ಈಗಿನ ಸುದ್ದಿ

ಶಾಲಾ ಪಠ್ಯಗಳಲ್ಲಿ ನನ್ನ ಜೀವನಗಾಥೆ ಬೇಡ: ಮೋದಿ

ಶಾಲಾ ಪಠ್ಯಗಳಲ್ಲಿ ನನ್ನ ಜೀವನಗಾಥೆ ಬೇಡ: ಮೋದಿ
Published On :

ನವದೆಹಲಿ: ತಮ್ಮ ನೇರ ನಡೆ ಹಾಗೂ ಸಕ್ರಿಯ ರಾಜಕಾರಣದಿಂದ ಬಿಜೆಪಿಯನ್ನು ಅಧಿಕಾರಕ್ಕೆ ತಂದು ದೇಶದ ಪ್ರಧಾನಿ ಪಟ್ಟವನ್ನು ಅಲಂಕರಿಸಿದ ನರೇಂದ್ರ ಮೋದಿ ಅವರ ಜೀವನ ಚರಿತ್ರೆಯನ್ನು ಶಾಲಾ ಪಠ್ಯ ಪುಸ್ತಕಗಳಲ್ಲಿ ಬಳಕೆ ಮಾಡುವುದರ ಕುರಿತು ಸ್ವತಃ ಮೋದಿ ಅವರೇ ಶುಕ್ರವಾರ ವಿರೋಧ ವ್ಯಕ್ತಪಡಿಸಿದ್ದಾರೆ.

ಶಾಲಾ ಪಠ್ಯಗಳಲ್ಲಿ ನನ್ನ ಜೀವನ ಚರಿತ್ರೆ ಸೇರಿಸುವ ಬಗ್ಗೆ ಪತ್ರಿಕೆಗಳಲ್ಲಿ ಓದಿದ್ದೇನೆ. ನನ್ನ ಅಭಿಪ್ರಾಯದಂತೆ ಬದುಕಿರುವವರ ಜೀವನ ಚರಿತ್ರೆ ಪಠ್ಯ ಪುಸ್ತಕಗಳಲ್ಲಿ ಇರಬಾರದು ಎಂದು ಮೋದಿ ಸಾಮಾಜಿಕ ತಾಣದಲ್ಲಿ ಮೋದಿ ಟ್ವೀಟ್ ಮಾಡಿದ್ದಾರೆ.

ಭಾರತ ದೇಶಕ್ಕೆ ತನ್ನದೆ ಆದ ಶ್ರೀಮಂತ ಇತಿಹಾಸವಿದೆ. ಇಲ್ಲಿ ಸಾಕಷ್ಟು ಮಂದಿ ದೇಶಕ್ಕಾಗಿ ಹೋರಾಡಿ ಅಮರರಾಗಿದ್ದಾರೆ. ಅವರ ಹೋರಾಟದಿಂದ ನಾವಿಂದು ದೇಶವನ್ನು ನೋಡುತ್ತಿದ್ದೇವೆ. ಅಂತಹಾ ಮಹಾನ್ ಹೋರಾಟಗಾರರ ಜೀವನ ಚರಿತ್ರೆಯ ಪಠ್ಯವನ್ನು ಬೋಧಿಸಿ ಯುವಜನತೆಯಲ್ಲಿ ಅರಿವು ಮೂಡಿಸಿ ಎಂದು ಹೇಳಿದ್ದಾರೆ

ಬಿಜೆಪಿ ಆಡಳಿತವಿರುವ ಮಧ್ಯಪ್ರದೇಶ ಹಾಗೂ ಗುಜರಾತ್ ರಾಜ್ಯಗಳಲ್ಲಿ ಶಾಲಾ ಪಠ್ಯಗಳಲ್ಲಿ ಮೋದಿ ಜೀವನ ಚರಿತ್ರೆ ಸೇರಿಸಲು ಸಿದ್ಥತೆ ನಡೆದಿತ್ತು. ಈ ಕುರಿತು ಪ್ರತಿಕೆಗಳಲ್ಲಿ ಓದಿ ತಿಳಿದುಕೊಂಡ ಮೋದಿ ಅವರೆ ಇದಕ್ಕೆ ಅಸಮತ್ತಿ ಸೂಚಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.