ದೈನಂದಿನ ಜೀವನದಲ್ಲಿ ಹೆಚ್ಚು ಕಾರ್ಯಕ್ಷಮತೆಯಿಂದ ಕೂಡಿರಲು ರಾತ್ರಿ ವೇಳೆ ಉತ್ತಮ ನಿದ್ರೆ ಅತ್ಯಂತ ಮುಖ್ಯವಾಗಿರುತ್ತದೆ. ನಾಕಷ್ಟು ನಿದ್ರೆ ಇಲ್ಲದಿರುವುದರಿಂದ ಗಂಭೀರ ಪ್ರತಿಕೂಲ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. ತೂಕ ಹೆಚ್ಚುವುದು, ರಕ್ತದೊತ್ತಡ, ರೋಗ ನಿರೋಧಕ ಶಕ್ತಿ ಕುಂದುವುದು, ಮಧುಮೇಹ, ಭಾವನೆಗಳಲ್ಲಿ ಬದಲಾವಣೆ, ಕಳಪೆ ನೆನಪಿನ ಶಕ್ತಿ ಮತ್ತು ಏಕಾಗ್ರತೆಯಲ್ಲಿ ಕೊರತೆಯ ಮುಂತಾದ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ.