ಬದೌನ್ ಗ್ಯಾಂಗ್ರೇಪ್: ಕುಟುಂಬಸ್ಥರಿಗೆ ರಾಹುಲ್ ಸಾಂತ್ವನ

ಬದೌನ್: ಉತ್ತರ ಪ್ರದೇಶದ ಬದೌನ್ ಜಿಲ್ಲೆಯಲ್ಲಿ ಐವರ ದುಷ್ಕೃತ್ಯಕ್ಕೆ ಬಲಿಯಾದ ದಲಿತ ಬಾಲಕಿಯರ ಮನೆಗೆ ಶನಿವಾರ ಭೇಟಿ ನೀಡಿದ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.
ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಬಳಿಕ ಮಾತನಾಡಿದ ರಾಹುಲ್ ಗಾಂಧಿ, ದೇಶದಲ್ಲಿ ಮಹಿಳೆಯರಿಗೆ ರಕ್ಷಣೆ ಇಲ್ಲದಂತಾಗಿದ್ದು, ಉತ್ತರಪ್ರದೇಶದಲ್ಲಿ ಹೆಚ್ಚಾಗುತ್ತಿರುವ ಅರಾಜಕತೆ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಈ ಕೂಡಲೆ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು ಎಂದು ಆಗ್ರಹಿಸಿದರು.
ಹತ್ಯಾಚಾರಕ್ಕೊಳಗಾದ ದಲಿತ ಬಾಲಕಿಯರ ಮನೆಗೆ ಭೇಟಿ ನೀಡಿದ ನಂತರ ಅವರ ಶವಗಳನ್ನು ನೇಣು ಹಾಕಿದ್ದ ಸ್ಥಳಕ್ಕೆ ರಾಹುಲ್ ಭೇಟಿ ನೀಡಿದರು. ಈ ವೇಳೆ ಕುಟುಂಬಸ್ಥರಿಗೆ ತಮ್ಮ ಕಡೆಯಿಂದ ಯಾವುದೇ ರೀತಿಯ ಸಹಾಯ ಬೇಕಾದರು ಮಾಡುವುದಾಗಿ ಭರವಸೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಹತ್ಯಾಚಾರಕ್ಕೊಳಗಾದ ಬಾಲಕಿಯರ ತಂದೆ ತಮಗೇನೂ ಪರಿಹಾರ ಬೇಕಾಗಿಲ್ಲ. ಪ್ರತಿಯೊಂದು ಸಮಸ್ಯೆಗೂ ಪರಿಹಾರವೇ ಪರಿಷ್ಕರವಲ್ಲ. ನಮ್ಮ ಮಕ್ಕಳಿಗಾದ ಅನ್ಯಾಯಕ್ಕೆ ಫಲವಾಗಿ ಆರೋಪಿಗಳಿಗೆ ಶಿಕ್ಷೆಯಾದರೆ ಸಾಕು ಎಂದು ಅವಲತ್ತುಕೊಂಡರು ಎಂದು ರಾಹುಲ್ ತಿಳಿಸಿದರು.
ಉತ್ತರ ಪ್ರದೇಶ ಸರ್ಕಾರದ ಮೇಲೆ ನಮಗೆ ಯಾವುದೇ ನಂಬಿಕೆಯಿಲ್ಲ ಪ್ರಸ್ತುತ ಪ್ರಕರಣವನ್ನು ಸಿಬಿಐಗೆ ವಹಿಸಬೇಕು. ಇದು ದೆಹಲಿಯಲ್ಲಿ ನಡೆದ ಹತ್ಯಾಚಾರಕ್ಕಿಂತಲೂ ಕ್ರೂರವಾದುದು ಎಂದು ಬಾಲಕಿಯ ಕುಟುಂಬದವರು ಹೇಳಿದ್ದಾರೆ.
ಘಟನೆ ನಡೆದು ನಾಲ್ಕು ಕಳೆದರು ಇಲ್ಲಿಯವರೆಗೂ ಉತ್ತರಪ್ರದೇಶದ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಹತ್ಯಾಚಾರಕೊಳ್ಳಗಾದ ದಲಿತ ಬಾಲಕಿಯ ಮನೆಗೆ ಭೇಟಿ ನೀಡಿಲ್ಲ ಹಾಗು ಕುಟುಂಬಸ್ಥರಲ್ಲಿ ನೈತಿಕ ಸ್ಥೈರ್ಯ ತುಂಬುವ ಯಾವುದೇ ಕೆಲಸ ಮಾಡಿಲ್ಲ.
ಘಟನೆ ಏನು? ಮೇ 27ರಂದು 14 ಮತ್ತು 15ರ ಹರೆಯದ ಇಬ್ಬರು ಬಾಲಕಿಯರು ನಾಪತ್ತೆಯಾಗಿದ್ದರು. ಮರುದಿನ ಉಷೈತ್ ಎಂಬಲ್ಲಿ ಅವರಿಬ್ಬರ ಶವಗಳು ನೇಣು ಹಾಕಿದ ಸ್ಥಿತಿಯಲ್ಲಿ ಕಂಡು ಬಂದಿತ್ತು. ಬಾಲಕಿಯರನ್ನು ಊರಿನ ಗೂಂಡಾ ಒಬ್ಬ ಅತ್ಯಾಚಾರಗೈದಿದ್ದಾನೆ ಎಂದು ಕುಟುಂಬಗಳು ದೂರಿದ್ದವು.
ಪ್ರಕರಣದಲ್ಲಿ ಏಳು ಮಂದಿ ಆರೋಪಿಗಳಿದ್ದು, ಇದರಲ್ಲಿ 5 ಮಂದಿಯನ್ನು ಈಗಾಗಲೇ ಬಂಧಿಸಲಾಗಿದೆ. ಅದರಲ್ಲಿ ಸರ್ವೇಶ್ ಯಾದವ್ ಮತ್ತು ಛತ್ರಪಾಲ್ ಯಾದವ್ ಎಂಬ ಇಬ್ಬರು ಪೊಲೀಸ್ ಪೇದೆಗಳು ಸೇರಿದಂತೆ ಪಪ್ಪು, ಅವ್ದೇಶ್ ಯಾದವ್ , ಉರ್ವೇಶ್ ಯಾದವ್ರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.
ಡಿಸೆಂಬರ್ 16ರ ದೆಹಲಿ ಗ್ಯಾಂಗ್ರೇಪ್ನಂತೆ ಬದೌನ್ ದಲಿತ ಬಾಲಕಿಯರ 'ಹತ್ಯೆ'ಚಾರ ಪ್ರಕರಣ ದೇಶಾವ್ಯಾಪ್ತಿ ಸಂಚಲನ ಮೂಡಿಸಿದೆ.
ಸಿಬಿಐಗೆ ತನಿಖೆಗೆ ಅಖಿಲೇಶ್ ಸಮ್ಮತಿ
ದಲಿತ ಬಾಲಕಿಯರ ಹತ್ಯೆಚಾರ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು ಎಂಬ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಆಗ್ರಹಕ್ಕೆ ಮಣಿದಿರುವ ಉತ್ತರಪ್ರದೇಶ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರು, ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಲಾಗುವುದು. ಈ ಸಂಬಂಧ ಕೇಂದ್ರ ಸರ್ಕಾರಕ್ಕೆ ಶೀಘ್ರದಲ್ಲೇ ಮನವಿ ಸಲ್ಲಿಸಲಾಗುವುದು ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


