ಮೆಚ್ಚುಗೆಯ ಮಾತುಗಳೇ ಮಕ್ಕಳಲ್ಲಿ ಸನ್ನಡತೆ ಹೆಚ್ಚಿಸಲು ಸಹಕಾರಿ: ಅಧ್ಯಯನ ವರದಿ

ಪೋಷಕರು ತಮ್ಮ ಮಕ್ಕಳ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡುವುದು ಮಕ್ಕಳಲ್ಲಿ ಸನ್ನಡತೆ ಹೆಚ್ಚಿಸಲು ಸಹಕಾರಿಯಾಗಿದ್ದು, ಪೋಷಕರು ಮಕ್ಕಳ ಬೆನ್ನು ತಟ್ಟುವುದರಿಂದ ಅವರ ನಡವಳಿಕೆ ಉತ್ತಮಗೊಳ್ಳುತ್ತದೆ.
ಮೆಚ್ಚುಗೆಯ ಮಾತುಗಳೇ ಮಕ್ಕಳಲ್ಲಿ ಸನ್ನಡತೆ ಹೆಚ್ಚಿಸಲು ಸಹಕಾರಿ: ಅಧ್ಯಯನ ವರದಿ
ಮೆಚ್ಚುಗೆಯ ಮಾತುಗಳೇ ಮಕ್ಕಳಲ್ಲಿ ಸನ್ನಡತೆ ಹೆಚ್ಚಿಸಲು ಸಹಕಾರಿ: ಅಧ್ಯಯನ ವರದಿ
ಲಂಡನ್: ಪೋಷಕರು ತಮ್ಮ ಮಕ್ಕಳ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡುವುದು ಮಕ್ಕಳಲ್ಲಿ ಸನ್ನಡತೆ ಹೆಚ್ಚಿಸಲು ಸಹಕಾರಿಯಾಗಿದ್ದು, ಪೋಷಕರು ಮಕ್ಕಳ ಬೆನ್ನು ತಟ್ಟುವುದರಿಂದ ಅವರ ನಡವಳಿಕೆ ಉತ್ತಮಗೊಳ್ಳುತ್ತದೆ. ಅಷ್ಟೇ ಅಲ್ಲದೇ ಸನ್ನಡತೆ ಮತ್ತಷ್ಟು ಹೆಚ್ಚುತ್ತದೆ ಎಂದು ಅಧ್ಯಯನ ವರದಿಯೊಂದು ಹೇಳಿದೆ. 
ಮಕ್ಕಳು ಮಾಡುವ ಒಳ್ಳೆಯ ಕೆಲಸಗಳ ಬಗ್ಗೆ ಮೆಚ್ಚುಗೆಯ ಮಾತನ್ನಾಡುವುದು ಮತ್ತಷ್ಟು ಒಳ್ಳೆಯ ಕೆಲಸ ಮಾಡುವುದಕ್ಕೆ ಪ್ರೇರಣೆ ನೀಡುತ್ತದೆ ಎಂದು ಬ್ರಿಟನ್ ನ ಡೆ ಮೊಂಟ್ಫೋರ್ಟ್ ವಿಶ್ವವಿದ್ಯಾಲಯದ ಸಂಶೋಧಕ ಸ್ಯೂ ವೆಸ್ಟ್ ವುಡ್ ಹೇಳಿದ್ದಾರೆ. 
2-4 ವರ್ಷದ ಮಕ್ಕಳಿದ್ದ 34 ಪೋಷಕರನ್ನು ಮಕ್ಕಳೊಂದಿಗೆ 4 ವಾರಗಳ ಕಾಲ ಸಮೀಕ್ಷೆಗೆ ಒಳಪಡಿಸಲಾಗಿತ್ತು. ಪ್ರತಿ ದಿನ 5 ಬಾರಿ ತಮ್ಮ ಮಕ್ಕಳು ಮಾಡುವ ಕೆಲಸಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಲು ಪೋಷಕರಿಗೆ ಸೂಚಿಸಲಾಗಿತ್ತು. ಪೋಷಕರು ಅದರಂತೆಯೇ ಮಾಡಿದ್ದು, ಮೆಚ್ಚುಗೆ ವ್ಯಕ್ತಪಡಿಸಿದ ಪೋಷಕರ ಮಕ್ಕಳ ನಡವಳಿಕೆ ಹಾಗೂ ಸನ್ನಡೆಯಲ್ಲಿ ಸುಧಾರಣೆ ಕಂಡುಬಂದಿತ್ತು. ಅಂತಿಮವಾಗಿ ಹೈಪರ್ಆಕ್ಟೀವ್ ಮತ್ತು ಗಮನ ನೀಡದ ಮಕ್ಕಳ ನಡವಳಿಕೆಗಳಲ್ಲಿ ಬದಲಾವಣೆ ಉಂಟಾಗಿತ್ತು ಎಂದು ಅಧ್ಯಯನ ವರದಿ ಹೇಳಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com