ಈಗಿನ ಸುದ್ದಿ

ಮಾಯವಾಯಿತು ಮಾಯಾವತಿ ಪಕ್ಷ: ಬಿಎಸ್‌ಪಿ ಸಾಧನೆ ಶೂನ್ಯ

ಮಾಯವಾಯಿತು ಮಾಯಾವತಿ ಪಕ್ಷ: ಬಿಎಸ್‌ಪಿ ಸಾಧನೆ ಶೂನ್ಯ
Published On :

ಲಖನೌ: ಲೋಕಸಭೆ ಚುನಾವಣೆಯಲ್ಲಿ ಮಾಯಾವತಿ ಅವರ ಬಹುಜನ ಸಮಾಜ ಪಕ್ಷ(ಬಿಎಸ್‌ಪ) ಹೀನಾಯ ಸೋಲು ಅನುಭವಿಸಿದೆ.

ಈ ಹಿಂದೆ ಬಿಜೆಪಿಗೆ ತನ್ನ ಬೆಂಬಲ ಎಂದೂ ಇಲ್ಲವೆಂದು ಮಾಯಾವತಿ ಅವರು ಹೇಳಿದ್ದರು. ಆದರೀಗ 0 ಸ್ಥಾನಗಳನು'ಗೆದ್ದಿರುವ' ಬಿಎಸ್‌ಪಿಯ ಬೆಂಬಲ ಯಾವ ಪಕ್ಷಕ್ಕೂ ಬೇಡ!

15ನೇ ಲೋಕಸಭಾ ಚುನಾವಣೆಯಲ್ಲಿ ಅತಿ ದೊಡ್ಡ ಪಕ್ಷಗಳ ಪೈಕಿ ಬಿಎಸ್‌ಪಿ ನಾಲ್ಕನೇ ಸ್ಥಾನ ಪಡೆದಿತ್ತು. ಉತ್ತರ ಪ್ರದೇಶದಲ್ಲಿ 2009ರ ಲೋಕಸಭಾ ಚುನಾವಣೆಯಲ್ಲಿ ದ್ವಿತೀಯ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ ಬಿಎಸ್‌ಪಿ ಈ ಬಾರಿ ಸುಳಿವಿಲ್ಲದೆ 'ಮಾಯ'ವಾಗಿದೆ!

1995ರ ಜೂ.3ರಲ್ಲಿ ಮುಲಾಯಂ ಸಿಂಗ್ ಯಾದವ್‌ರವರ ಸಮಾಜವಾದಿ ಪಕ್ಷದಿಂದ ಬೇರಾಗಲು ಬಿಜೆಪಿಯ ಮೊರೆ ಹೋಗಿದ್ದ ಮಾಯಾವತಿ, ಉತ್ತರ ಪ್ರದೇಶದ ಮುಖ್ಯಮಂತ್ರಿಯಾದರು. ಆದರೆ 1995ರ ಅಕ್ಟೋಬರ್‌ನಲ್ಲಿ ಬಿಎಸ್‌ಪಿಗೆ ನೀಡಿದ ಬೆಂಬಲವನ್ನು ಬಿಜೆಪಿ ಹಿಂಪಡೆಯಿತು.

2007ರ ಮೇ 11ರಲ್ಲಿ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಬಹುಮತದೊಂದಿಗೆ ಗೆಲವು ಸಾಧಿಸಿತ್ತು ಬಿಎಸ್‌ಪಿ. ಅತಿ ದೊಡ್ಡ ರಾಷ್ಟ್ರೀಯ ಪಕ್ಷಗಳ ಸಾಲಿನಲ್ಲಿ ಮೂರನೇ ಸ್ಥಾನದಲ್ಲಿದ್ದ ಬಿಎಸ್‌ಪಿ ಈಗ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅಲೆಯಲ್ಲಿ ಸಂಪೂರ್ಣವಾಗಿ ಕೊಚ್ಚಿಕೊಂಡು ಹೋಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.