ಈಗಿನ ಸುದ್ದಿ

ಬಡವರ ಉದ್ಧಾರ ನಮ್ಮ ಸರ್ಕಾರದ ಮುಖ್ಯ ಗುರಿ: ಭಾವುಕ ಮೋದಿಯ ಭರವಸೆ

ಬಡವರ ಉದ್ಧಾರ ನಮ್ಮ ಸರ್ಕಾರದ ಮುಖ್ಯ ಗುರಿ: ಭಾವುಕ ಮೋದಿಯ ಭರವಸೆ
Published On :

ನವದೆಹಲಿ: ಬಡವರ ಉದ್ಧಾರ ನಮ್ಮ ಸರ್ಕಾರದ ಮುಖ್ಯ ಗುರು ಎಂದು ನಿಯೋಜಿತ ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಹೇಳಿದ್ದಾರೆ.

ಎನ್ಡಿಎ ಸಂಸದೀಯ ಪಕ್ಷದ ಸಭೆಯಲ್ಲಿ ನಾಯಕನಾಗಿ ಆಯ್ಕೆಯಾದ ಬಳಿಕ ಮಾತನಾಡಿದ ಮೋದಿ, ಬಡ ಕುಟುಂಬದ ವ್ಯಕ್ತಿ ಈ ದೇಶದ ಪ್ರಧಾನಿಯಾಗಿದ್ದಾನೆ. ಇಂದು ಒಬ್ಬ ಬಡ ವ್ಯಕ್ತಿ ಪ್ರಧಾನಿಯಾಗುವುದಕ್ಕೆ ಈ ದೇಶದ ಸಂವಿಧಾನ ಕಾರಣ. ಹೀಗಾಗಿ ನಾನು ಸಂವಿಧಾನವನ್ನು ಗೌರವಿಸುತ್ತೇನೆ ಎಂದು ಎಂದು ಹೇಳಿದರು.

ಬಿಜೆಪಿ ಅಧ್ಯಕ್ಷ ರಾಜನಾಥ್ ಸಿಂಗ್ ಹಾಗೂ ಬಿಜೆಪಿಯ ಹಿರಿಯ ನಾಯಕ ಎಲ್.ಕೆ.ಆಡ್ವಾಣಿ ಅವರಿಗೆ ನಾನು ಆಭಾರಿಯಾಗಿದ್ದೇನೆ ಎಂದು ಮೋದಿ ಹೇಳಿದರು. ಅಲ್ಲದೆ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರನ್ನು ನೆನೆದು ಭಾವುಕರಾದ ಮೋದಿ, ಈ ಸಂದರ್ಭದಲ್ಲಿ ಅವರು ಉಪಸ್ಥಿತರಿದಿದ್ದರೆ ಈ ಕ್ಷಣದ ಮೌಲ್ಯ ಇನ್ನೂ ಹೆಚ್ಚಾಗುತ್ತಿತ್ತು ಎಂದರು.

ಆಡ್ವಾಣಿ ಅವರು ಒಂದು ಪದ ಬಳಸಿದರು. ಮೋದಿಯ ಕೃಪೆ ಎಂದು. ನಾನು ಭಾರತ ಮಾತೆ ಹಾಗೂ ಬಿಜೆಪಿಯ ಮಗ. ಮಗನ ಕೃಪೆ ತಾಯಿಗೆ ಇರಲ್ಲ. ಆದರೆ ತಾಯಿಯ ಕೃಪೆ ಮಗನಿಗೆ ಇರುತ್ತದೆ. ಮಗ ಎಂದಿಗೂ ತಾಯಿಯ ಸೇವೆ ಮಾಡಬೇಕು ಎಂದು ನುಡಿದರು. ಇದಕ್ಕು ಮುನ್ನ ಮಾತನಾಡಿದ್ದ ಆಡ್ವಾಣಿ, ನರೇಂದ್ರ ಮೋದಿ ಅವರ ಕೃಪೆಯಿಂದ ಬಿಜೆಪಿ ಕನಸು ನನಸಾಗಿದೆ ಎಂದು ಹೇಳಿದ್ದರು.

ಇದೇ ವೇಳೆ ಮೋದಿ ತಮ್ಮ ಗೆಲುವಿನ ಹಾದಿಯನ್ನು ವಿವರಿಸಿದ ಮೋದಿ, ಸೆ.13ರಂದು ನನ್ನನ್ನು ಪ್ರಚಾರ ಸಮಿತಿ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು. ಅಂದಿನಿಂದ ನನ್ನ ಮಹತ್ವದ ಅಗ್ನಿ ಪರೀಕ್ಷೆ ಆರಂಭವಾಯಿತು. ಸೆ.15ರಿಂದ ಮೇ 10ರವರೆಗೆ ನಾನು ನಿರಂತರವಾಗಿ ಪ್ರಚಾರ ಕಾರ್ಯದಲ್ಲಿ ತೊಡಗಿದೆ ಎಂದರು.

ಗುಜರಾತ್ ಮುಖ್ಯಮಂತ್ರಿಯಾಗುವ ಮೂಲಕ ನಾನು ವಿಧಾನಸಭೆ ಪ್ರವೇಶ ಮಾಡಿದ್ದೇ, ಇದೀಗ ಪ್ರಧಾನಿಯಾಗುವ ಮೂಲಕ ಸಂಸತ್ ಪ್ರವೇಶ ಮಾಡಿದ್ದೇನೆ ಎಂದು ಮೋದಿ ಹೇಳಿದರು.

ಪ್ರಜಾಪ್ರಭುತ್ವದ ದೇಗುಲಕ್ಕೆ ನಮೋ ನಮಸ್ಕಾರ
ಮೊದಲ ಬಾರಿಗೆ ಸಂಸತ್ ಪ್ರವೇಶಿಸಿಸುವ ಮುನ್ನ ಮೋದಿ ಸಂಸತ್ ಭವನದ ಮೆಟ್ಟಿಗಳಿಗೆ ಹಣೆಯೊತ್ತಿ ನಮಸ್ಕರಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.