ತ್ವಚೆಯ ಆರೈಕೆಯಲ್ಲಿ ಟೋನರ್ ಮುಖ್ಯವೇಕೆ?... ನ್ಯಾಚುರಲ್ ಟೋನರ್ ಬಳಸಿ ಅಂದ ಹೆಚ್ಚಿಸಿಕೊಳ್ಳಿ

ತ್ವಚೆಯ ರಕ್ಷಣೆಯಲ್ಲಿ ಸ್ವಚ್ಛತೆ ಅತ್ಯಂತ ಮುಖ್ಯವಾದ್ದದು. ಸಾಕಷ್ಟು ಮಹಿಳೆಯರು ಮುಖದ ಸ್ವಚ್ಚತೆ ಕಾಪಾಡಲು ಫೇಸ್ ವಾಷ್ ಗಳನ್ನು ಬಳಿಸಿ ನಂತರ ಲೋಷನ್ ಹಚ್ಚಿಕೊಂಡರೆ ಸಾಕೆಂದು ತಿಳಿದಿರುತ್ತಾರೆ. ಆದರೆ, ಇದಷ್ಟೇ ಸಾಕಾಗುವುದಿಲ್ಲ. ತ್ವಚೆಯ ರಕ್ಷಣೆಗೆ ಟೋನರ್ ಕೂಡ ಮುಖ್ಯವಾಗಿದೆ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on
ತ್ವಚೆಯ ರಕ್ಷಣೆಯಲ್ಲಿ ಸ್ವಚ್ಛತೆ ಅತ್ಯಂತ ಮುಖ್ಯವಾದ್ದದು. ಸಾಕಷ್ಟು ಮಹಿಳೆಯರು ಮುಖದ ಸ್ವಚ್ಚತೆ ಕಾಪಾಡಲು ಫೇಸ್ ವಾಷ್ ಗಳನ್ನು ಬಳಿಸಿ ನಂತರ ಲೋಷನ್ ಹಚ್ಚಿಕೊಂಡರೆ ಸಾಕೆಂದು ತಿಳಿದಿರುತ್ತಾರೆ. ಆದರೆ, ಇದಷ್ಟೇ ಸಾಕಾಗುವುದಿಲ್ಲ. ತ್ವಚೆಯ ರಕ್ಷಣೆಗೆ ಟೋನರ್ ಕೂಡ ಮುಖ್ಯವಾಗಿದೆ. 
ತ್ವಚೆಯ ಸುರಕ್ಷತೆಗೆ ಕ್ಲೆನ್ಸಿಂಗ್, ಟೋನಿಂಗ್ ಮತ್ತು ಎಕ್ ಫಾಲಿಯೇಟಿಂಗ್ ಅತಿ ಅವಶ್ಯಕವಾದದ್ದು. ವಾತಾವರಣ ಬದಲಾದಾಗ ಮಹಿಳೆಯರು ಟೋನರ್ ಗಳಿಗೆ ಹೆಚ್ಚಿನ ಆದ್ಯತೆಗಳನ್ನು ನೀಡಬೇಕು. ಪ್ರಮುಖವಾಗಿ ಎಣ್ಣೆ ತ್ವಚೆಯುಳ್ಳು ಮಹಿಳೆಯರು. 
ಟೋನರ್ ಗಳನ್ನು ಬಳಕೆ ಮಾಡುವುದರಿಂದ ತ್ವಚೆ ಉತ್ತಮವಾಗಿರುತ್ತದೆ. ಇದರಿಂದ ಸಾಕಷ್ಟು ಸಾಕಷ್ಟು ಲಾಭಗಳೂ ಇವೆ. ತ್ವಚೆಯಲ್ಲಿರುವ ಎಣ್ಣೆ, ಚರ್ಮ ಉತ್ತಮವಾಗಿರುವಂತೆ ನೋಡಿಕೊಳ್ಳುತ್ತದೆ ಎಂದು ಕಯಾ ಕ್ಲಿನಿಕ್ ಉಪಾಧ್ಯಕ್ಷೆ ಸಂಗೀತಾ ವೆಲಸ್ಕರ್ ಅವರು ಹೇಳಿದ್ದಾರೆ. 
ಟೋನರ್ ನಿಂದಾಗುವ ಲಾಭಗಳು ಹಾಗೂ ಟೋನರ್ ಗಳನ್ನು ಖರೀದಿಸುವಾಗ ಗಮನದಲ್ಲಿಟ್ಟುಕೊಳ್ಳಬೇಕಾದ ಅಂಶಗಳು ಈ ಕೆಳಗಿನಂತಿವೆ...
  • ಟೋನಿಂಗ್ ನಿಂದ ಚರ್ಮದ ಕಲ್ಮಶಗಳು ಹಾಗೂ ಧೂಳು ತೆಗೆಯಲು ಸಾಧ್ಯವಾಗುತ್ತದೆ. ಅಲ್ಲದೆ, ರಂಧ್ರಗಳು ಕುಗ್ಗಿ ಅಂತಿಮ ಹಂತವಾಗಿರುವ ಮಾಯಿಶ್ಚರೈಸ್ ಮಾಡಲು ಚರ್ಮವನ್ನು ಸಜ್ಜುಗೊಳಿಸುತ್ತದೆ. 
  • ಒಳ್ಳೆಯ ಟೋನರ್ ಗಳು ರಂಧ್ರಗಳನ್ನು ಮುಚ್ಚಿ, ಚರ್ಮದ ಪಿಹೆಚ್ ಮಟ್ಟ ಕಾಪಾಡುತ್ತದೆ. ಚರ್ಮದಿಂದ ಎಣ್ಣೆಯನ್ನು ತೆಗೆಯುತ್ತದೆ. ಅಲ್ಲದೆ ಚರ್ಮದಲ್ಲಿರುವ ಸತ್ತ ಕೋಶಗಳನ್ನು ತೆಗೆದು ಹಾಕುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. 
  • ಟೋನರ್ ಗಳು ತ್ವಚೆ ರಂದ್ರಗಳನ್ನು ಮುಚ್ಚುವುದಲ್ಲದೆ, ರಂಧ್ರಗಳನ್ನು ಬಿಗಿಗೊಳಿಸುತ್ತವೆ. ಧೂಳು ಚರ್ಮದೊಳಗೆ ಹೋಗದಂತೆ ನೋಡಿಕೊಳ್ಳುತ್ತದೆ. ಭವಿಷ್ಯದಲ್ಲಿ ಬರುವ ಮೊಡವೆಗಳನ್ನು ಟೋನರ್ ತಡೆಯುತ್ತದೆ. ಇಲ್ಲದೆ, ತ್ವಚೆಯಲ್ಲಿ ಉಂಟಾಗುವ ಕಿರಿಕಿರಿಗಳನ್ನು ದೂರಾಗಿಸುತ್ತವೆ. 
  • ಟೋನರ್ ಗಳನ್ನು ಖರೀದಿ ಮಾಡುವಾಗ ನೈಸರ್ಗಿಕ ಟೋನರ್ ಗಳನ್ನೇ ಖರೀದಿ ಮಾಡಿ. ಆಲ್ಕೋಹಾಲ್ ಫ್ರೀ ಟೋನರ್ ಗಳನ್ನು ಖರೀದಿ ಮಾಡಿ. ಏಕೆಂದರೆ, ಕೆಲ ಟೋನರ್ ಗಳಲ್ಲಿ ಆಲ್ಕೋಹಾಲ್ ಬಳಕೆ ಮಾಡಲಾಗಿದ್ದು, ಇವು ಚರ್ಮದ ರಕ್ಷಣಾ ಪದರಗಳನ್ನು ಮತ್ತಷ್ಟು ಹಾನಿಗೊಳಗಾಗುವಂತೆ ಮಾಡುತ್ತವೆ. 
  • ಹೊರಗಿನಿಂದ ಖರೀದಿ ಮಾಡುವುದಕ್ಕಿಂತಲೂ ಸಾಧ್ಯವಾದಷ್ಟು ಮನೆಯಲ್ಲಿಯೇ ನ್ಯಾಚುರಲ್ ಆಗಿ ಟೋನರ್ ಗಳನ್ನು ತಯಾರು ಮಾಡಿಕೊಳ್ಳುವುದು ಅತ್ಯುತ್ತಮವಾಗಿರುತ್ತದೆ. 
  • ಮನೆಯಲ್ಲಿಯೇ ಬೆಳಸಲಾಗುವ ಆಲೋವೇರಾ ಹಾಗೂ ಸೌತೆಕಾಯಿಯಿಂದಲೂ ಟೋನರ್ ಗಳನ್ನು ಸಿದ್ಧಪಡಿಸಿಕೊಳ್ಳಬಹುದು.
  • ಅಲೋವೆರಾದ ಎಲೆ ಕತ್ತರಿಸಿಕೊಂಡು ಅದರ ಲೋಳೆಯನ್ನು ಹೊರೆಗೆ ತೆಗೆಯಬೇಕು. ತಾಜಾ ಆಲೋವೆರಾ ಸಿಗದೆ ಇದ್ದರೆ ಮಾರುಕಟ್ಟೆಯಲ್ಲಿ ಸಿಗುವ ಅಲೋವೆರಾ ಕೂಡ ಬಳಕೆ ಮಾಡಿಕೊಳ್ಳಬಹುದು. ಎರಡು ಚಮಚ ಅಲೋವೆರಾಗೆ ನೀರು ಹಾಕಿ ಸ್ವಲ್ಪ ತೆಳು ಮಾಡಿಕೊಳ್ಳಿ. ಇದನ್ನು ಸ್ಟ್ರೇ ಬಾಟಲಿಗೆ ಹಾಕಿ ಮತ್ತು ನಿಮಗೆ ಬೇಕಾದಾಗ ಮುಖಕ್ಕೆ ಹಾಕಿಕೊಂಡು ಬಳಕೆ ಮಾಡಿ.
  • ಒಂದು ಸಣ್ಣ ಸೌತೆಕಾಯಿ ತೆಗೆದುಕೊಂಡು ಅದನ್ನು ಸಣ್ಣ ತುಂಡುಗಳನ್ನಾಗಿ ಮಾಡಿಕೊಂದು ಇದನ್ನು ಒಂದು ಕಪ್ ನೀರಿಗೆ ಹಾಕಿ 10-12 ನಿಮಿಷಗಳ ಕಾಲ ಕುದಿಸಿ. ಮುಚ್ಚಳ ಹಾಕಿ ಕುದಿಸಿ. ನಂತರ ತಣ್ಣಗಾಗಲು ಬಿಡಿ. ಬಳಿಕ ನೀರನ್ನು ಬಸಿದು ಸ್ಪ್ರೇ ಬಾಟಲಿಗೆ ಹಾಕಿ ಫ್ರಿಡ್ಜ್ ನಲ್ಲಿಟ್ಟುಕೊಳ್ಳಬಹುದು. 5-7 ದಿನಗಳ ಕಾಲ ಇದನ್ನು ಬಳಕೆ ಮಾಡಬಹುದು. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com