ಮಳೆಗಾಲದಲ್ಲಿ ಬೆಳ್ಳಿ ಆಭರಣಗಳನ್ನು ಕಾಪಾಡಿಕೊಳ್ಳಲು ಕೆಲವು ಟಿಪ್ಸ್

ಇದೀಗ ಮಳೆಗಾಲ. ಮಳೆ ನೀರು, ಆರ್ದ್ರತೆ ಮತ್ತು ವಾಯು ಮಾಲಿನ್ಯಕಾರಕ ವಸ್ತುಗಳಿಗೆ ಬೆಳ್ಳಿಯ ಆಭರಣಗಳು ತಾಕಿದರೆ ....
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಇದೀಗ ಮಳೆಗಾಲ. ಮಳೆ ನೀರು, ಆರ್ದ್ರತೆ ಮತ್ತು ವಾಯು ಮಾಲಿನ್ಯಕಾರಕ ವಸ್ತುಗಳಿಗೆ ಬೆಳ್ಳಿಯ ಆಭರಣಗಳು ತಾಕಿದರೆ ಅದು ಬೇಗನೆ ಬಣ್ಣ ಮಾಸುತ್ತದೆ. 
ಇದಕ್ಕೆ ಏನು ಮಾಡಬೇಕು, ಅವುಗಳನ್ನು ಹೇಗೆ ಕಾಪಾಡಬೇಕು ಎಂಬುದಕ್ಕೆ ವಿನ್ಯಾಸಕಾರರಾದ ಅನುರಾಧ ರಾಮಮ್ ಮತ್ತು ನಿರ್ದೇಶಕ ಮತ್ತು ಅಮ್ರಪಾಲಿ ಜ್ಯುವೆಲ್ಸ್ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ತರಂಗ್ ಅರೊರ ಅವರು ಕೆಲವು ಟಿಪ್ಸ್ ಗಳನ್ನು ನೀಡಿದ್ದಾರೆ.
1.  ಆಭರಣಗಳ ಮೇಲೆ ದ್ರವ ಶುದ್ಧೀಕರಣವನ್ನು ಬಳಸಬೇಡಿ. ಅವು ಆಭರಣಗಳ ಮಧ್ಯೆ ಸಿಕ್ಕಿ ಹಾಕಿಕೊಂಡು ಮಸುಕನ್ನುಂಟುಮಾಡುತ್ತವೆ.
2. ಬೇಗನೆ ಒಡೆದುಹೋಗುವ ಸಾಧ್ಯತೆಯಿರುವ ಬೆಳ್ಳಿಯನ್ನು ಜೋಪಾನವಾಗಿಟ್ಟುಕೊಳ್ಳಬೇಕಾಗುತ್ತದೆ. ಬೇರೆ ಬೇರೆ ಬೆಳ್ಳಿಯ ಆಭರಣಗಳನ್ನು ಬೇರೆ ಬೇರೆ ಚೀಲಗಳಲ್ಲಿ ತುಂಬಿಸಿಡಬೇಕು. ತೆಳು ಹತ್ತಿಯ ಮೇಲೆ ಇಟ್ಟು ಪ್ಲಾಸ್ಟಿಕ್ ಚೀಲಗಳಲ್ಲಿ ಇಟ್ಟರೆ ಉತ್ತಮ. ತೇವಾಂಶದಿಂದ ದೂರವಿಡಬೇಕು ಮತ್ತು ಗಾಳಿ, ಬೆಳಕಿಗೆ ತೆರೆದಿಡಬಾರದು.
3. ಮಾರುಕಟ್ಟೆಯಲ್ಲಿ ಸಿಗುವ ಬೆಳ್ಳಿಯ ಕ್ಲೀನರ್ ಗಳಿಂದ ಹಾನಿಯೇ ಅಧಿಕ. ಅದು ಆಂಟಿ-ಟರ್ನಿಷ್ ಲೇಪನ ಮತ್ತು ಬೆಲೆಬಾಳುವ ಪಟಿನಾವನ್ನು ನಾಶಪಡಿಸಲಿದ್ದು, ಬೇಗನೆ ದುರ್ಬಲಗೊಳಿಸುತ್ತದೆ. ಅದು ನಿಮ್ಮ  ಬೆಳ್ಳಿಯ ಆಭರಣ ಸ್ವಚ್ಛತೆಗೆ ತಾತ್ಕಾಲಿಕ ಪರಿಹಾರ ನೀಡಬಹುದಷ್ಟೆ, ಆದರೆ ದೀರ್ಘಕಾಲದ ಮಟ್ಟಿಗೆ ಉತ್ತಮವಲ್ಲ.
4. ಬೆಳ್ಳಿಯ ಆಭರಣಗಳನ್ನು ಸ್ವಚ್ಛಗೊಳಿಸಲು ವೃತ್ತಿಪರರಲ್ಲಿಗೆ ತೆಗೆದುಕೊಂಡು ಹೋಗಿ. ಸರಿಯಾದ ಉಪಕರಣದಲ್ಲಿ ಸ್ವಚ್ಛಗೊಳಿಸಿದರೆ ಮಾತ್ರ ಅದರ ಹೊಳಪು, ಕಾಂತಿಯನ್ನು ಕಾಪಾಡಬಹುದು.
5. ನಿಮ್ಮ ಅಡುಗೆ ಮನೆಯಲ್ಲಿಯೇ ಕೆಲವು ಕಡಿಮೆ ವೆಚ್ಚದ ಮತ್ತು ಪರಿಸರ ಸ್ನೇಹಿ ಕ್ಲೀನರ್ ಗಳನ್ನು ಬಳಸಿ.
6. ಸೋಪು ಮತ್ತು ನೀರು: ನಿಮ್ಮ ಆಭರಣವನ್ನು ಸ್ವಚ್ಛಗೊಳಿಸಲು ಸೌಮ್ಯವಾದ, ಅಮೋನಿಯ ಮತ್ತು ಫಾಸ್ಫೇಟ್-ಮುಕ್ತ ಡಿಶ್ವಾಶಿಂಗ್ ಸೋಪ್ ಅನ್ನು ನೀರಿನಲ್ಲಿ ಉಪಯೋಗಿಸಿ.
7. ಆಲಿವ್ ಎಣ್ಣೆ ಮತ್ತು ನಿಂಬೆಹಣ್ಣಿನ ಜ್ಯೂಸ್:ಒಂದು ಬೌಲ್ ನಲ್ಲಿ ಆಲಿವ್ ಎಣ್ಣೆ ಮತ್ತು ನಿಂಬೆಹಣ್ಣಿನ ಜ್ಯೂಸ್ ತೆಗೆದುಕೊಳ್ಳಿ.  ಹತ್ತಿ ಬಟ್ಟೆಯನ್ನು ತೆಗೆದುಕೊಂಡು ಅದನ್ನು ಬೌಲ್ ನಲ್ಲಿ ಅದ್ದಿ ತೆಗೆಯಿರಿ. ನಂತರ ನಿಮ್ಮ  ಬೆಳ್ಳಿಯನ್ನು ಪಾಲಿಶ್ ಮಾಡಿ  ಒಣಗಿಸಿ.
8. ನಾವು ಧರಿಸುವಾಗ ಆಭರಣಗಳನ್ನು ಎಲ್ಲವೂ ಮುಗಿದ ನಂತರ ಧರಿಸಿ. ಬೆಳ್ಳಿ ಧರಿಸಿದ ನಂತರ ಪಫ್ಯೂಮ್ ಹಾಕಿದರೆ ಹಾಳಾಗುವ ಸಾಧ್ಯತೆಯಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com