ನನ್ನ ಕೆಲಸ ನೋಡಿ ತೀರ್ಮಾನಿಸಿ: ಸ್ಮೃತಿ ಇರಾನಿ

ನವದೆಹಲಿ: ತಮ್ಮ ಪದವಿ ಕುರಿತಾಗಿ ಎದ್ದಿರುವ ಟೀಕೆಗಳಿಗೆ ಖಡಕ್ಕಾಗಿ ಉತ್ತರಿಸಿರುವ ಕೇಂದ್ರ ಮಾನವ ಸಂಪನ್ಮೂಲ ಸಚಿವೆ ಸ್ಮೃತಿ ಇರಾನಿ ಅವರು, ನನ್ನ ಪದವಿಯ ಬಗ್ಗೆ ಚರ್ಚಿಸುವ ಬದಲು ನನ್ನ ಕೆಲಸ ನೋಡಿ ತೀರ್ಮಾನಿಸಿ ಎಂದು ಗುರುವಾರ ಗುಡುಗಿದ್ದಾರೆ.
ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಸ್ಮೃತಿ ಇರಾನಿ , ತಮ್ಮ ಪದವಿ ಕುರಿತಾಗಿ ಮಾತನಾಡುತ್ತಿರುವ ಟೀಕಕಾರರ ವಿರುದ್ಧ ಹರಿಹಾಯ್ದಿದ್ದಾರೆ. ಯಾರೊಬ್ಬರ ಸಾಮಥ್ಯವನ್ನು ಅಳೆಯಬೇಕಾದರೆ ಅದು ಅವರ ಪದವಿಯಿಂದಲ್ಲ ಅವರ ಕಾರ್ಯವೈಖರಿ ಮೂಲಕ ಅಳೆಯಬೇಕು ಎಂದು ಹೇಳಿದ್ದಾರೆ.
ನಾನು ಕೆಲಸ ಮಾಡುವ ಸದುದ್ದೇಶದಿಂದ ಸಚಿವೆಯಾಗಿ ಜವಾಬ್ದಾರಿ ವಹಿಸಿಕೊಂಡಿದ್ದೇನೆ. ನನ್ನ ಗಮನವನ್ನು ಬೇರೊಂದೆಡೆ ಸೆಳೆಯಲು ಈ ರೀತಿ ಟೀಕೆಗಳನ್ನು ಮಾಡುತ್ತಿದ್ದಾರೆ. ಹೀಗಾಗಿ ನನ್ನ ಸಂಪೂರ್ಣ ಗಮನವನ್ನು ನನಗೆ ನೀಡುವ ಖಾತೆಯ ಕೆಲಸವನ್ನು ಪರಿಪೂರ್ಣವಾಗಿ ನಿರ್ವಹಿಸುವುದರ ಮೇಲೆ ಕೇಂದ್ರಿಕರಿಸುತ್ತೇನೆ ಎಂದರು. ಒಂದು ವೇಳೆ ಟೀಕಾಕಾರರು ನನ್ನನ್ನು ಅಳೆಯಬೇಕಾದರೆ ನನ್ನ ಖಾತೆಯ ಕೆಲಸವನ್ನು ನಾನು ಹೇಗೆ ನಿಭಾಯಿಸುತ್ತೇನೆ ಎನ್ನುವುದರ ಮೂಲಕ ನನ್ನನ್ನು ಅಳೆಯಬಹುದು ಎಂದು ಸ್ಮೃತಿ ಹೇಳಿದರು.
ಮೋದಿ ಸಂಪುಟದಲ್ಲಿ ಮಾನವ ಸಂಪನ್ಮೂಲ ಸಚಿವೆಯಾಗಿ ಸ್ಮೃತಿ ಇರಾನಿ ಅಧಿಕಾರ ಸ್ವೀಕರಿಸುತ್ತಿದಂತೆ ಕಾಂಗ್ರೆಸ್ ಇರಾನಿ ಅವರ ವಿದ್ಯಾರ್ಹತೆ ಕುರಿತಾಗಿ ಪ್ರಶ್ನಿಸಿದ್ದು ವಿವಾದಕ್ಕೆ ಕಾರಣವಾಯಿತು.
ನಿನ್ನೆ ಕಾಂಗ್ರೆಸ್ ನಾಯಕ ಅಜಯ್ ಮಾಕೇನ್ ಅವರು, ಮೋದಿ ಸಂಪುಟ ಹೇಗಿದೆ ಗೊತ್ತಾ? ಮಾನವ ಸಂಪನ್ಮೂಲ ಸಚಿವೆ ಸ್ಮೃತಿ ಇರಾನಿ ಒಂದು ಪದವಿ ಸಹ ಪಡೆದಿಲ್ಲ ಎಂದು ಟ್ವಿಟ್ ಮಾಡಿದ್ದರು. ಇದು ಸಾಮಾಜಿಕ ಜಾಲ ತಾಣದಲ್ಲೂ ಭಾರಿ ಚರ್ಚೆಗೆ ಗ್ರಾಸವಾಗಿದ್ದು, ಸಚಿವ ಸ್ಥಾನಕ್ಕೂ ವಿದ್ಯಾರ್ಹತೆಗೂ ತಳುಕು ಹಾಕುವುದು ಸರಿಯಲ್ಲ ಎಂದು ಬಿಜೆಪಿ ಟೀಕಿಸಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


