ಒತ್ತಡದಿಂದ ಹೊರಬರಲು, ವಿಶ್ರಾಂತಿಗಾಗಿ ಶೇ.80ರಷ್ಟು ಜನ ಆನ್'ಲೈನ್ ಗೇಮ್ಸ್ ಮೊರೆ: ಸಮೀಕ್ಷೆ

ಕೆಲಸದ ಒತ್ತಡದಿಂದ ಹೊರಬರಲು ಹಾಗೂ ವಿಶ್ರಾಂತಿ ಪಡೆಯುವ ಸಲುವಾಗಿ ಶೇ.80ರಷ್ಟು ಜನ ಆನ್'ಲೈನ್ ಗೇಮ್ ಆಡುತ್ತಾರೆಂದು ಸಂಶೋಧನೆಯೊಂದು ಹೇಳಿದೆ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಕೆಲಸದ ಒತ್ತಡದಿಂದ ಹೊರಬರಲು ಹಾಗೂ ವಿಶ್ರಾಂತಿ ಪಡೆಯುವ ಸಲುವಾಗಿ ಶೇ.80ರಷ್ಟು ಜನ ಆನ್'ಲೈನ್ ಗೇಮ್ ಆಡುತ್ತಾರೆಂದು ಸಂಶೋಧನೆಯೊಂದು ಹೇಳಿದೆ. 
ರೀಕ್ರೀಯೋ ಈಜಿ ಆ್ಯಂಡ್ ಫನ್ ಗೇಮಿಂಗ್ ವೇದಿಕೆ ಸಂಶೋಧನೆಯನ್ನು ನಡೆಸಿದ್ದು, 1000 ಜನರನ್ನು ಬಳಕಿಸೊಂದು ಸಂಶೋಧನೆಗೊಳಪಡಿಸಿದೆ. ಸಂಶೋಧನೆಯಲ್ಲಿ ಶೇ.20 ರಷ್ಟು ಮಂದಿ ಗೇಮ್'ನ್ನು ಸಂತೋಷ ಹಾಗೂ ಮನರಂಜನೆಗಾಗಿ ಆಡಿದರೆ, ಶೇ.80 ರಷ್ಟು ಮಂದಿ ಕೆಲಸದಲ್ಲಿರುವ ಒತ್ತಡದಿಂದ ಹೊರಬರಲು ಹಾಗೂ ವಿಶ್ರಾಂತಿಗಾಗಿ ಆಡುತ್ತಾರೆಂದು ತಿಳಿದುಬಂದಿದೆ. 
ಶೇ.37ರಷ್ಟು ಮಂದಿ ಪ್ರಯಾಣದ ಸಂದರ್ಭದಲ್ಲಿ ಆಡಿದರೆ, ಶೇ.63ರಷ್ಟು ಮಂದಿ ವಿಶ್ರಾಂತಿ ಬೇಕಿದ್ದ ಸಂದರ್ಭದಲ್ಲಿ ಮನೆ ಹಾಗೂ ಕೆಲಸ ಮಾಡುವ ಸ್ಥಳಗಳಲ್ಲಿ ಆಡುವುದಾಗಿ ತಿಳಿಸಿದ್ದಾರೆ. 
ಸಂಶೋಧನೆಗೊಳಗಾದ ಶೇ.76 ರಷ್ಟು ಮಂದಿ ವೃತ್ತಿಪರರಾಗಿದ್ದು, ಶೇ.14 ರಷ್ಟು ಮಂದಿ ವಿದ್ಯಾರ್ಥಿಗಳು ಹಾಗೂ ಶೇ.10 ರಷ್ಟು ಮಂದಿ ಹಿರಿಯ ನಾಗರೀಕರಾಗಿದ್ದಾರೆ. 
ಮೆಟ್ರೋ ನಗರಗಳಾದ ದೆಹಲಿ, ಮುಂಬೈ, ಬೆಂಗಳೂರು ಅಷ್ಟೇ ಅಲ್ಲದೆ, ಎರಡನೇ ಹಂತದ ನಗರಗಳಾಗಿರುವ ಪಾಟ್ನ, ಇಂದೋರ್, ಅಹಮದಾಬಾದ್, ಲಖನೌ, ಪುಣೆ, ಚಂಡೀಗಢ, ಕೊಚ್ಚಿ ಹಾಗೂ ಭೂಪಾಲ್ ನಲ್ಲಿರುವ ಜನರು ಹೆಚ್ಚಾಗಿ ಆನ್'ಲೈನ್ ಗೇಮ್ ಗಳನ್ನು ಹೆಚ್ಚಾಗಿ ಆಡುತ್ತಾರೆ. ಬಳಕೆದಾರರು ದಿನಕ್ಕೆ 15-18 ಗೇಮ್ ಗಳನ್ನು ಆಡುತ್ತಿದ್ದು, ಕನಿಷ್ಟ 30 ನಿಮಿಷಗಳನ್ನಾದರೂ ಗೇಮ್ ಗಳಿಗಾಗಿ ಕಳೆಯುತ್ತಿದ್ದಾರೆಂದು ಸಂಶೋಧನೆ ತಿಳಿಸಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com