ಹಠ ಮಾಡುವ ಮಕ್ಕಳಿಗೆ ಊಟ ಮಾಡಿಸುವುದು ಹೇಗೆ? ಇಲ್ಲಿವೆ ಒಂದಷ್ಟು ಸಲಹೆ...

ನನ್ನ ಮಗು ಸರಿಯಾಗಿ ಊಟ ಮಾಡುತ್ತಿಲ್ಲ, ಆಟವಿದ್ದರೆ ಸಾಕು ಊಟದ ನೆನಪೇ ಆಗುವುದಿಲ್ಲ. ಇದು ತಂದೆ-ತಾಯಿಗಳ ಪ್ರತೀನಿತ್ಯದ ದೂರು. ಇತ್ತೀಚಿನ ದಿನಗಳಲ್ಲಿ ಮಕ್ಕಳಿಗೆ ಊಟ ಮಾಡಿಸುವುದು ಪೋಷಕರಿಗೆ ಸಾಹಸವಾಗಿ ಹೋಗಿದೆ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ನನ್ನ ಮಗು ಸರಿಯಾಗಿ ಊಟ ಮಾಡುತ್ತಿಲ್ಲ, ಆಟವಿದ್ದರೆ ಸಾಕು ಊಟದ ನೆನಪೇ ಆಗುವುದಿಲ್ಲ. ಇದು ತಂದೆ-ತಾಯಿಗಳ ಪ್ರತೀನಿತ್ಯದ ದೂರು. ಇತ್ತೀಚಿನ ದಿನಗಳಲ್ಲಿ ಮಕ್ಕಳಿಗೆ ಊಟ ಮಾಡಿಸುವುದು ಪೋಷಕರಿಗೆ ಸಾಹಸವಾಗಿ ಹೋಗಿದೆ. ಇನ್ನು ಹಠ ಮಾಡುವ ಮಕ್ಕಳಿದ್ದರೆ ಸಾಕು ಪೋಷಕರು ಪಾಡು ಹೇಳ ತೀರದು. ಮಗು ಏನಾದರೂ ತಿಂದರೆ ಸಾಕು ಎಂದು ಅದು ಕೇಳಿದ್ದನ್ನೆಲ್ಲಾ ಕೊಡಿಸಿ ಹೊಟ್ಟೆ ತುಂಬಿಸುವುದು ಪರಿಪಾಠವಾಗಿ ಬೆಳೆಯುತ್ತಿದೆ. 
ಊಟ ಮಾಡುವಾಗ ಮಕ್ಕಳು ಹಠ ಮಾಡುವುದು ಸಹಜ. ಆದರೆ, ಮಕ್ಕಳಿಗೆ ಯಾವ ರೀತಿ ಆಹಾರ ತಿನ್ನಿಸಬೇಕು ಎಂಬ ತಂತ್ರಗಳು ಪೋಷಕರಿಗೆ ತಿಳಿದಿರಬೇಕು. ಸಾಮಾನ್ಯವಾಗಿ ಮಕ್ಕಳು ಆರೋಗ್ಯಕರ ಆಹಾರಗಳನ್ನು ತಿರಸ್ಕರಿಸಿ ಕುರುಕಲು ತಿಂಡಿಗಳನ್ನು ಕೇಳುತ್ತಾರೆ. ಮಕ್ಕಳಲ್ಲಿರುವ ಹಠಮಾರಿತನವನ್ನು ಹೋಗಲಾಡಿಸಲು ತಾಯಂದಿರು ಪ್ರಯತ್ನಗಳನ್ನು ಪಡಲೇಬೇಕು. ಇಲ್ಲದೇ ಹೋದರೆ ನಿಮ್ಮ ಕಂದಮ್ಮ ಪೋಷಕಾಂಶಗಳ ಕೊರತೆಯಿಂದ ಬಳಲುವ ಸಾಧ್ಯತೆಗಳಿರುತ್ತವೆ. 
ಹಾಗಾದರೆ ಮಕ್ಕಳಿಗೆ ಆಹಾರವನ್ನು ಹೇಗೆ ತಿನ್ನಿಸಬೇಕು? ಇದಕ್ಕೆ ಇಲ್ಲಿದೆ ಕೆಲ ತಂತ್ರಗಳು...
  • ಸಾಮಾನ್ಯವಾಗಿ ಮಕ್ಕಳು ಪೋಷಕರನ್ನು ಅನುಕರಿಸುವ ಪ್ರಯತ್ನಗಳನ್ನು ಮಾಡುತ್ತವೆ. ಈ ವೇಳೆ ಮಕ್ಕಳೊಂದಿಗೆ ಹಾಗೂ ಕುಟುಂಬದ ಜೊತೆಗೆ ಊಟ ಮಾಡಲು ಸಾಧ್ಯವಾದಷ್ಟು ಪ್ರಯತ್ನ ಪಡಿ. ಇತರರು ತಿನ್ನುವುದನ್ನು ನೋಡಿ ಮಕ್ಕಳು ತಾನೂ ಕೂಡ ತಿನ್ನುವುದನ್ನು ಆರಂಭಿಸುತ್ತದೆ. 
  • ತಿಂಡಿಯನ್ನು ಹೇಗೆ ಬಡಿಸುತ್ತೇವೆತ ಎಂಬುದನ್ನು ಗಾರ್ನಿಷಿಂಗ್ ಎಂದು ಕರೆಯಲಾಗುತ್ತದೆ. ಅದು ಕೇವಲ ಫ್ಯಾಷನ್ ಮಾತ್ರವೇ ಅಲ್ಲ. ಮನಕ್ಕೆ ಹಿತ ಕೊಡುವ ಕ್ರಮ ಕೂಡ ಹೌದು. ಈ ಹಿಂದೆ ಬಾಳೆಯೆಲೆಯ ಮೇಲಿನ ಊಟ ತಿಂಡಿ ಬರು ರುಚಿಯಾಗಿರುತ್ತಿತ್ತು. ಜೊತೆಗೆ ಆರೋಗ್ಯ ಕೂಡ ಇರುತ್ತಿತ್ತು. ಆಹಾರವನ್ನು ಅಲಂಕರಿಸಿ ಕೊಡುವ ವಿಧಾನ ಕೂಡ ಮಕ್ಕಳನ್ನು ಆಕರ್ಷಣೆಗೊಳಗಾಗುವಂತೆ ಮಾಡಬೇಕು. ಹಣ್ಣುಗಳನ್ನು ಭಿನ್ನ ಹಾಗೂ ವಿಭಿನ್ನ ರೀತಿಯಲ್ಲಿ ಕತ್ತರಿಸಿ ಕೊಡಬೇಕು. ಇದರಂತೆ ಪ್ರತಿನಿತ್ಯ ತರಕಾರಿ ಸೂಪ್ ಹಾಗೂ ಫ್ರೂಟ್ ಜ್ಯೂಸ್ ಗಳನ್ನು ಅವರಿಗಿಷ್ಟವಾಗುವ ರೀತಿಯಲ್ಲಿ ನೀಡಿ. 
  • ಸಾಧ್ಯವಾದಷ್ಟು ಆರೋಗ್ಯಕರ ತಿನಿಸುಗಳನ್ನೇ ಮಾಡಿ. ಆರೋಗ್ಯಕರ ಆಹಾರವನ್ನು ನಿರಾಕರಿಸಿ ಕುರುಕಲು ತಿಂಡಿಗಳನ್ನು ಮಕ್ಕಳು ಇಷ್ಟಪಟ್ಟರೆ, ಅವರನ್ನು ನಿಂದಿಸಬೇಕು. ಅವರ ಬೇಡಿಕೆಗಳನ್ನು ಸಮಾಧಾನಕರವಾಗಿ ಏನನ್ನೂ ಹೇಳದೆಯೇ ತಿರಸ್ಕರಿಸಲು ಆರಂಭಿಸಿ. 
  • ಯಾವುದನ್ನೇ ಆದರೂ ಬಲವಂತದಿಂದ ತಿನ್ನಿಸಲು ಹೋಗದಿರಿ. ಮಗು ಹಸಿವಾಗುತ್ತಿದೆ ಎಂಬಾದ ಹೊಸ ಹೊಸ ವಿಧಾನಗಳಲ್ಲಿ ಆಹಾರಗಳನ್ನು ನೀಡಲು ಆರಂಭಿಸಿ. 
  • ಸಾಮಾನ್ಯವಾಗಿ ಮಕ್ಕಳು ತರಕಾರಿ ವಿಷವೆಂಬಂತೆ ಹಾಗೂ ಸಿಹಿ ತಿನಿಸುಗಳು ಉತ್ತಮ ಆಹಾರವೆಂದು ತಿಳಿಯುತ್ತಾರೆ. ಇಂತಹ ಸಂದರ್ಭದಲ್ಲಿ ಪ್ರತೀನಿತ್ಯ ಊಟ ಮಾಡುವ ಆಹಾರದ ಜೊತೆಗೆ ಜೊತೆಗೆ ಮಕ್ಕಳು ತರಕಾರಿಗಳನ್ನು ತೆಗೆದು ಹಾಕದಂತೆ ಅವರಿಗೆ ತಿಳಿಯದಂತೆ ತರಕಾರಿಗಳನ್ನು ಸೇರಿಸಲು ಆರಂಭಿಸಿ. ಉದಾ: ತರಕಾರಿಯಲ್ಲಿ ಬಜ್ಜಿ ಮಾಡುವುದು. 
  • ಪರೋಟ, ಇಡ್ಲಿ, ಉಪ್ಪಿಟ್ಟಿನಲ್ಲಿ ತರಕಾರಿಗಳನ್ನು ಸೇರಿಸಿ. ಇದರಿಂದ ಆಹಾರ ಅಲಂಕಾರ ಹಾಗೂ ಹೆಚ್ಚು ವರ್ಣರಂಜಿತವಾಗಿರುತ್ತದೆ. 
  • ಸಾಮಾನ್ಯವಾಗಿ ಮಕ್ಕಲು ವಿಭಿನ್ನ ಹಾಗೂ ವಿನೂತನ ಆಹಾರಗಳನ್ನು ತಿನ್ನಲು ಇಷ್ಟಪಡುತ್ತಾರೆ. ಪ್ರತೀ ನಿತ್ಯ ಒಂದೇ ರೀತಿಯ ಆಹಾರ ಪದಾರ್ಥಗಳನ್ನು ಮಾಡುವ ಬದಲು ವಿಭಿನ್ನ ರೀತಿಯ ಆಹಾರ ಪದಾರ್ಥಗಳನ್ನು ತಯಾರು ಮಾಡಲು ಆರಂಭಿಸಿ. 
  • ಆಹಾರ ಪದಾರ್ಥಗಳನ್ನು ತಯಾರಿಸುವಾಗ ನಿಮ್ಮೊಂದಿಗೆ ಮಕ್ಕಳನ್ನು ಸೇರಿಸಿಕೊಂಡು ಕೆಲಸ ಮಾಡಲು ಆರಂಭಿಸಿ. ಜ್ಯೂಸ್ ಮಾಡುವಾಗ ಅದನ್ನು ತಿರುಗಿಸಲು ಅಥವಾ ಮೊಟ್ಟೆ ಸಿಪ್ಪೆ ತೆಗೆಯಲು ಹೀಗೆ ಸಣ್ಣಪುಟ್ಟ ಕೆಲಸಗಳನ್ನು ನೀಡುತ್ತಿರಿ. 
  • ಮಕ್ಕಳನ್ನು ಪ್ರತೀ ಬಾರಿ ನಿಂದಿಸದಿರಿ. ಸಾಧ್ಯವಾದಷ್ಟು ಸಮಾಧಾನದಿಂದಿರಿ. ಮಕ್ಕಳನ್ನು ಕೋಪದಲ್ಲಿ ನೋಡಿದಷ್ಟು ಅವು ನಮ್ಮನ್ನು ಕೆಟ್ಟವರೆಂದೇ ಭಾವಿಸಲು ಆರಂಭಿಸುತ್ತದೆ. ಟಿವಿ, ಮೊಬೈಲ್ ಗಳಲ್ಲಿ ಹೆಚ್ಚು ಸಮಯ ಕಳೆಯುವ ಬದಲು ಮಕ್ಕಳೊಂದಿಗೆ ಹೆಚ್ಚು ಸಮಯವನ್ನು ಕಳೆಯಿರಿ. ಇದು ಮಕ್ಕಳು ಹಾಗೂ ನಮ್ಮ ನಡುವಿನ ಬಾಂಧವ್ಯವನ್ನು ಮತ್ತಷ್ಟು ಹೆಚ್ಚಾಗುತ್ತದೆ. ಮಕ್ಕಳು ನಮ್ಮ ಮಾತನ್ನು ನಿಧಾನಗತಿಯಲ್ಲಿ ಕೇಳಲು ಆರಂಭಿಸುತ್ತವೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com