ಭಾರತೀಯರ ಸರಾಸರಿ ಜೀವಿತಾವಧಿ 10 ವರ್ಷ ಹೆಚ್ಚಳ, ರಾಜ್ಯಗಳ ನಡುವೆ ಇದೆ ಅಂತರ!

ಎರಡು ದಶಕಗಳ ಅವಧಿಯಲ್ಲಿ ಭಾರತೀಯರ ಸರಾಸರಿ ಜೀವಿತಾವಧಿ 10 ವರ್ಷಗಳಷ್ಟು ಹೆಚ್ಚಿಳವಾಗಿದೆ ಎಂದು ಅಧ್ಯಯನವರದಿಯೊಂದು ತಿಳಿಸಿದೆ
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ನವದೆಹಲಿ: ಎರಡು ದಶಕಗಳ ಅವಧಿಯಲ್ಲಿ ಭಾರತೀಯರ ಸರಾಸರಿ ಜೀವಿತಾವಧಿ 10 ವರ್ಷಗಳಷ್ಟು ಹೆಚ್ಚಿಳವಾಗಿದೆ ಎಂದು ಅಧ್ಯಯನವರದಿಯೊಂದು ತಿಳಿಸಿದೆ . ಅದೇ ವೇಳೆ ಈ ಜೀವಿತಾವಧಿಯಲ್ಲಿ ರಾಜ್ಯ ರಾಜ್ಯಗಳ ನಡುವೆ ಭಾರೀ ಅಂತರವಿರುವುದಾಗಿ ಹೇಳಲಾಗಿದೆ.
ವರದಿ ಹೇಳುವಂತೆ ಕೇರಳದ ಮಹಿಳೆಯರ ಆಯಸ್ಸು 78.7 ವರ್ಷಗಳಾದರೆ ಉತ್ತರ ಪ್ರದೇಶದಲ್ಲಿ 66.8, ಕೇರಳ ಪುರುಷರ ಜೀವಿತಾವಧಿ 73.8 ವರ್ಷಗಳಿದ್ದರೆ, ಅಸ್ಸಾಂನಲ್ಲಿ 63.6 ವರ್ಷಗಳಾಗಿದೆ.
ದೇಶದಲ್ಲಿನ 29 ರಾಜ್ಯಗಳಲ್ಲಿ  ಕಂಡು ಬರುವ ಅನಾರೋಗ್ಯ, ಅಂಗವೈಕಲ್ಯ ಮತ್ತು ಅಕಾಲಿಕ ಸಾವುಗಳಿಗೆ ಕಾರಣವಾಗುವ ಅಂಶಗಳು - ಈ ಎಲ್ಲವನ್ನೂ ಅಧ್ಯಯನ ವರದಿಯಲ್ಲಿ ವಿವರಿಸಲಾಗಿದೆ. 1990–2016ರ ನಡುವಣ ಅವಧಿಯಲ್ಲಿ ಭಾರತೀಯರ ಆರೋಗ್ಯದ ಸ್ಥಿತಿಗಳನ್ನು ಅಧ್ಯಯನ ನಡೆಸಿ ತಯಾರಿಸಲಾದ ಈ ವರದಿ ಪ್ರಖ್ಯಾತ ಲ್ಯಾನ್ಸೆಟ್‌ ನಿಯತಕಾಲಿಕದಲ್ಲಿ ಪ್ರಕಟವಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com