ಅಧಿಕೃತ ನಿವಾಸಕ್ಕೆ ಮೋದಿ ವಾಸ್ತವ್ಯ

ನವದೆಹಲಿ: ಭಾರತದ ನೂತನ ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ 7 ರೇಸ್ ಕೋರ್ಸ್ ರೋಡ್‌ನಲ್ಲಿರುವ ತಮ್ಮ ಅಧಿಕೃತ ನಿವಾಸಕ್ಕೆ ತಮ್ಮ ವಾಸ್ತವ್ಯ ಬದಲಿಸಿದ್ದಾರೆ.
ಇಲ್ಲಿಯವರೆಗೆ ಗುಜರಾತ್ ಭವನದಲ್ಲಿ ತಾತ್ಕಾಲಿಕ ವಾಸ್ತವ್ಯ ಹೂಡಿದ್ದ ಮೋದಿ, ಇಂದು ಬೆಳಗ್ಗೆ ಪೂಜೆ ಸಲ್ಲಿಸಿದ ನಂತರ ವಾಸ್ತವ್ಯ ಬದಲಿಸಿದ್ದಾರೆ. ಇನ್ಮುಂದೆ 7 ರೇಸ್ ಕೋರ್ಸ್ ರೋಡ್‌ನಲ್ಲಿರುವ ನಿವಾಸವನ್ನೇ ಕಚೇರಿಯನ್ನಾಗಿ ಬಳಸಲಿದ್ದಾರೆ ಮೋದಿ.
ಪ್ರಧಾನಿಯವರ ಅಧಿಕೃತ ನಿವಾಸದಲ್ಲಿ ಏಕಾಂಗಿಯಾಗಿ ವಾಸ್ತವ್ಯ ಹೂಡಲಿರುವ ಮೊದಲ ಪ್ರಧಾನಿಯಾಗಿದ್ದಾರೆ ಮೋದಿ . ಇದೇ ಮನೆಯಲ್ಲಿ ವಾಸವಾಗಿದ್ದ ಅಟಲ್ ಬಿಹಾರಿ ವಾಜಪೇಯಿ ಕೂಡಾ ಬ್ರಹ್ಮಚಾರಿಯಾಗಿದ್ದರು. ಆದರೆ ಅವರೊಂದಿಗೆ ಅವರ ದತ್ತು ಮಗಳು ವಾಸವಾಗಿದ್ದಳು.
ಮೋದಿಯವರು ಏಕಾಂಗಿಯಾಗಿರುವುದರಿಂದ ಅವರ ಮನೆಯಲ್ಲಿ ಸಾಮಾನುಗಳ ಸಂಖ್ಯೆಯೂ ಕಡಿಮೆಯೇ. ಮೋದಿ ಲ್ಯಾಪ್‌ಟಾಪ್, ಐಪೋಡ್, ಟ್ಯಾಬ್ ಗಳ ಬಗ್ಗೆ ಹೆಚ್ಚು ಆಸಕ್ತಿ ಹೊಂದಿದ್ದಾರೆ. ಅದಲ್ಲದೆ ಅವರಲ್ಲಿ ವಾಚ್ ಮತ್ತು ಪೆನ್‌ಗಳ ಕಲೆಕ್ಷನ್‌ಗಳು ತುಂಬಾ ಇವೆ. ಇದರ ಜತೆಗೆ ಅವರ ಎಲ್ಲ ಡ್ರೆಸ್‌ಗಳನ್ನು ಪ್ಯಾಕ್ ಮಾಡಿ ನಿನ್ನೆ ರಾತ್ರಿಯೇ ಹೊಸ ಮನೆಗೆ ತಂದಿಡಲಾಗಿತ್ತು.
ಮೋದಿಗೆ ಇಷ್ಟವಾದ ಪುಸ್ತಕವೆಂದರೆ ರಾಮಚರಿತಮಾನಸ. ಮೋದಿಯವರು ಪ್ರಯಾಣ ಮಾಡುವಾಗಲೆಲ್ಲಾ ಈ ಪವಿತ್ರ ಗ್ರಂಥವನ್ನು ತಮ್ಮೊಂದಿಗೆ ಇರಿಸಿಕೊಳ್ಳುತ್ತಾರಂತೆ.
ಪ್ರಧಾನಿಯಾದ ನಂತರ ಮೋದಿ ತಮಗೆ ನೀಡಿದ ಯಾವುದೇ ಸ್ಮರಣಿಕೆ ಮತ್ತು ಗಿಫ್ಟ್‌ಗಳನ್ನು ತಮ್ಮಲ್ಲಿರಿಸಿಕೊಳ್ಳುವುದಿಲ್ಲ. ಇವುಗಳನ್ನೆಲ್ಲಾ ಹರಾಜು ಮಾಡಿ ಅದರಲ್ಲಿ ಸಿಕ್ಕ ಹಣವನ್ನು ಗುಜರಾತ್‌ನ ಹೆಣ್ಣು ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಖರ್ಚು ಮಾಡುತ್ತಾರೆ. ಇದನ್ನೇ ದೆಹಲಿಯಲ್ಲಿಯೂ ಮುಂದುವರಿಸಲು ಮೋದಿ ತೀರ್ಮಾನಿಸಿದ್ದಾರೆ ಎಂದು ಅವರ ಆಪ್ತ ಮೂಲಗಳು ಹೇಳಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


