ಈ ನಾಲ್ಕು ಆರೋಗ್ಯಕರ ಅಭ್ಯಾಸಗಳು ನಿಮ್ಮ ಹೊಸ ವರ್ಷದ ಸಂಭ್ರಮವನ್ನು ಹೆಚ್ಚಿಸಲಿದೆ

018ರ ಸ್ವಾಗತಕ್ಕೆ ನಾವೆಲ್ಲ ಸಿದ್ದರಾಗಿರುವಾಗ ಪ್ರತಿಯೊಬ್ಬರೂ ಹೊಸ ವರ್ಷಕ್ಕೆ ಒಂದೊಂದು ನಿರ್ಣಯ ತೆಗೆದುಕೊಂಡು ಅದನ್ನು ಸಾಧಿಸಲು ಪ್ರಯತ್ನಿಸುತ್ತಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on: 
ನವದೆಹಲಿ: 2018ರ ಸ್ವಾಗತಕ್ಕೆ  ನಾವೆಲ್ಲ ಸಿದ್ದರಾಗಿರುವಾಗ ಪ್ರತಿಯೊಬ್ಬರೂ ಹೊಸ ವರ್ಷಕ್ಕೆ ಒಂದೊಂದು ನಿರ್ಣಯ  ತೆಗೆದುಕೊಂಡು ಅದನ್ನು ಸಾಧಿಸಲು ಪ್ರಯತ್ನಿಸುತ್ತಾರೆ. ಅವುಗಳಲ್ಲಿ ನಾವು ಇಡೀ ವರ್ಷ ಆರೋಗ್ಯಕರ ಜೀವನಶೈಲಿಯನ್ನು ಅನುಸರಿಸುತ್ತೇವೆ ಎನ್ನುವುದು ಸಾಮಾನ್ಯವಾದ ಘೊಷಣೆಯಾಗಿರುತ್ತದೆ. ಆದರೆ ಈ ಘೋಷಣೆಯನ್ನು ಕಾರ್ಯಗತಗೊಳಿಸುವುದು ಮಾತ್ರ ಹೇಳಿದಷ್ಟು ಸುಲಭವಲ್ಲ. ಅದಕ್ಕಾಗಿ ಈ ವರ್ಷ ಪ್ರತಿಯೊಬ್ಬರೂ ಕೆಲವೇ ಕೆಲವು ಆರೋಗ್ಯಕರ ಅಭ್ಯಾಸಗಳಿಗೆ ಬದ್ಧರಾಗಿರಿ ಮತ್ತು ಅವುಗಳನ್ನು ವರ್ಷದುದ್ದಕ್ಕೂ ಪಾಲಿಸಿ. ಇದರಿಂದ ವರ್ಷಾರಂಭದಲ್ಲಿ  ತೆಗೆದುಕೊಂಡ ನಿರ್ಣಯಗಳನ್ನು ಬ್ರೇಕ್ ಮಾಡುವ ಅಸಹಾಯಕತೆ ನಿಮಗೆ ಒದಗುವುದಿಲ್ಲ, 
ಹಿಮಾಲಯ ಔಷದಿ ಸಂಸ್ಥೆಯ ಆಯುರ್ವೇದ ತಜ್ಞ  ಡಾ ಹರಿಪ್ರಸಾದ್, ನೂತನ ವರ್ಷಕ್ಕೆ ನೀವು ಈ ನಾಲ್ಕು ಹೊಸ ನಿರ್ಣಯಗಲನ್ನು ತೆಗೆದುಕೊಳ್ಳಬಹುದು ಎಂದು ಶಿಫಾರಸ್ ಮಾಡುತ್ತಾರೆ.
ನಿತ್ಯ ವ್ಯಾಯಾಮ ಮಾಡಿ: ಪ್ರತಿದಿನ ನೀವು ಕನಿಷ್ಠ 40 ನಿಮಿಷಗಳ ಕಾ ವ್ಯಾಯಾಮಕ್ಕಾಗಿ ವ್ಯಯಿಸುತ್ತೀರಿ ಎಂದು ನಿರ್ಣಯಿಸಿ. ಇದನ್ನೇ ದಿನಚರಿಯನ್ನಾಗಿ ಮಾಡಿಕೊಳ್ಳಬೇಕಾಗಿಲ್ಲ,ಆದರೆ ಪ್ರತಿದಿನ ನೀವು ವ್ಯಾಯಾಮ ಮಾಡುವಿರೆಂದು ಖಚಿತಪಡಿಸಿಕೊಳ್ಳಿ. ಹೆಚ್ಚು ಕಶ್ಟಕರವಾದ ಯೋಗಾಸನ ಮಾದದೆ ಹೋದರೂ ಸರಲವಾದ ವ್ಯಾಯಾಮಗಳನ್ನು ಮಾಡಿ ನಿಮ್ಮ ದೇಹಾರೋಗ್ಯವನ್ನು ಉತ್ತಮಪಡಿಸಿಕೊಳ್ಳಉ ಇದರಿಂದ ಅನುಕೂಲವಾಗಲಿದೆ.
ಏಳು ಗಂಟೆ ಕಾಲ ನಿದ್ರಿಸಿ: ನಿದ್ರೆಯು ದೇಹಕ್ಕೆ ವಿಶ್ರಾಂತಿ ನೀಡುವುದು ಮಾತ್ರವಲ್ಲ, ಮನಸ್ಸಿಗೆ ವಿಶ್ರಾಂತಿ ಹಾಗೂ ಪುನಶ್ಚೇತನ ನಿಡುತ್ತದೆ. ನಿಮ್ಮ ಹೃದಯ ಮತ್ತು ರಕ್ತನಾಳಗಳ ಉತ್ತಮ ಕಾರ್ಯಚಟುವಟಿಕೆಗೆ ಇದು ಸಹಕಾರಿ. ಈ ವರ್ಷ ನೀವು ದಿನಕ್ಕೆ ಕನಿಷ್ಟ ಏಳು ಗಂಟೆಗಳ ಕಾಲ ನಿದ್ರಿಸುತ್ತೀರಿ ಎಂದು ನಿರ್ಣಯಿಸಿ, ಇದರಿಂದ ಸ್ವಲ್ಪ ಸಮಯದಲ್ಲೇ ನೀವು ಆರೋಗ್ಯ ಮತ್ತು ಸಂತಸ ಹೊಂದುತ್ತೀರಿ.
ನೈಸರ್ಗಿಕ ಉತ್ಪನ್ನ ಬಳಸಿ: ಈ ವರ್ಷ, ನೀವು ಸಮಸ್ಯೆಗೆ ತಕ್ಷಣದ ಪರಿಹಾರ ಹುಡುಕುವ ಬದಲು ನಿಮ್ಮ ಗುರಿ ದೀರ್ಘಾವಧಿಯ ಕ್ಷೇಮದತ್ತ ಇರಲಿ  ಆಯುರ್ವೇದ ಗ್ರಂಥಗಳು ಮತ್ತು ಆಧುನಿಕ ಸಂಶೋಧನೆಯ ಪ್ರಕಾರ, ನೈಸರ್ಗಿಕ ಉತ್ಪನ್ನಗಳು ಆರೋಗ್ಯ ಕಾಪಾಡಿಕೊಳ್ಳಲು ಹ್ಯೆಚ್ಚು ಸಹಕಾರಿಯಾಗಿರುತ್ತವೆ. ಈ ವರ್ಷ ನೀವು ಸಾಕಷ್ಟು ಸಾವಯವ, ನೈಸರ್ಗಿಕ ಉತ್ಪನ್ನಗಳನ್ನೇ  ಬಳಸುವೆ ಎಂದು ನಿರ್ಣಯಿಸಿ.
ಸಾಕಷ್ಟು ನೀರು ಕುಡಿಯಿರಿ: ದೇಹಕ್ಕೆ ನೀರು ಅತ್ಯಗತ್ಯವಾಗಿದ್ದು ದಿನ ನಿತ್ಯ ಸಾಕಶ್ಟು ಪ್ರಮಾಣದಲ್ಲಿ ನೀರು ಕುಡಿಯುತ್ತೇನೆಂದು ನಿರ್ಣಯಿಸಿ.  ನೀರು ಮಾನವನ ದೇಹಕ್ಕೆ ಇಂಧನವಾಗಿದೆ. ನಿಮ್ಮ ದೇಹವು ಹೆಚ್ಚು ಕಾರ್ಯಚಟುವಟಿಕೆಗಳಿಂದ ಕೂಡಿರುವಂತೆ ಮಾಡಲು ನಿತ್ಯವೂ ಹೆಚ್ಚು ನೀರನ್ನು ಸೇವಿಸಿ.
ಈ ಮೇಲಿನ ಸರಳ ನಿರ್ಣಯಗಳನ್ನು ತೆಗೆದುಕೊಳ್ಳುವುದರ ಮೂಲಕ ನೀವು ಖಚಿತವಾಗಿಯೂ ಹೊಸ ವರ್ಷವನ್ನು ಇನ್ನಷ್ಟು ಸುಂದರವಾಗಿಸಿಕೊಳ್ಳುತ್ತೀರಿ. ಇದರಲ್ಲಿ ಯಾವ ಅನುಮಾನವಿಲ್ಲ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com