ಈಗಿನ ಸುದ್ದಿ

ನಗರ ಪೊಲೀಸ್ ಆಯುಕ್ತರ ವಿರುದ್ಧ ಎಡಿಜಿಪಿ ಡಾ.ರವೀಂದ್ರನಾಥ್ ಆರೋಪ

ನಗರ ಪೊಲೀಸ್ ಆಯುಕ್ತರ ವಿರುದ್ಧ ಎಡಿಜಿಪಿ ಡಾ.ರವೀಂದ್ರನಾಥ್ ಆರೋಪ
Published On :

ಬೆಂಗಳೂರು: ಬೆಂಗಳೂರಿನ ಕನ್ನಿಂಗ್ ಹ್ಯಾಮ್ ರಸ್ತೆಯಲ್ಲಿರುವ ಕಾಫಿ ಶಾಪ್ನಲ್ಲಿ ಯುವತಿಯ ಫೋಟೋ ಕ್ಲಿಕ್ಕಿಸಿದ ಪ್ರಕರಣದ ಆರೋಪಿಯಾಗಿರುವ ಎಡಿಜಿಪಿ- ಕೆಎಸ್ಆರ್ಪಿ ಡಾ ಪಿ.ರವೀಂದ್ರನಾಥ್ ಅವರು ಈ ಘಟನೆಯ ಹಿಂದೆ ಪೊಲೀಸರದ್ದೇ ಕೈವಾಡವಿದೆ ಎಂದು ದೂರಿದ್ದಾರೆ.

ಇದೆಲ್ಲಾ ಪೂರ್ವಯೋಜಿತ ಕೃತ್ಯಗಳು. ನಗರ ಪೊಲೀಸ್ ಆಯುಕ್ತ ರಾಘವೇಂದ್ರ ಔರಾದ್ಕರ್ ಷಡ್ಯಂತ್ರ ರಚಿಸಿ ನನ್ನನ್ನು ಸಿಲುಕಿಸಿದ್ದಾರೆ. ಫೋಟೋ ಕ್ಲಿಕ್ಕಿಸಿದ್ದಾರೆ ಎಂದು ಆರೋಪಿಸಿರುವ ಹುಡುಗಿ ಮತ್ತು ಆಕೆಯ ಸಹಾಯಕ್ಕೆ ಬಂದ ಶ್ರೀಧರ್ ಎಂಬ ವ್ಯಕ್ತಿಯನ್ನೂ ಅವರೇ  ಕಳಿಸಿದ್ದಾರೆ. ನಾನು ಕಾಫಿಶಾಪ್ಗೆ ಹೋಗುವುದು ಹೈಗ್ರೌಂಡ್ಸ್ ಪೊಲೀಸರಿಗೆ ಗೊತ್ತಿತ್ತು. ಇದೆಲ್ಲಾ ಹೈಗ್ರೌಂಡ್ಸ್ ಪೊಲೀಸರದ್ದೇ ಸಂಚು ಎಂದು ಡಾ. ಪಿ.ರವೀಂದ್ರನಾಥ್ ಬಹಿರಂಗ ಆರೋಪ ಮಾಡಿದ್ದಾರೆ.

ಇನ್ಮುಂದೆ ಎಡಿಜಿಪಿ ಹುದ್ದೆಯಲ್ಲಿ ಮುಂದುವರಿಯಲು ಇಷ್ಟವಿಲ್ಲ ಎಂದು ಹೇಳಿದ ಅವರು, ಇಂದು ನನ್ನ ವಿರುದ್ಧ ಮತ್ತೊಂದು ಕೇಸು ದಾಖಲಾಗಿದೆ. ಆದ್ದರಿಂದ ಈ ಪ್ರಕರಣದ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಯಲಿ ಎಂದಿದ್ದಾರೆ.

ಆದಾಗ್ಯೂ, ಡಾ.ರವೀಂದ್ರನಾಥ್ ಅವರ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ಬೆಂಗಳೂರು ನಗರ ಪೊಲೀಸ್ ಆಯುಕ್ತ ಔರಾದ್ಕರ್ ನಾನು ಯಾವುದೇ ಷಡ್ಯಂತ್ರ ನಡೆಸಿಲ್ಲ. ಯುವತಿಯ ಹೇಳಿಕೆಯ ಮೇರೆಗೆ ತನಿಖೆ ನಡೆಯುತ್ತಿದೆ ಎಂದು ಹೇಳಿದ್ದಾರೆ.

ಘಟನೆ ಏನು? :  2014 ಮೇ 26 ರಂದು ಬೆಂಗಳೂರಿನ ಕನ್ನಿಂಗ್ ಹ್ಯಾಮ್ ರಸ್ತೆಯಲ್ಲಿರುವ ಕಾಫಿಶಾಪ್ನಲ್ಲಿ ಬೆಳಗ್ಗೆ 10.30ಕ್ಕೆ ಫ್ರೀಲ್ಯಾನ್ಸ್ ಜರ್ನಲಿಸ್ಟ್ ಆಗಿರುವ ಯುವತಿಯೊಬ್ಬಳು ತನ್ನ ಕಸಿನ್ ಜತೆ ಕುಳಿತು ಮಾತನಾಡುತ್ತಿದ್ದ ವೇಳೆ ಪಕ್ಕದಲ್ಲಿ ಕುಳಿತಿದ್ದ ವ್ಯಕ್ತಿಯೊಬ್ಬರು ಆ ಯುವತಿಯ ಫೋಟೋಗಳನ್ನು ಕ್ಲಿಕ್ ಮಾಡಿದ್ದಾರೆ. ಇದನ್ನು ಗಮನಿಸಿದ ಯುವತಿ ಮತ್ತು ಆಕೆಯ ಕಸಿನ್ ಫೋಟೋ ಕ್ಲಿಕ್ಕಿಸಿದ ವ್ಯಕ್ತಿಯನ್ನು ವಿಚಾರಿಸಿದಾಗ ಆತ ಕಾಫಿಶಾಪ್ನಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದಾರೆ. ಅಲ್ಲಿಂದ ಆತನನ್ನು ಹಿಡಿದು ಮೊಬೈಲ್ ಪರಿಶೀಲಿಸಿದಾಗ ಅದರಲ್ಲಿ ಆತ ಸೆರೆ ಹಿಡಿದ ಯುವತಿಯ ಅಶ್ಲೀಲ ಫೋಟೋಗಳು ಪತ್ತೆಯಾಗಿತ್ತು. ಆತನನ್ನು ತರಾಟೆಗೆ ತೆಗೆದುಕೊಂಡಾಗ ತಾನು ಯಾರೆಂದು ಗೊತ್ತಾ? ಪೊಲೀಸರಿಗೆ ಈ ಬಗ್ಗೆ ದೂರು ನೀಡಬೇಡಿ ಎಂದು ಬೆದರಿಕೆಯನ್ನೂ ಒಡ್ಡಿದ್ದಾನೆ ಎಂದು ಯುವತಿ ತಮ್ಮ ದೂರಿನಲ್ಲಿ ಹೇಳಿದ್ದಾಳೆ. ತರಾಟೆಗೆ ತೆಗೆದುಕೊಂಡಾದ ಮೇಲೆ ಆ ವ್ಯಕ್ತಿ ತಾನು ಪೊಲೀಸ್ ಅಧಿಕಾರಿಯೆಂದು ಒಪ್ಪಿಕೊಂಡಿದರು. ಆಮೇಲೆ ನಮಗೆ ಆ ವ್ಯಕ್ತಿ ಎಡಿಜಿಪಿ-ಕೆಎಸ್ಆರ್ಪಿ ಡಾ ಪಿ.ರವೀಂದ್ರ ನಾಥ್ ಎಂಬುದು ತಿಳಿದು ಬಂತು ಎಂದು ಯುವತಿ ಹೇಳಿದ್ದಾಳೆ.

ಪ್ರಸ್ತುತ ಘಟನೆಯ ಬಗ್ಗೆ ಯುವತಿ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಈ ಬಗ್ಗೆ ಡಾ ಪಿ.ರವೀಂದ್ರ ನಾಥ್ ಅವರನ್ನು ಪೊಲೀಸರು ವಿಚಾರಣೆಗೊಳಪಡಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.