ಟಿಟಿಇ ತಳ್ಳಿದ ರಭಸಕ್ಕೆ ರೈಲಿನಿಂದ ಬಿದ್ದು ಮಹಿಳೆ ಸಾವು

ಮುಂಬೈ: ಮಹಾರಾಷ್ಟ್ರದ ಜಲಗಾಂವ್ನಲ್ಲಿ ಜನರಲ್ ಟೆಕೆಟ್ ತೆಗೆದ ಮಹಿಳೆಯೊಬ್ಬರು ಏಸಿ ಬೋಗಿಗೆ ಹತ್ತಿದ್ದಕ್ಕೆ ಟಿಕೇಟ್ ಪರೀಕ್ಷಕ (ಟಿಟಿಇ) ಚಲಿಸುತ್ತಿದ್ದ ರೈಲಿನಿಂದ ಮಹಿಳೆಯನ್ನು ತಳ್ಳಿದ್ದಾನೆ. ಆತ ತಳ್ಳಿದ ರಭಸಕ್ಕೆ ಮಹಿಳೆ ಆಯತಪ್ಪಿ ರೈಲಿನಿಂದ ಬಿದ್ದು ಸಾವಿಗೀಡಾದ ಘಟನೆ ಗುರುವಾರ ವರದಿಯಾಗಿದೆ.
ತರಾತುರಿಯಲ್ಲಿ ರೈಲು ಹತ್ತಿದ ಮಹಿಳೆ ಗೊತ್ತಿಲ್ಲದೇ ಏಸಿ ಬೋಗಿಯೊಳಗೆ ಪ್ರವೇಶಿಸಿದ್ದಳು. ಜನರಲ್ ಟಿಕೆಟ್ ಪಡೆದು ಏಸಿ ಬೋಗಿಗೆ ಹತ್ತಿರುವುದನ್ನು ಟಿಟಿಇ ಪ್ರಶ್ನಿಸಿದ್ದು, ಅಲ್ಲಿ ಇಬ್ಬರ ಮಧ್ಯೆ ವಾಗ್ವಾದಗಳು ನಡೆದಿವೆ. ಈ ವೇಳೆ ಟಿಟಿಇ ಆಕೆಯನ್ನು ತಳ್ಳಿದ್ದು, ಆಯತಪ್ಪಿ ಆಕೆ ರೈಲಿನಿಂದ ಬಿದ್ದು ಪ್ರಾಣ ಕಳೆದುಕೊಂಡಿದ್ದಾಳೆ ಎಂದು ಮೃತ ಮಹಿಳೆಯ ಸಂಬಂಧಿಕರು ಹೇಳಿದ್ದಾರೆ.
ಮಹಿಳೆಯ ಸಾವಿಗೆ ಕಾರಣನಾದ ಟಿಟಿಇ ಭರತ್ ಸಲುಂಕೆ ಎಂದು ಗುರುತಿಸಲಾಗಿದ್ದು, ಈತ ಕುಸ್ತಿಯಲ್ಲಿ ಪ್ರತಿಷ್ಠಿತ ಅರ್ಜುನ ಪ್ರಶಸ್ತಿ ಪಡೆದುಕೊಂಡವನಾಗಿದ್ದಾನೆ.
ಸಲುಂಕೆ ಈ ಹೊತ್ತು ಮದ್ಯಪಾನ ಮಾಡಿದ್ದರು ಎಂದು ಮಹಿಳೆಯ ಸಂಬಂಧಿಕರು ಆರೋಪಿಸಿದ್ದು, ಜಲಗಾಂವ್ ಸರ್ಕಾರಿ ರೇಲ್ವೇ ಪೊಲೀಸರು ಸಲುಂಕೆಯನ್ನು ಬಂಧಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


