ಈಗಿನ ಸುದ್ದಿ

ಸಿಬ್ಬಂದಿ ಅಮಾನತು ಹಿಂಪಡೆಯಿರಿ: ದೆಹಲಿ ವಿವಿಗೆ ಸ್ಮೃತಿ ಇರಾನಿ ಮನವಿ

ಸಿಬ್ಬಂದಿ ಅಮಾನತು ಹಿಂಪಡೆಯಿರಿ: ದೆಹಲಿ ವಿವಿಗೆ ಸ್ಮೃತಿ ಇರಾನಿ ಮನವಿ
Published On :

ನವದೆಹಲಿ: ತಮ್ಮ ವಿದ್ಯಾರ್ಹತೆಯ ಮಾಹಿತಿ ಸೋರಿಕೆ ಮಾಡಿದ್ದಕ್ಕಾಗಿ ಸೇವೆಯಿಂದ ಅಮಾನತುಗೊಂಡಿದ್ದ ದೆಹಲಿ ವಿಶ್ವವಿದ್ಯಾಲಯದ ಐವರು ಸಿಬ್ಬಂದಿಯ ಅಮಾನತನ್ನು ಹಿಂಪಡೆಯುವಂತೆ ಕೇಂದ್ರ ಮಾನವ ಸಂಪನ್ಮೂಲ ಸಚಿವೆ ಸ್ಮೃತಿ ಇರಾನಿ ಅವರು ದೆಹಲಿ ವಿವಿ ಕುಲಪತಿಗೆ ಮನವಿ ಮಾಡಿದ್ದಾರೆ.

ಸ್ಮೃತಿ ಇರಾನಿಯ ಶೈಕ್ಷಣಿಕ ಮಾಹಿತಿಯನ್ನು ದೆಹಲಿ ವಿವಿಯ ಸಿಬ್ಬಂದಿ ಸೋರಿಕೆ ಮಾಡಿದ್ದರು. ಈ ಸಂಬಂಧ ನಿನ್ನೆ ಐವರು ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿತ್ತು. ಈ ಬಗ್ಗೆ ಟ್ವಿಟ್ ಮಾಡಿರುವ ಸಚಿವೆ, ದೆಹಲಿ ವಿಶ್ವವಿದ್ಯಾಲಯ ಒಂದು ಸ್ವಾಯತ್ತ ಸಂಸ್ಥೆ. ಹೀಗಾಗಿ ನಾನು ಸಿಬ್ಬಂದಿಯ ಅಮಾನತನ್ನು ಹಿಂಪಡೆಯಬೇಕು ಎಂದು ಮನವಿ ಮಾಡಿಕೊಳ್ಳುತ್ತೇನೆ. ಸಾರ್ವಜನಿಕ ಜೀವನದಲ್ಲಿ ಟೀಕೆಗಳನ್ನು ಎದುರಿಸಲು ಸಿದ್ಧರಾಗಿರಬೇಕು ಎಂದಿದ್ದಾರೆ.

ಸ್ಮೃತಿ ಇರಾನಿಯ ವಿದ್ಯಾರ್ಹತೆಗೆ ಸಂಬಂಧಿಸಿದಂತೆ ಹಿಂದಿ ದಿನಪತ್ರಿಕೆಯೊಂದು ವರದಿ ಪ್ರಕಟಿಸಿತ್ತು. ಈ ವರದಿಯಲ್ಲಿ ಸ್ಮೃತಿ ಇರಾನಿ ಅವರು ಕಳೆದ ವರ್ಷ ದೆಹಲಿ ವಿವಿಯ ಸ್ಕೂಲ್ ಆಫ್ ಲರ್ನಿಂಗ್‌ನಲ್ಲಿ ಪದವಿ ಶಿಕ್ಷಣಕ್ಕೆ ಪ್ರವೇಶ ಪಡೆದಿದ್ದರು. ಆದರೆ ಅವರು ಪರೀಕ್ಷೆಗೆ ಹಾಜರಾಗಿರಲಿಲ್ಲ ಎಂದು ಹೇಳಲಾಗಿದೆ.

ಇನ್ನು ಈ ಬಗ್ಗೆ ಟ್ವಿಟ್ ಮಾಡಿದ್ದ ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ಅವರು, ಯಾರಾದರೂ ಅಮಾನತು ಶಿಕ್ಷೆಗೆ ಒಳಗಾದ ಸಿಬ್ಬಂದಿಯ ಪರ ನಿಲ್ಲುತ್ತಾರೆಯೇ ಎಂದಿದ್ದರು. ಇದೀಗ ಇರಾನಿ ಟ್ವಿಟ್ ನೋಡಿದ ಮೇಲೆ ಮತ್ತೆ ಟ್ವಿಟ್ ಮಾಡಿರುವ ದಿಗ್ವಿಜಯ್ ಸಿಂಗ್, ದಿಲ್ಲಿ ವಿವಿ ಸಿಬ್ಬಂದಿ ಪರ ಮನವಿ ಮಾಡಿದ ಸ್ಮೃತಿಗೆ ಧನ್ಯವಾದಗಳು. ಈ ದೇಶ ನಿಮ್ಮ ನಿಜವಾದ ವಿದ್ಯಾರ್ಹತೆಯನ್ನು ತಿಳಿಯುವಂತಾಗಲಿ ಎಂದಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.