ಮಕ್ಕಳಿಗೆ ಸಾಕಷ್ಟು ನಿದ್ರೆ ಸಿಗಲು ಪೋಷಕರು ಕಟ್ಟುನಿಟ್ಟಿನ ನಿಯಮ ರೂಪಿಸಬೇಕು!

ಮಕ್ಕಳು ನಿದ್ದೆ ಮಾಡುವ ಸಮಯವನ್ನು ಪೋಷಕರು ಸರಿಯಾಗಿ ನಿಗದಿಪಡಿಸಿದರೆ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಮಕ್ಕಳು ನಿದ್ದೆ ಮಾಡುವ ಸಮಯವನ್ನು ಪೋಷಕರು ಸರಿಯಾಗಿ ನಿಗದಿಪಡಿಸಿದರೆ ಕಂದಮ್ಮಗಳಿಗೆ ಸಾಕಷ್ಟು ನಿದ್ದೆ ಸಿಗುವುದಲ್ಲದೆ ಅವರ ಆರೋಗ್ಯ ಕೂಡ ಚೆನ್ನಾಗಿರುತ್ತದೆ ಎಂದು ಅಧ್ಯಯನವೊಂದು ತಿಳಿಸಿದೆ.
ಮಕ್ಕಳಲ್ಲಿ ನಿದ್ದೆಯ ಕೊರತೆಯಿಂದ ಏಕಾಗ್ರತೆ ಕಡಿಮೆಯಾಗುತ್ತದೆ. ಶಾಲೆಗೆ ಪದೇ ಪದೇ ಗೈರು ಹಾಜರಾಗುವುದು, ಸಾಮಾಜಿಕವಾಗಿ ಸರಿಯಾಗಿ ಬೆರೆಯದಿರುವುದು, ಖಿನ್ನತೆ, ಸಂವಹನ ಕೊರತೆ ಇತ್ಯಾದಿಗಳು ಕಂಡುಬರುತ್ತವೆ. 
ಮಕ್ಕಳು ಆರೋಗ್ಯಯುತವಾಗಿ ಬೆಳೆಯಲು ಸೂಕ್ತ ನಿದ್ದೆ ಅವಶ್ಯಕ. ಇದು ಅವರ ಶಾರೀರಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎಂದು ಕೆನಡಾದ ಪಬ್ಲಿಕ್ ಹೆಲ್ತ್ ಒಂಟಾರಿಯೊದ ಮುಖ್ಯಸ್ಥ ಹೀದರ್  ಮ್ಯಾನ್ಸನ್ ತಿಳಿಸಿದ್ದಾರೆ.
ಬಿಎಂಸಿ ಪಬ್ಲಿಕ್ ಹೆಲ್ತ್ ನಲ್ಲಿ ಈ ಅಧ್ಯಯನ ಪ್ರಕಟಗೊಂಡಿದ್ದು ಸುಮಾರು 1,600 ಪೋಷಕರು ಮತ್ತು ಅನೇಕ ಕುಟುಂಬಗಳಿಂದ  18 ವರ್ಷಕ್ಕಿಂತ ಕೆಳಗಿನ ಕನಿಷ್ಠ ಒಂ ದು ಮಗುವನ್ನು ಅಧ್ಯಯನಕ್ಕೊಳಪಡಿಸಲಾಗಿದೆ.
ಸಂಶೋಧಕರ ಪ್ರಕಾರ, ನಿಗದಿತ ಸಮಯದ ನಿದ್ದೆಯನ್ನು ಮಾಡುವ ಮಕ್ಕಳ ಸಂಖ್ಯೆಯಲ್ಲಿ 5ರಿಂದ 9 ವರ್ಷದೊಳಗಿನವರ ಸಂಖ್ಯೆ ಹೆಚ್ಚಾಗಿದ್ದರೆ, 10ರಿಂದ 17 ವರ್ಷದೊಳಗಿನವರ ಸಂಖ್ಯೆ ಕಡಿಮೆಯಾಗಿದೆ. ಸುಮಾರು 15 ವರ್ಷ ವಯಸ್ಸಿನ ಮಕ್ಕಳಲ್ಲಿ ವಾರದ ದಿನಗಳಲ್ಲಿ ಮತ್ತು ವಾರಾಂತ್ಯಗಳಲ್ಲಿ ನಿದ್ದೆ ಮಾಡುವ ಸಮಯಗಳಲ್ಲಿ ಭಾರೀ ವ್ಯತ್ಯಾಸವಿದೆ.
 ವಾರಾಂತ್ಯಗಳಲ್ಲಿ ನಿದ್ದೆ ಮಾಡುವುದಕ್ಕಿಂತ ಹೆಚ್ಚು ಇತರೆ ಚಟುವಟಿಕೆಗಳಲ್ಲಿ ತೊಡಗಿರುವ ಮಕ್ಕಳ ಸಂಖ್ಯೆಯೇ ಹೆಚ್ಚಾಗಿದೆ. ವಾರದ ದಿನಗಳಿಗೆ ಹೋಲಿಸಿದರೆ ವಾರಾಂತ್ಯಗಳಲ್ಲಿ ಶೇಕಡಾ 38.3 ಮಕ್ಕಳು ಸರಿಯಾಗಿ ನಿದ್ದೆ ಮಾಡುತ್ತಾರೆ.
ವಾರದ ದಿನಗಳಲ್ಲಿ ಸರಿಯಾಗಿ ನಿದ್ದೆ ಮಾಡುವಂತೆ ಮಕ್ಕಳಿಗೆ ಪೋಷಕರು ಸೂಚಿಸಿದರೆ ಮಕ್ಕಳ ಆರೋಗ್ಯ ಬೆಳವಣಿಗೆಗೆ ಉತ್ತಮ ಎಂದು ಮನ್ಸೊನ್ ಹೇಳುತ್ತಾರೆ.
ಅಧ್ಯಯನಕ್ಕೊಳಪಟ್ಟ ಪೋಷಕರಲ್ಲಿ ಶೇಕಡಾ 94 ಪೋಷಕರು ಮಕ್ಕಳು ನಿಗದಿತ ಸಮಯಕ್ಕೆ ನಿದ್ದೆ ಮಾಡಲು ಪ್ರೋತ್ಸಾಹಿಸಿದರೆ, ಶೇಕಡಾ 84ರಷ್ಟು ಪೋಷಕರು ಮಲಗುವ ನಿಯಮವನ್ನು ಅಳವಡಿಸಿಕೊಳ್ಳುತ್ತಾರೆ. ಅವುಗಳಲ್ಲಿ  ವಾರದ ದಿನಗಳಲ್ಲಿ ತಮ್ಮ ಮಕ್ಕಳಿಗೆ ಮಲಗುವಂತೆ ಕಡ್ಡಾಯ ಮಾಡುವ ಪೋಷಕರ ಸಂಖ್ಯೆ ಶೇಕಡಾ 59 ಮಂದಿ ಎಂದು ಸಂಶೋಧಕರು ಹೇಳುತ್ತಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com