ಈಗಿನ ಸುದ್ದಿ

ಸಂಬಂಧಿಕರನ್ನು ನೇಮಕಾತಿ ಮಾಡಬೇಡಿ: ಸಚಿವರಿಗೆ ಮೋದಿ ಸಲಹೆ

ಸಂಬಂಧಿಕರನ್ನು ನೇಮಕಾತಿ ಮಾಡಬೇಡಿ: ಸಚಿವರಿಗೆ ಮೋದಿ ಸಲಹೆ
Published On :

ನವದೆಹಲಿ: ತನ್ನದೇ ಶೈಲಿಯಲ್ಲಿ ಕೆಲಸ ಮಾಡುವುದು ನರೇಂದ್ರ ಮೋದಿಯವರ ಸ್ವಭಾವಗಳಲ್ಲೊಂದು. ಗುಜರಾತ್ ಮಾದರಿಯಂತೆ ಕೇಂದ್ರದಲ್ಲಿಯೂ ಆಡಳಿತ ನಡೆಸಲು ಸಿದ್ಧರಾಗಿರುವ ಮೋದಿ, ಸಿಬ್ಬಂದಿ ಸಚಿವಾಲಯ, ಸಾರ್ವಜನಿಕ ಹಿತಾಸಕ್ತಿ ಹಾಗು ಪರ್ಸನಲ್  ಆ್ಯಂಡ್ ಟ್ರೈನಿಂಗ್‌ನ ಪಿಂಚಣಿದಾರರ ಇಲಾಖೆಯಲ್ಲಿ ಯಾವ ಸಚಿವರೂ ತಮ್ಮ ಸಂಬಂಧಿಕರನ್ನು ನೇಮಕ ಮಾಡಬಾರದು ಎಂದು ಮೋದಿ ಹೇಳಿದ್ದಾರೆ.

ಮೋದಿ ಪ್ರಧಾನಿ ಅಧಿಕಾರ ಸ್ವೀಕರಿಸಿದ ಕೂಡಲೇ ಸಚಿವಾಲಯದ ಕಾರ್ಯಗಳಲ್ಲಿ ಯಾವುದೇ ಸಚಿವರು ತಮ್ಮ ಸಂಬಂಧಿಕರನ್ನು ನಿಯೋಜಿಸಬಾರದು ಎಂಬ ಆದೇಶಕ್ಕೆ ಸಹಿಹಾಕಿದ್ದರು.

ಇದೇ ಮೊದಲ ಬಾರಿಗೆ ಪ್ರಧಾನಿಯೊಬ್ಬರು ಸಚಿವರು ಸಂಬಂಧಿಕರಿಂದ ದೂರವಿರಿ ಎಂದು ಹೇಳಿದ್ದಾರೆ.

ಈ ಹಿಂದೆ ಸಚಿವರು ತಮ್ಮ ಆಪ್ತರನ್ನು, ಸಂಬಂಧಿಕರನ್ನು ಸಚಿವರನ್ನು ಸಚಿವಾಲಯದ ಕೆಲಸಗಳಲ್ಲಿ ನೇಮಕ ಮಾಡುತ್ತಿದ್ದರು. ಈ ರೀತಿ ನೇಮಕಾತಿ ಮಾಡಿ ಅವ್ಯವಹಾರದಲ್ಲಿ ಸಿಕ್ಕಿ ಕೊಂಡ ಹಲವಾರು ಪ್ರಕರಣಗಳು ನಮ್ಮ ಮುಂದಿವೆ.

ಆದ್ದರಿಂದ ಸಂಬಂಧಿಕರು ಕಚೇರಿಯ ಕಾರ್ಯಗಳಲ್ಲಿ ಮೂಗು ತೂರಿಸದಂತೆ ಸಚಿವರು ಎಚ್ಚರವಹಿಸಬೇಕೆಂದು ಮೋದಿ ಹೇಳಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.