ಮಕ್ಕಳಲ್ಲಿ ಬೊಜ್ಜಿನ ಪ್ರಮಾಣ ಕಡಿಮೆಗೊಳಿಸಲು 'ವಿಟಮಿನ್ ಡಿ' ಸಹಕಾರಿ!

ಆಧುನಿಕ ಜೀವನ ಶೈಲಿ, ಬದಲಾದ ಆಹಾರ ಪದ್ಧತಿ ಹಾಗೂ ಅಶಿಸ್ತಿನ ಜೀವನದಿಂದಾಗಿ ಬೊಜ್ಜು ಇದೀಗ ಬಹುದೊಡ್ಡ ಸಮಸ್ಯೆಯಾಗಿ ಜನರನ್ನು ಕಾಡತೊಡುಗುತ್ತಿದೆ. ಕೆಲಸದ ಒತ್ತಡ ಹಾಗೂ ಸಮಯದ ಅಭಾವದಿಂದಾಗಿ ಬಹುತೇಕ ಜನರು ಮನೆ ಊಟ...
ಮಕ್ಕಳಲ್ಲಿ ಬೊಜ್ಜಿನ ಪ್ರಮಾಣ ಕಡಿಮೆಗೊಳಿಸಲು 'ವಿಟಮಿನ್ ಡಿ' ಸಹಕಾರಿ!
ಮಕ್ಕಳಲ್ಲಿ ಬೊಜ್ಜಿನ ಪ್ರಮಾಣ ಕಡಿಮೆಗೊಳಿಸಲು 'ವಿಟಮಿನ್ ಡಿ' ಸಹಕಾರಿ!
Updated on
ಆಧುನಿಕ ಜೀವನ ಶೈಲಿ, ಬದಲಾದ ಆಹಾರ ಪದ್ಧತಿ ಹಾಗೂ ಅಶಿಸ್ತಿನ ಜೀವನದಿಂದಾಗಿ ಬೊಜ್ಜು ಇದೀಗ ಬಹುದೊಡ್ಡ ಸಮಸ್ಯೆಯಾಗಿ ಜನರನ್ನು ಕಾಡತೊಡುಗುತ್ತಿದೆ. ಕೆಲಸದ ಒತ್ತಡ ಹಾಗೂ ಸಮಯದ ಅಭಾವದಿಂದಾಗಿ ಬಹುತೇಕ ಜನರು ಮನೆ ಊಟ ಬದಲಿಗೆ, ಹೋಟೆಲ್ ಊಟದ ಮೇಲೆಯೇ ಹೆಚ್ಚು ಅವಲಂಬಿತರಾಗಿ ಹೋಗಿದ್ದಾರೆ. 
ಇದರ ಜೊತೆಗೆ ಬಾಯಿ ಚಪಲಕ್ಕೆ ಕರಿದ ಪದಾರ್ಥಗಳು, ಗೋಬಿ ಮಂಚೂರಿ, ನೂಡಲ್ಸ್ ನಂತರ ಮನುಷ್ಯನ ದೇಹವನ್ನು ಮತ್ತಷ್ಟು ಹಿಗ್ಗುವಂತೆ ಮಾಡುತ್ತಿದೆ. ಇತ್ತೀಚಿನ ದಿನಗಳಲ್ಲಿ ಮಕ್ಕಳಲ್ಲೂ ಕೂಡ ಬೊಜ್ಜು ಸಮಸ್ಯೆಗಳು ಕಾಣಿಸತೊಡಗಿವೆ. ಇದು ಬಹುತೇಕ ಪೋಷಕರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. 
ಮಕ್ಕಳಲ್ಲಿ ಬೊಜ್ಜು ಸಮಸ್ಯೆಯನ್ನು ದೂರಾಗಿಸಲು ವಿಟಮಿನ್ ಡಿ ಅತ್ಯಂತ ಸಹಕಾರಿಯಾಗಿದೆ. ಯಾವ ಮಕ್ಕಳ ದೇಹದಲ್ಲಿ ಅತೀ ಹೆಚ್ಚು ವಿಟಮಿನ್ ಡಿ ಇರುತ್ತದೆಯೇ ಅಂತಹ ಮಕ್ಕಳಲ್ಲಿ ಬೊಜ್ಜು ಸಮಸ್ಯೆಗಳು ಕಾಣಿಸುವುದು ಅತ್ಯಂತ ವಿರಳವೆಂದು ಹೇಳಲಾಗುತ್ತಿದೆ. 
ವಿಟಮಿನ್ ಡಿ ಬೊಜ್ಜನ್ನು ಕಡಿಮೆ ಮಾಡಲು ಸಹಕಾರಿಯಾಗಿದೆ. ಇಲ್ಲದೆ, ಹೃದಯದ ರಕ್ತನಾಳಗಳಲ್ಲಿ ಉಂಟಾಗುವ ಸಮಸ್ಯೆಗಳನ್ನು ಇದು ದೂರಾಗಿಸಲಿದೆ. 
ಮಕ್ಕಳಲ್ಲಿ ವಿಟಮಿನ್ ಡಿ ಮಟ್ಟವು ಪ್ರತೀ ಲೀಟರಿಗೆ 80 ನ್ಯಾಮೋಮೋಲ್ಗಳಿದ್ದರೆ ಅವರಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆಯಿರುತ್ತದೆ ಎಂದು ಅರ್ಧ ಎಂದು ಅಧ್ಯಯನವೊಂದು ಹೇಳಿದೆ. 
ಈ ಕುರಿತಂತೆ ಜರ್ನಲ್ ಆಫ್ ಕ್ರಿನಿಕಲ್ ಎನ್ಡೌಕ್ರಿನೋಲಜಿ ಆ್ಯಂಡ್ ಮೆಟಬಾಲಿಸಂ ವರದಿ ಪ್ರಕಟಿಸಿದೆ. ವಿಟಮನ್ ಡಿ ಹೇರಳವಾಗಿರುವ 6-8 ವರ್ಷದ ಒಟ್ಟು 500 ಮಕ್ಕಳನ್ನು ಯುನಿವರ್ಸಿಟಿ ಆಫ್ ಈಸ್ಟರ್ನ್ ಫಿನ್ ಲ್ಯಾಂಡ್ ಅಧ್ಯಯನಕ್ಕೊಳಪಡಿಸಿದ್ದು, ಅಧ್ಯಯನದಲ್ಲಿ ಕೇವಲ ಬೊಜ್ಜು ಕಡಿಮೆಯಾಗುವುದಷ್ಟೇ ಅಲ್ಲದೆ, ಮೂಲಗಳು ಗಟ್ಟಿಗೊಳ್ಳಲು, ಹೃದಯ ರಕ್ತನಾಳಗಳಲ್ಲಿ ಉಂಟಾಗುವ ಸಮಸ್ಯೆಗಳ ಕಡಿಮೆಯಾಗುವುದು. ದೇಹದ ಆರೋಗ್ಯ ಹೆಚ್ಚಿಸುವುದು, ದೈಹಿಕ ಚಟುವಟಿಕೆಗಳು ಹೆಚ್ಚಿಸುವುದು ಹಾಗೂ ಚರ್ಮದ ಸಮಸ್ಯೆಗಳನ್ನು ದೂರಾಗಿಸಲಿದೆ ಎಂದು ತಿಳಿದುಬಂದಿದೆ. 
ಡೈರಿ ಉತ್ಪನ್ನಗಳು, ಮೀನುಗಳು ವಿಟಮಿನ್ ಡಿ ಜೀವಸತ್ವದ ಆಹಾರ ಮೂಲಗಳಾಗಿವೆ. ಕಿತ್ತಳೆ ಹಣ್ಣಿನ ರಸ, ಸೋಯಾ, ಹಾಲು, ಬೆಣ್ಣೆ ಮತ್ತು ಮೊಟ್ಟೆ, ಧಾನ್ಯಗಳಲ್ಲಿ ವಿಟಮಿನ್ ಡಿ ಹೆಚ್ಚಾಗಿ ಕಂಡುಬರುತ್ತದೆ. ಮಕ್ಕಳ ಆಹಾರಗಳಲ್ಲಿ ವಿಟಮಿನ್ ಡಿ ಸತ್ವ ಹೆಚ್ಚಾಗಿದ್ದರೆ, ಅದು ಹೃದಯಕ್ಕೆ ಸಂಬಂಧಿಸಿದ ಅಪಾಯಕಾರಿ ಅಂಶಗಳ ಮೇಲೆ ಧನಾತ್ಮಕ ಪರಿಣಾಮಗಳನ್ನು ಬೀರಲಿದೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com