ಬಾಲ್ಯದ ಅನುಭವ ವೈವಾಹಿಕ ಜೀವನದ ಮೇಲೆ ಪರಿಣಾಮ ಬೀರುತ್ತದೆ: ಅಧ್ಯಯನ

ಬಾಲ್ಯ ಜೀವನದ ಅನುಭವಗಳು ಮನುಷ್ಯರು 80 ವರ್ಷ ತಲುಪಿದ ಮೇಲೆಯೂ ಪ್ರಭಾವ ಬೀರುತ್ತದೆ. 80ರಿಂದ 90ರ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಬಾಲ್ಯ ಜೀವನದ ಅನುಭವಗಳು ಮನುಷ್ಯರು 80 ವರ್ಷ ತಲುಪಿದ ಮೇಲೆಯೂ ಪ್ರಭಾವ ಬೀರುತ್ತದೆ. 80ರಿಂದ 90ರ ವಯಸ್ಸಿನಲ್ಲಿ ವೈವಾಹಿಕ ಜೀವನದ ಮೇಲೆ ಬಾಲ್ಯದಲ್ಲಿ ನಡೆದ ಸಂಗತಿಗಳು ಕಾರಣವಾಗುತ್ತವೆ ಎನ್ನುತ್ತಾರೆ ಹಾರ್ವರ್ಡ್ ವೈದ್ಯಕೀಯ ಶಾಲೆಯ ಸಂಶೋಧಕ ರಾಬರ್ಟ್ ವಾಲ್ಡಿಂಗರ್ ಮತ್ತು ಸಹ ಲೇಖಕ ಮಾರ್ಕ್ ಸ್ಚುಲ್ಜ್.
'' ಎಳೆ ಅಥವಾ ಬಾಲ್ಯ ವಯಸ್ಸಿನಲ್ಲಿ ಜೀವನ ಸಂತೋಷ, ನೆಮ್ಮದಿಯಿಂದ ಇದ್ದರೆ ಮಧ್ಯ ವಯಸ್ಸಿನಲ್ಲಿ ಭಾವನೆಗಳನ್ನು ನಿಯಂತ್ರಿಸಲು, ಜೀವನದ ಕೌಶಲ್ಯಗಳನ್ನು ರೂಢಿಸಿಕೊಳ್ಳಲು ಮತ್ತು ವೈವಾಹಿಕ ಜೀವನದಲ್ಲಿ ನೆಮ್ಮದಿಯನ್ನು ಕಂಡುಕೊಳ್ಳಲು ಸಹಾಯಕವಾಗುತ್ತದೆ'' ಎಂದು ವಾಲ್ಡಿಂಗರ್ ಹೇಳುತ್ತಾರೆ.
ಸೈಕಲಾಜಿಕಲ್ ಸೈನ್ಸ್ ನಲ್ಲಿ ಈ ಅಧ್ಯಯನ ಪ್ರಕಟವಾಗಿದ್ದು ನಿರ್ದಿಷ್ಟ ವ್ಯಕ್ತಿಗಳನ್ನು 6 ದಶಕಗಳಿಗೂ ಹೆಚ್ಚು ಕಾಲ ಅಧ್ಯಯನ ಮಾಡಿ ಈ ತೀರ್ಮಾನಕ್ಕೆ ಬರಲಾಗಿದೆ. 
ವಯಸ್ಕರ ಬೆಳವಣಿಗೆ ಬಗ್ಗೆ 81 ಮಂದಿ 78 ವರ್ಷಗಳ ಕಾಲ ಈ ಅಧ್ಯಯನದಲ್ಲಿ ಭಾಗವಹಿಸಿದ್ದಾರೆ.
ಬಾಲ್ಯ ಜೀವನದಲ್ಲಿ ಸಿಕ್ಕಿರುವ ಕಾಳಜಿ, ಪ್ರೇಮ, ಪ್ರೋತ್ಸಾಹ ಮುಂದೆ ಮದುವೆಯಾದ ನಂತರ ಕುಟುಂಬದವರ ಜೊತೆ ಹೊಂದಿಕೊಂಡು ಬಾಳುವಲ್ಲಿ, ಸಂಸಾರವನ್ನು ನೋಡಿಕೊಳ್ಳುವುದರ ಮೇಲೆ, ಮುಂದಿನ ಇಡೀ ಜೀವನದ ಮೇಲೆ ಪರಿಣಾಮ ಬೀರುತ್ತದೆ ಎನ್ನುತ್ತಾರೆ ಸಂಶೋಧಕರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com