದ್

ನವದೆಹಲಿ: ಲಂಡನ್ನಿಂದ ಸ್ವದೇಶಕ್ಕೆ ಮರಳುವಾಗ ಬ್ರಿಟಿಷ್ ಏರ್ವೇಸ್ನಲ್ಲಿ ನಾಪತ್ತೆಯಾಗಿದ್ದ ಸರೋದ್ ವಾದನ ಪುನಃ ಉಸ್ತಾದ್ ಅಮ್ಜದ್ ಅಲಿ ಖಾನ್ ಅವರ ಕೈ ಸೇರಿದೆ.
ಪದ್ಮ ವಿಭೂಷಣ ಪ್ರಶಸ್ತಿ ವಿಜೇತ ಖಾನ್ ಅವರು ಸುಮಾರು 45 ವರ್ಷಗಳಿಂದ ಈ ಸರೋದ್ ನುಡಿಸುತ್ತಿದ್ದು, ಅದನ್ನು ತಮ್ಮ ಆತ್ಮ ಎಂದೇ ಪರಿಗಣಿಸಿದ್ದರು. ಸರೋದ್ ನಾಪತ್ತೆಯಾಗಿದ್ದರಿಂದ ಚಿಂತಾಕ್ರಾಂತರಾಗಿದ್ದ ಅವರು, ಇದೀಗ ತಮ್ಮ ಸರೋದ್ ವಾದನ ಕೈ ಸೇರಿರುವುದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ.
ಬ್ರಿಟಿಷ್ ಏರ್ವೇಸ್ನ ಸಿಬ್ಬಂದಿಗಳು ಸರೋದ್ ವಾದನವನ್ನು ನೀಡಿದ್ದು ತುಂಬಾ ಖುಷಿಯಾಗಿದೆ. ಸರೋದ್ ನನ್ನ ಕೈ ಸೇರಿದ್ದು, ನನ್ನ ಆತ್ಮ ದೇಹವನ್ನು ಪುನಃ ಸೇರಿದಂತಾಗಿದೆ ಎಂದು ಟ್ವೀಟಿಸಿದ್ದಾರೆ.
ಲಂಡನ್ನ ಡಾರ್ಟಿಂಗ್ಟನ್ ಕಾಲೇಜಿನಲ್ಲಿ ರಬೀಂದ್ರನಾಥ ಟ್ಯಾಗೋರ್ ಜೀವನ ಸಂಭ್ರಮ ಎಂಬ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಕಾರ್ಯಕ್ರಮ ಮುಗಿಸಿ ತಮ್ಮ ಪತ್ನಿ ಶುಭಲಕ್ಷ್ಮಿಯೊಂದಿಗೆ ಬ್ರಿಟಿಷ್ ಏರ್ವೇಸ್ ವಿಮಾನದಲ್ಲಿ ಜೂ.28ರ ರಾತ್ರಿ ಭಾರತಕ್ಕೆ ತೆರಳಿದರು. ಆದರೆ ಅವರ ಸರೋದ್ ದೆಹಲಿ ವಿಮಾನ ನಿಲ್ದಾಣ ಸೇರಲಿಲ್ಲ. 5 ಗಂಟೆಗಳ ಕಾಲ ಕಾದರೂ ಸರೋದ್ ಬಾರದಿದ್ದಾಗ ಖಾನ್ ದೂರು ಸಲ್ಲಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


