ವಿವಾಹ ಸಂದರ್ಭದಲ್ಲಿ ವಧು ಅಷ್ಟೇ ಅಲ್ಲ, ವರನಿಗೂ ಬೇಕು ತ್ವಚೆಯ ಆರೈಕೆ

ವಿವಾಹ ನಿಶ್ಚಯವಾಗುತ್ತಿದ್ದಂತೆಯೇ ಪ್ರತೀಯೊಬ್ಬರೂ ಮಧುಮಗಳ ಕುರಿತಂತೆಯೇ ಆಲೋಚನೆ ಮಾಡುವುದು ಹೆಚ್ಚು. ಮಹಿಳೆಯರ ಸೌಂದರ್ಯ, ಆರೋಗ್ಯದ ಬಗ್ಗೆ ಎಲ್ಲರೂ ಚರ್ಚೆ ಮಾಡುತ್ತಾರೆ. ಆದರೆ, ಪುರುಷರ ಬಗ್ಗೆ ಆಲೋಚನೆ ಮಾಡುವವರು ಬೆರಳೆಣಿಕೆಯಷ್ಟು ಮಾತ್ರ...
ವಿವಾಹ ಸಂದರ್ಭದಲ್ಲಿ ವಧು ಅಷ್ಟೇ ಅಲ್ಲ, ವರನಿಗೂ ಬೇಕು ಚರ್ಮದ ಆರೈಕೆ
ವಿವಾಹ ಸಂದರ್ಭದಲ್ಲಿ ವಧು ಅಷ್ಟೇ ಅಲ್ಲ, ವರನಿಗೂ ಬೇಕು ಚರ್ಮದ ಆರೈಕೆ
ವಿವಾಹ ನಿಶ್ಚಯವಾಗುತ್ತಿದ್ದಂತೆಯೇ ಪ್ರತೀಯೊಬ್ಬರೂ ಮಧುಮಗಳ ಕುರಿತಂತೆಯೇ ಆಲೋಚನೆ ಮಾಡುವುದು ಹೆಚ್ಚು. ಮಹಿಳೆಯರ ಸೌಂದರ್ಯ, ಆರೋಗ್ಯದ ಬಗ್ಗೆ ಎಲ್ಲರೂ ಚರ್ಚೆ ಮಾಡುತ್ತಾರೆ. ಆದರೆ, ಪುರುಷರ ಬಗ್ಗೆ ಆಲೋಚನೆ ಮಾಡುವವರು ಬೆರಳೆಣಿಕೆಯಷ್ಟು ಮಾತ್ರ. 
ವಿವಾಹ ಸಂದರ್ಭದಲ್ಲಿ ತಾವು ಸುಂದರವಾಗಿ ಕಾಣಬೇಕೆಂದು ಪ್ರತೀಯೊಬ್ಬರೂ ಬಯಸುತ್ತಾರೆ. ಆದರೆ, ಯಾರ ಹತ್ತಿರವೂ ಹೇಳಿಕೊಳ್ಳುವುದಿಲ್ಲ. ವಿವಾಹದ ವೇಳೆ ಪುರುಷರು ಆಕರ್ಷಕವಾಗಿ ಕಾಣಬೇಕೆದರೆ, ತ್ವಚೆ ಹಾಗೂ ಕೂದಲಿನ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಬೇಕು. 
ಹಾಗಾದರೆ, ಪುರುಷರು ತಮ್ಮ ಚರ್ಮದ ಆರೈಕೆಯನ್ನು ಹೇಗೆ ಮಾಡಿಕೊಳ್ಳಬೇಕು...? ಇದಕ್ಕೆ ಇಲ್ಲಿದೆ ಕೆಲ ಸಲಹೆಗಳು...
  • ಚಳಿಗಾಲದಲ್ಲಿಯೂ ಚರ್ಮ ಹೊಳೆಯಬೇಕೆಂದರೆ, 15 ದಿನಗಳಿಗೊಮ್ಮೆ ಒಡೆದ ಚರ್ಮವನ್ನು ತೆಗೆಯಬೇಕು. 
  • ನಿಮ್ಮ ಚರ್ಮಕ್ಕೆ ಹೊಂದಿಕೊಳ್ಳುವ ಮೈಲ್ಡ್ ಮೊಯ್ಸ್'ಚರೈಸಿಂಗ್ ಫೇಸ್ ವಾಷ್ ನಿಂದ ಪ್ರತೀ 3-4 ಗಂಟೆಗಳಿಗೊಮ್ಮೆ ಮುಖವನ್ನು ತೊಳೆಯುತ್ತಿರಿ. 
  • ಹೊರಗೆ ಹೋಗುವುದಕ್ಕೂ ಮುನ್ನ ಸನ್'ಸ್ಕ್ರೀನ್ ಜೆಲ್ ಅಥವಾ ಲೋಷನ್ ಬಳಕೆ ಮಾಡಿ. ಎಸ್'ಪಿಎಫ್ 30 ಅಥವಾ 40 ಇರುವ ಸನ್'ಸ್ಕ್ರೀನ್ ಗಳು ಪುರುಷರ ಚರ್ಮಕ್ಕೆ ಉತ್ತಮವಾಗಿರುತ್ತವೆ. 
  • ತ್ವಚೆ ಸದಾಕಾಲ ತಾಜಾವಾಗಿರಲು ಲೋಷನ್ ಬಳಕೆ ಮಾಡಿ. ಸ್ನಾನ ಮಾಡಿದ ಕೂಡಲೇ ಲೋಷನ್ ಹಚ್ಚಿ. 
  • ದೇಹಕ್ಕೆ ಎಣ್ಣೆಯಿಂದ ಮಸಾಜ್ ಮಾಡುವುದು ಅತ್ಯುತ್ತವಾಗಿರುತ್ತದೆ. ಪ್ರಮುಖವಾಗಿ ಚಳಿಗಾಲದಲ್ಲಿ ಇದು ಅತ್ಯುತ್ತಮವಾಗಿ ಕೆಲಸ ಮಾಡುತ್ತದೆ. ಎಣ್ಣೆ ಸ್ನಾನ ಕೇವಲ ಚರ್ಮ ಒಡೆಯುವುದನ್ನು ದೂರವಷ್ಟೇ ಮಾಡುವುದಿಲ್ಲ. ದೇಹಕ್ಕೆ ಆರಾಮದಾಯಕವನ್ನೂ ನೀಡುತ್ತದೆ. 
  • ಪ್ರತೀನಿತ್ಯ ಪುರುಷರಿಗೆ ಎದುರಾಗುವ ಸಮಸ್ಯೆಯೆಂದರೆ, ಅದು ಶೇವಿಂಗ್. ಶೇವಿಂಗ್ ವೇಳೆ ಸಾಕಷ್ಟು ಪುರುಷರು ಚರ್ಮವನ್ನು ಹಾಳು ಮಾಡಿಕೊಳ್ಳುತ್ತಾರೆ. ಇದಕ್ಕೆ ಪರಿಹಾರವೆಂದರೆ, ಶೇವಿಂಗ್ ಮಾಡುವುದನ್ನೇ ನಿಯಂತ್ರಿಸಿ ಟ್ರಿಮ್ಮರ್ ಬಳಕೆ ಮಾಡಬೇಕು. ಇಲ್ಲದಿದ್ದರೆ, ಶೇವಿಂಗ್ ಮಾಡಿದ ಬಳಿಕ ಲೋಷನ್ ನಿಂದ ಮುಖವನ್ನು ಮಸಾಜ್ ಮಾಡಿಕೊಳ್ಳಬೇಕು. 
  • ದೇಹದಲ್ಲಿರುವ ವಿಷಯುಕ್ತ ಜೀವಾಣುಗಳನ್ನು ಹೊರಹಾಕರು ಹೆಚ್ಚಾಗಿ ನೀರು ಕುಡಿಯಬೇಕು. ನೀರು ಹೆಚ್ಚಾಗಿ ಕುಡಿಯುವುದರಿಂದ ಚರ್ಮದ ಆರೋಗ್ಯ ಉತ್ತಮವಾಗಿರುತ್ತದೆ. ಕಾಫಿ ಹಾಗೂ ಮದ್ಯಪಾನ ಮಾಡುವುದನ್ನು ನಿಲ್ಲಿಸಿ. ಸಿಗರೇಟ್ ಸೇದುವುದರಿಂದಲೂ ಚರ್ಮ ಒಣಗುತ್ತವೆ. 
  • ರಾತ್ರಿ ಮಲಗುವುದಕ್ಕೂ ಮುನ್ನ ಮುಖವನ್ನು ಚೆನ್ನಾಗಿ ತೊಳೆಯಿರಿ. ರಾತ್ರಿ ವೇಳೆ ಹಚ್ಚುವ ಕ್ರೀಮ್ ಗಳನ್ನು ಬಳಕೆ ಮಾಡಿ. ಇದರಿಂದ ಕಣ್ಣಿನ ಸುತ್ತಲೂ ಇರುವ ಕಪ್ಪು ವರ್ತುಲ ಕಡಿಮೆಯಾಗುತ್ತದೆ. 
  • ಸದಾ ಕಾಲ ನಗು ನಗುತ್ತಾ ಇರಿ. ನಿಮ್ಮಲ್ಲಿರುವ ಸಂತೋಷ ನಿಮ್ಮ ಮುಖದ ಚರ್ಮದಲ್ಲಿ ಕಂಡು ಬರುತ್ತದೆ. 
  • ಮನೆಯಲ್ಲಿಯೇ ಮಾಡಿದ್ದ ಸ್ಕ್ರಬ್ ಗಳನ್ನು ಬಳಕೆ ಮಾಡಿ. ಅರ್ಧಬಟ್ಟಲಿನಷ್ಟು ಸಕ್ಕರೆ ಹಾಗೂ ಒಂದು ಬಟ್ಟಲು ಕೊಬ್ಬರಿ ಎಣ್ಣೆಗೆ ಹಾಕಿ ಸ್ಕ್ರಬ್ ಮಾಡಿಕೊಂಡು ದೇಹಕ್ಕೆ ಹಚ್ಚಿ ಸ್ನಾನ ಮಾಡಬೇಕು. 
  • ಸ್ಕ್ರಬ್ ಬಳಕೆ ಮಾಡುವ ವೇಳೆ ಉದ್ದವಾದ ಶವರ್ ಬ್ರಷ್ ಗಳನ್ನು ಬಳಕೆ ಮಾಡಿ. 
  • ಕಾಸ್ಮೆಟಾಲಜಿಸ್ಟ್ ಗಳು ಶಿಫಾರಸು ಮಾಡಿದ್ದರೆ. ಒಣಗಿದ ಚರ್ಮಗಳನ್ನು ತೆಗೆಯಲು ನಿಮ್ಮ ಚರ್ಮಕ್ಕೆ ಸೂಕ್ತವೆನಿಸುವ ರಾಸಾಯನಿಕ ಮತ್ತು ಎಕ್ಸ್ಫಾಲಿಯೇಶನ್ ಚಿಕಿತ್ಸೆಗಳನ್ನೂ ಕೂಡ ಪಡೆಯಬಹುದು. 
  • ಚಳಿಗಾಲದಲ್ಲಿ ಸಾಧ್ಯವಾದಷ್ಟು ಬಿಸಿ ನೀರು ಬಳಕೆಯನ್ನು ನಿಯಂತ್ರಿಸಿ. ಚಳಿಗಾಲದಲ್ಲಿ ಬಿಸಿ ನೀರು ಬಳಕೆ ಮಕಾಡುವುದರಿಂದ ಚರ್ಮ ಮೃದುವಾಗಿರುವುದಿಲ್ಲ. ಬೆಚ್ಚಗಿನ ನೀರನ್ನು ಬಳಕೆ ಮಾಡಿ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com