ಈಗಿನ ಸುದ್ದಿ

ತೆಂಡೂಲ್ಕರ್ ಪುಟ್ಬಾಲ್ ಟೀಂ ಹೆಸರು ಕೇರಳ ಬ್ಲಾಸ್ಟರ್ಸ್

ತೆಂಡೂಲ್ಕರ್ ಪುಟ್ಬಾಲ್ ಟೀಂ ಹೆಸರು ಕೇರಳ ಬ್ಲಾಸ್ಟರ್ಸ್
Published On :

ತಿರುವನಂತಪುರಂ: ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್ ) ಪುಟ್ಬಾಲ್ ಟೂರ್ನಮೆಂಟ್‌ನಲ್ಲಿ ಆಡಲಿರುವ ಕೊಚ್ಚಿ ಟೀಂನ ಸಹ ಮಾಲೀಕರಾಗಿರುವ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ತಮ್ಮ ತಂಡಕ್ಕೆ ಕೇರಳ ಬ್ಲಾಸ್ಟರ್ಸ್ ಎಂದು ಹೆಸರಿಟ್ಟಿದ್ದಾರೆ.

ಮಂಗಳವಾರ ಕೇರಳ ಮುಖ್ಯಮಂತ್ರಿ ಉಮ್ಮನ್ ಚಾಂಡಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ ನಂತರ ಉಮ್ಮನ್ ಚಾಂಡಿ ಈ ಹೆಸರನ್ನು ಘೋಷಿಸಿದ್ದಾರೆ.

ಅದೇ ನೇಳೆ ಜನವರಿ-ಫೆಬ್ರವರಿ 2015ರಲ್ಲಿ ಕೇರಳದಲ್ಲಿ ನಡೆಯಲಿರುವ ದೇಶೀಯ ಕ್ರೀಡಾಕೂಟದ ಗುಡ್ ವಿಲ್ ಅಂಬಾಸಿಡರ್ ಆಗಲು ಚಾಂಡಿ ಸಚಿನ್‌ರಲ್ಲಿ ಮನವಿ ಮಾಡಿದ್ದು, ಸಚಿನ್ ಇದಕ್ಕೆ ಒಪ್ಪಿಕೊಂಡಿದ್ದಾರೆ.

ವಿಮಾನ ನಿಲ್ದಾಣದಲ್ಲಿ ಸಚಿನ್ ಅವರಿಗೆ ಅದ್ದೂರಿ ಸ್ವಾಗತ ನೀಡಲಾಗಿತ್ತು.

ಮುಖ್ಯಮಂತ್ರಿ ಚಾಂಡಿ ಅವರನ್ನು ಭೇಟಿ ಮಾಡಿದ ನಂತರ ಮಾಧ್ಯಮದವರಲ್ಲಿ ಮಾತನಾಡಿದ ಸಚಿನ್ ಕೇರಳಿಗರ ಪ್ರೀತಿ ಮತ್ತು ವಾತ್ಸಲ್ಯದಿಂದ ನನಗೆ ಅತೀವ ಸಂತೋಷವಾಗಿದ್ದು, ನಾನು ಮೂಕವಿಸ್ಮಿತ ಎಂದಿದ್ದಾರೆ.

ನನ್ನನ್ನು ಜನರು ಮಾಸ್ಟರ್ ಬ್ಲಾಸ್ಟರ್ ಎಂದು ಕರೆಯುತ್ತಿದ್ದಾರೆ, ಆದ್ದರಿಂದಲೇ ತನ್ನ ತಂಡಕ್ಕೆ ಈ ರೀತಿ ಹೆಸರಿಟ್ಟಿದ್ದೇನೆ ಎಂದು ಸಚಿನ್ ಹೇಳಿದ್ದಾರೆ.

ನಾನು ಕ್ರಿಕೆಟ್ ಆಡುತ್ತಾ ಬೆಳೆದವನು. ಆದರೆ ನನಗೆ ಹಾಕಿ, ಫುಟ್ಬಾಲ್ , ಬ್ಯಾಡ್ಮಿಂಟನ್ ಆಟಗಳಲ್ಲಿಯೂ ಆಸಕ್ತಿ ಇದೆ ಎಂಬುದು ಹೆಚ್ಚಿನವರಿಗೆ ಗೊತ್ತಿಲ್ಲ ಎಂದು ಹೇಳಿದ ಸಚಿನ್ ಇಂಡಿಯನ್ ಸೂಪರ್ ಲೀಗ್ ದೇಶದಲ್ಲಿ ಫುಟ್ಬಾಲ್ ಆಟಕ್ಕೆ ಹೆಚ್ಚು ಪ್ರೋತ್ಸಾಹ ನೀಡುವಲ್ಲಿ ಯಶಸ್ವಿಯಾಗಲಿದೆ ಎಂದು ನುಡಿದಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.