
ಬೆಂಗಳೂರು: ಹಳೇ ಕಾಲದ ಚಿತ್ರ ನೋಡುವುದು ಎಂದರೆ ಏನೋ ಒಂದು ರೀತಿಯ ಖುಷಿ. ಅದರಲ್ಲೂ ಹಳೇ ಕಾಲದ ನಟಿಯರು ಎಂದರೇನೇ ಸಾಕಷ್ಟು ಜನರಿಗೆ ಅಚ್ಚಮೆಚ್ಚು. ಹಳೇ ನಟಿಯರ ಹಾವ, ಭಾವ, ವೇಷ, ಭೂಷಣ, ನಟನಾ ವೈಖರಿಗೆ ಸಾಕಷ್ಟು ಜನರು ಫಿದಾ ಆಗದವರುಂಟೇ?...
ಒಂದು ಕಾಲದಲ್ಲಿ ಕನ್ನಡ ಚಿತ್ರರಂಗವನ್ನು ಆಳಿದ್ದ 23 ಮಹಾನಟಿಯರಿಗೆ ಗೌರವ ಸಲ್ಲಿಸುವ ಸಲುವಾಗಿ ವಸ್ತ್ರ ವಿಸ್ಯಾನಗಾರ್ತಿಯೊಬ್ಬರು ವಿಭಿನ್ನ ರೀತಿಯ ಸೀರೆಯೊಂದನ್ನು ವಿನ್ಯಾಸ ಮಾಡಿದ್ದು, ಈ ಸೀರೆಯನ್ನು ಉಟ್ಟ ನಟಿ ಅದಿತಿ ರಾವ್ ಅವರು ಎಲ್ಲಾ ಮಾನಿನಿಯರ ಗಮನ ಸೆಳೆಯುತ್ತಿದ್ದಾರೆ.
ಲಕ್ಷ್ಮೀ ಕೃಷ್ಣ ಎಂಬುುವವರು ಈ ಸೀರೆಯನ್ನು ವಿನ್ಯಾಸ ಮಾಡಿದ್ದು, ಈ ವಿಭಿನ್ನ ಸೀರೆಯನ್ನು ಉಟ್ಟಿರುವ ಅದಿತಿ ಪ್ರಭುದೇವ ಅವರು ಫೋಟೋ ಶೂಟ್ ಮಾಡಿಸಿದ್ದಾರೆ.
ಸೀರೆಗೆ ತಕ್ಕಂತೆಯೇ ಥೀಮ್'ನ್ನು ಹುಡುಕಲಾಗಿದ್ದು, ಅದರಂತೆ ಅಧಿತಿಯವರ ಮನೆಯ ಬಳಿಯೇ ಫೋಟೋ ಶೂಟ್ ನಡೆಸಲಾಗಿದೆ.
ಸೀರೆ ಬಗ್ಗೆ ಹೇಳುತ್ತಿದ್ದಂತೆಯೇ ಅದಿತಿ ಅವತ್ತು ಥ್ರಿಲ್ ಆಗಿದ್ದರು. ಸಂಪೂರ್ಣ ಚಿತ್ರಕ್ಕಾಗಿ ಸಾಕಷ್ಟು ಶ್ರಮ ಪಡಲಾಗಿದೆ. ಸೀರೆ ಕೇವಲ ಟ್ರೋಲ್ ಆಗುವುದಷ್ಟೇ ಅಲ್ಲ, ಕನ್ನಡ ಚಿತ್ರರಂಗವನ್ನು ಆಳಿದ್ದ ಮಹಾನಟಿಯರ ಸಮಯವನ್ನು ನೆನಪು ಮಾಡುತ್ತದೆ. ಬಾಲಿವುಡ್ ನಲ್ಲಿ ಈ ರೀತಿಯ ಸಾಕಷ್ಟು ಪ್ರಯತ್ನಗಳು ನಡೆದಿವೆ. ಆದರೆ, ದಕ್ಷಿಣದಲ್ಲಿ ಈ ಪ್ರಯತ್ನಗಳು ಅತ್ಯಂತ ಕಡಿಮೆ. ಯಾರಾದರೂ ಈ ಪ್ರಯತ್ನವನ್ನು ಮಾಡಲೇಬೇಕಿತ್ತು. ಸೀರೆ ವಿನ್ಯಾಸ ಮಾಡಲು 15-20 ದಿನಗಳು ಬೇಕಾಯಿತು. ಲಾಕ್'ಡೌನ್ ಇದ್ದರಿಂದ ಸೀರೆ ಮೇಲೆ ಮುದ್ರೆಗೊಳ್ಳಲು ತಡವಾಯಿತು ಎಂದು ವಸ್ತ್ರವಿನ್ಯಾಸಗಾರ್ತಿ ಲಕ್ಷ್ಮೀ ಕೃಷ್ಣಾ ಅವರು ಹೇಳಿದ್ದಾರೆ.
ಸೀರೆಯಲ್ಲಿ ಲಕ್ಷ್ಮೀ, ಸಾವಿತ್ರಿ, ಪ್ರೇಮ, ಲೀಲಾವತಿ, ಮಂಜುಳ ಹಾಗೂ ಪ್ರೇಮ ಸೇರಿದಂತೆ ಒಟ್ಟು 23 ಕನ್ನಡ ಚಿತ್ರರಂಗದ ನಟಿಯರಿದ್ದು, ಪ್ರಸ್ತುತ ಯುವ ಜನತೆ ಈ ನಟಿಯರ ಬಗ್ಗೆ ತಿಳಿದುಕೊಳ್ಳಬೇಕು ಎಂಬುದು ನನ್ನ ಆಶಯವಾಗಿದೆ. ಸೀರೆ ಮಾರಾಟದಲ್ಲಿಲ್ಲ. ಆದರೆ, ಮನವಿಗಳ ಮೇರೆಗೆ ಸೀರೆಯನ್ನು ಮಾರಾಟ ಮಾಡಲು ಸಿದ್ಧಳಿದ್ದೇನೆ. ಬಾಲಿವುಡ್ ನಟಿಯರ ಚಿತ್ರವಿರುವ ಸೀರೆಯನ್ನೂ ಶೀಘ್ರದಲ್ಲೇ ವಿನ್ಯಾಸ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.
Advertisement