ಒತ್ತಡ, ಖಿನ್ನತೆಗೆ ಕೆಲವೊಮ್ಮೆ ಏಕಾಂತವೇ ಮದ್ದು: ಸಂಶೋಧಕರು

ತಮ್ಮಷ್ಟಕ್ಕೆ ತಾವು ಕಳೆಯುವವರು ಒತ್ತಡದ ಮಟ್ಟವನ್ನು ಸುಲಭವಾಗಿ ಕಡಿಮೆ ಮಾಡಿ ಖಿನ್ನತೆ ಮತ್ತು ಆತಂಕಗಳನ್ನು ಕಡಿಮೆ....
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನ್ಯೂಯಾರ್ಕ್: ತಮ್ಮಷ್ಟಕ್ಕೆ ತಾವು ಕಳೆಯುವವರು ಒತ್ತಡದ ಮಟ್ಟವನ್ನು ಸುಲಭವಾಗಿ ಕಡಿಮೆ ಮಾಡಿ ಖಿನ್ನತೆ ಮತ್ತು ಆತಂಕಗಳನ್ನು ಕಡಿಮೆ ಮಾಡಿ ಸೃಜನಶೀಲತೆಯಲ್ಲಿ ಹೆಚ್ಚು ತೊಡಗಿಸಿಕೊಳ್ಳಬಹುದು ಎಂದು ಸಂಶೋಧಕರು ಹೇಳಿದ್ದಾರೆ.

ಮಾನಸಿಕ  ಕಾಯಿಲೆಗಳನ್ನು ಗುಣಪಡಿಸಲು ಕೆಲವೊಮ್ಮೆ ಏಕಾಂತತೆ ಒಳ್ಳೆಯದು, ಸೃಜನಶೀಲತೆಯನ್ನು ಹೆಚ್ಚಿಸಿ ಮೆದುಳಿನ ಕಾರ್ಯವನ್ನು ಉತ್ತೇಜಿಸುತ್ತದೆ ಎಂದು ಸಂಶೋಧಕರು ಹೇಳುತ್ತಾರೆ ಎಂದು ಡೈಲಿ ಮೇಲ್ ವರದಿ ಮಾಡಿದೆ.

ಸ್ವಂತಿಕೆ ಅಥವಾ ಸೃಜನಶೀಲತೆ ನಮ್ಮಲ್ಲಿ ಒತ್ತಡವನ್ನು ತಗ್ಗಿಸಿ ದಕ್ಷತೆ ರೀತಿಯಲ್ಲಿ ಮೆದುಳು ಕಾರ್ಯವಹಿಸಲು ಸಹಾಯ ಮಾಡುತ್ತದೆ. ಡೋಪಾಮೈನ್ ಬಿಡುಗಡೆ ಮಾಡಲು ಏಕಾಂತತೆ ಸಹಕರಿಸಿ ಮನುಷ್ಯನಲ್ಲಿ ಭಾವನಾತ್ಮಕ ಪ್ರತಿಕ್ರಿಯೆಗಳನ್ನು ನಿಯಂತ್ರಿಸುತ್ತದೆ ಮತ್ತು ಸಮಸ್ಯೆಗಳನ್ನು ಬಗೆಹರಿಸಲು ಅನುಕೂಲ ಮಾಡಿಕೊಡುತ್ತದೆ ಎಂದು  ಸಂಶೋಧಕರು ಹೇಳುತ್ತಾರೆ.

ಇನ್ನೊಂದೆಡೆ ಏಕಾಂತತಗೆ ವಿರುದ್ಧವಾಗಿ ಸಾಮಾಜಿಕವಾಗಿ ಎಲ್ಲರೊಂದಿಗೆ ಬೆರೆತು ಸಂವಹನ ನಡೆಸುವುದು ಮಾನಸಿಕ ಮತ್ತು ಶಾರೀರಿಕ ಆರೋಗ್ಯದಲ್ಲಿ ಪ್ರಮುಖ  ಪಾತ್ರ  ವಹಿಸುತ್ತದೆ. ಆದರೆ ಸೃಜನಶೀಲ ಚಟುವಟಿಕೆಗಳಲ್ಲಿ ಮನುಷ್ಯನ ಮೆದುಳು ಹೆಚ್ಚು ಕೆಲಸ ಮಾಡಲು ಅಂತಹ ಉತ್ತಮ ವಾತಾವರಣ ನಿರ್ಮಿಸಿ ಕೊಡಲು ತುಂಬ ಜನರಿದ್ದರೆ  ಒಳ್ಳೆಯದಲ್ಲ ಎಂದು ಸಂಶೋಧಕರು ಹೇಳುತ್ತಾರೆ.

ಸಮಾಜದ ಇತರರಿಂದ ವಿಮುಖವಾಗಿರುವುದೆಂದರೆ ಅವರು ಎಷ್ಟು ಹೊತ್ತು ಒಂಟಿಯಾಗಿರುತ್ತಾರೆ  ಎಂಬುದು ಕೂಡ ಇಲ್ಲಿ ಮುಖ್ಯವಾಗುತ್ತದೆ ಎಂದು ಅಮೆರಿಕಾದ ಬಫ್ಫಲೊ ವಿಶ್ವವಿದ್ಯಾಲಯದ ಪ್ರೊಫೆಸರ್ ಜೂಲಿ ಬೌಕರ್ ಹೇಳುತ್ತಾರೆ.

ನಾಚಿಕೆ ಸ್ವಭಾವದ ಮಂದಿ  ತಮ್ಮ ಏಕಾಂತದ ಸಮಯವನ್ನು ಸಂತೋಷವಾಗಿ ಒಳ್ಳೆಯದಕ್ಕೆ ಬಳಸಲು ಸಾಧ್ಯವಾಗದಿರಬಹುದು, ಯಾಕೆಂದರೆ ಅನೇಕ ಸಂದರ್ಭಗಳಲ್ಲಿ ಭಯ,ದುರಾಲೋಚನೆಗಳಿಗೆ ಅವರ ಸಮಯ ಕಳೆದುಹೋಗಬಹುದು ಎನ್ನುತ್ತಾರೆ.
ಇಲ್ಲಿ ಸಂಶೋಧಕರು ಸುಮಾರು 300 ಜನರನ್ನು ಪರೀಕ್ಷೆಗೊಳಪಡಿಸಿದ್ದು   ಅವರ ನಡತೆಗೆ ಸಂಬಂಧಪಟ್ಟ ಪ್ರಶ್ನೆಗಳನ್ನು ಕೇಳಲಾಯಿತು.

 ಒತ್ತಡಗಳ ಕಡಿಮೆಯಿಂದ ಹೃದ್ರೋಗ ಸಮಸ್ಯೆ ಮತ್ತು ಮಾನಸಿಕ ವ್ಯಾಧಿಯ ಅಪಾಯವನ್ನು ಕಡಿಮೆ ಮಾಡುತ್ತದೆ ಎಂದು ತಿಳಿದುಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com