ಈಗಿನ ಸುದ್ದಿ

ಛೋಟಾ ಭೀಮ್ ಆನಿಮೇಟೆಡ್ ಪಾತ್ರದೊಂದಿಗೆ ಫೋರಂ ಮಾಲ್ ವಾರ್ಷಿಕೋತ್ಸವ

ಛೋಟಾ ಭೀಮ್ ಆನಿಮೇಟೆಡ್ ಪಾತ್ರದೊಂದಿಗೆ ಫೋರಂ ಮಾಲ್ ವಾರ್ಷಿಕೋತ್ಸವ
Published On :

ಬೆಂಗಳೂರು: ಭಾರತದ ಹೆಸರಾಂತ ಹಾಗೂ ಅಚ್ಚುಮೆಚ್ಚಿನ ಆನಿಮೇಟೆಡ್ ಪಾತ್ರದ ಜೊತೆಗೆ ಸಂಪೂರ್ಣ ವಿನೋದ ಹಾಗೂ ಮನೋರಂಜನೆಯನ್ನು ಪಡೆಯಲು ನೀವು ಉತ್ಸುಕರಾಗಿದ್ದಲ್ಲಿ, ಇನ್ನು ನೀವು ಕಾಯಬೇಕಾಗಿಲ್ಲ! 2014ರ ಮೇ 30ರಿಂದ ಜೂನ್ 8ರವರೆಗೆ ಫೋರಂ ವ್ಯಾಲ್ಯೂ ಮಾಲ್, ವೈಟ್ಫೀಲ್ಡ್ 5ನೇ ವಾರ್ಷಿಕೋತ್ಸವವನ್ನು ಆಚರಿಸಿಕೊಳ್ಳುತ್ತಿದೆ. ಈ ಸಂದರ್ಭದಲ್ಲಿ ಛೋಟಾ ಭೀಮ್ ಹಾಗೂ ತಂಡದ ವೇಶಧಾರಿಗಳೊಂದಿಗೆ ಕಾಲ ಕಳೆಯುವ 'ಜೀವಮಾನದಲ್ಲಿ ಒಂದು ಬಾರಿ'ಯ ಅವಕಾಶವನ್ನು ಕಲ್ಪಿಸಿಕೊಡುತ್ತಿದೆ.

ವೈಟ್ಫೀಲ್ಡ್ನಲ್ಲಿರುವ ಫೋರಂ ವ್ಯಾಲ್ಯೂ ಮಾಲ್ನ 5ನೇ ವಾರ್ಷಿಕೋತ್ಸ ಸಮಾರಂಭವು ನಗರದ ಮಕ್ಕಳಿಗೆ ವಿಶೇಷ ಅನುಭವವನ್ನು ನೀಡಲಿದೆ. ಕುಂಗ್-ಫೂ ಫೈಟಿಂಗ್, ಮಾಸ್ಕ್ ತಯಾರಿಕೆ, ಕ್ಲೇ ಮಾಡೆಲಿಂಗ್, ಫೇಸ್ ಪೇಯಿಂಟಿಂಗ್ ಹಾಗೂ ನೃತ್ಯ ಕಾರ್ಯಕ್ರಮಗಳು ನಡೆಯಲಿವೆ. ಅಭಿಮಾನಿಗಳು, ಜೂನ್ 7 ಹಾಗೂ 8ರಂದು ತಮ್ಮ ನೆಚ್ಚಿನ ಪಾತ್ರ ಛೋಟಾ ಭೀಮ್ ಹಾಗೂ ತಂಡವನ್ನು ಭೇಟಿಯಾಗುವ ಅವಕಾಶವನ್ನು ಪಡೆಯಲಿದ್ದಾರೆ.

ಈ 10 ದಿನಗಳ ಅವಧಿಯ ಆಚರಣೆಯಲ್ಲಿ, ಫೋರಂ ವ್ಯಾಲ್ಯೂ ಮಾಲ್ನಲ್ಲಿ ಗ್ರಾಹಕರಿಗೆ ವಿವಿಧ ಅನುಭವಗಳು ಎದುರಾಗಲಿದೆ. ವಿಶೇಷ 'ಬಂಜಾರ ಮಸ್ತಿ ಝೋನ್'ನಲ್ಲಿ ಮಕ್ಕಳು 'ಛೋಟಾ ಭೀಮ್'ಗೆ ಸಂಬಂಧಿಸಿದ ಕಥೆಗಳು ಹಾಗೂ ವಿಷಯವಿರುವ ವಿವಿಧ ಚಟುವಟಿಕೆಗಳಲ್ಲಿ ಭಾಗವಹಿಸಬಹುದು. ಜಗ್ಲಿಂಗ್, ಮಾಯಾಜಾಲ, ಹೂಪ್ಲಾ ಹಾಗೂ ಸ್ಟಿಲ್ಟ್ ವಾಕರ್ಸ್ಗಳು ನೆರೆದಿರುವವರ ಮನರಂಜಿಸಲಿದ್ದಾರೆ.

ಈ 10 ದಿನಗಳ ವಿಶೇಷ ಕಾರ್ಯಕ್ರಮದಲ್ಲಿ, ಛೋಟಾ ಭೀಮ್ನೊಂದಿಗೆ ನೀವು ಭಾಗವಹಿಸಿ.
ಕಾರ್ಯಕ್ರಮದ ಅವಧಿ: 30ನೇ ಮೇ - 8ನೇ ಜೂನ್
ವಿಚಾರಣೆಗಳಿಗಾಗಿ ಕರೆ ಮಾಡಿ: 080 25043800
ಸ್ಥಳ: ಫೋರಂ ವ್ಯಾಲ್ಯೂ ಮಾಲ್, ವೈಟ್ಫೀಲ್?

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.