ಜೀರ್ಣಕ್ರಿಯೆ ಸುಲಭವಾಗಿಸಲು ಹೊಟ್ಟೆಯ ಆರೋಗ್ಯ ಕಾಪಾಡುವುದು ಹೇಗೆ?

ಮನುಷ್ಯನ ದೇಹದಲ್ಲಿ ಪ್ರಮುಖ ಅಂಗಗಳಲ್ಲಿ ಹೊಟ್ಟೆ ಕೂಡ ಒಂದಾಗಿದ್ದು, ಅತ್ಯಂತ ಪ್ರಮುಖವಾಗಿದೆ. ನಾವು ಸೇವಿಸುವ ಆಹಾರವನ್ನು ಸರಿಯಾದ ರೀತಿಯಲ್ಲಿ ತನ್ನಲ್ಲಿ ಶೇಖರಣೆ ಮಾಡಿ ಅದನ್ನು ಜೀರ್ಣವಾಗುವಂತೆ ನೋಡಿಕೊಂಡು ನಮ್ಮ ಇಡೀ ದೇಹಕ್ಕೆ ಶಕ್ತಿ ಸಂಚಾರವನ್ನು ಏರ್ಪಡಿಸುವ ಕಾರ್ಯವನ್ನು ಹೊಟ್ಟೆ ಮಾಡುತ್ತದೆ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಮನುಷ್ಯನ ದೇಹದಲ್ಲಿ ಪ್ರಮುಖ ಅಂಗಗಳಲ್ಲಿ ಹೊಟ್ಟೆ ಕೂಡ ಒಂದಾಗಿದ್ದು, ಅತ್ಯಂತ ಪ್ರಮುಖವಾಗಿದೆ. ನಾವು ಸೇವಿಸುವ ಆಹಾರವನ್ನು ಸರಿಯಾದ ರೀತಿಯಲ್ಲಿ ತನ್ನಲ್ಲಿ ಶೇಖರಣೆ ಮಾಡಿ ಅದನ್ನು ಜೀರ್ಣವಾಗುವಂತೆ ನೋಡಿಕೊಂಡು ನಮ್ಮ ಇಡೀ ದೇಹಕ್ಕೆ ಶಕ್ತಿ ಸಂಚಾರವನ್ನು ಏರ್ಪಡಿಸುವ ಕಾರ್ಯವನ್ನು ಹೊಟ್ಟೆ ಮಾಡುತ್ತದೆ. ಹೊಟ್ಟೆಗೆ ಊಟ ಕಡಿಮೆಯಾದರೂ ಅಥವಾ ಹಸಿವು ಹೆಚ್ಚಾದರೂ ಅದು ದೇಹದ ಸಂಪೂರ್ಣ ಪರಿಣಾಮ ಬೀರುತ್ತದೆ. ಹೀಗಾಗಿ ಹಸಿವಾದಾಗ ಎಲ್ಲರ ಗಮನ ಹೊಟ್ಟೆಯ ಮೇಲಿರುತ್ತದೆ. 

ಇತ್ತೀಚಿನ ದಿನಗಳಲ್ಲಿ ಸಮಯದ ಅಭಾವದಿಂದಾಗಿ ಜನರು ಫಾಸ್ಟ್ ಫುಡ್ ಹಾಗೂ ಜಂಕ್ ಫುಡ್ ಗಳ ಮೊರೆ ಹೋಗುತ್ತಿದ್ದು, ಆರೋಗ್ಯಕರ ಆಹಾರಗಳನ್ನು ಮರೆತು ಹೋಗುತ್ತಿದ್ದಾರೆ. ಹೀಗಾಗಿ ಜನರದಲ್ಲಿ ಹೊಟ್ಟೆಯ ಸಮಸ್ಯೆಗಳು, ಅಜೀರ್ಣ ಸಮಸ್ಯೆಗಳು ಹೆಚ್ಚಾಗುತ್ತಿದೆ. 

ಹೊಟ್ಟೆಯಲ್ಲಿ ಸಮಸ್ಯೆಗಳು ಎದುರಾದಾಗ ಸಾಮಾನ್ಯವಾಗಿ ಮಲಬದ್ಧತ, ಅಜೀರ್ಣ, ಎದೆ  ಉರಿ, ಗ್ಯಾಸ್ಟ್ರಿಕ್, ಹೊಟ್ಟೆಯ ಸೋಂಕು, ವಿಪರೀತವಾದ ಉಷ್ಣ ಎಂಬ ಸಮಸ್ಯೆಗಳು ಎದುರಾಗುತ್ತವೆ. ಮನುಷ್ಯನ ಹೊಟ್ಟೆ ಆರೋಗ್ಯವಾಗಿರಬೇಕೆಂದರೆ ಮೊದಲು ನಾವು ತಿನ್ನುವಂತಹ ಆಹಾರ ಜೀರ್ಣವಾಗಬೇಕು. ಅದಕ್ಕಾಗಿ ಆರೋಗ್ಯಕರ ಆಹಾರ ಸೇವನೆ ಅತ್ಯಗತ್ಯ. ಜೀರ್ಣಕ್ರಿಯೆ ಸುಲಭವಾಗಿಸಲು ಕೆಲಸ ಸಲಹೆಗಳು ಇಲ್ಲಿವೆ...

  • ತಿನ್ನುವಂತಹ ಆಹಾರ ಜೀರ್ಣಿಸಿಕೊಳ್ಳಲು ಕಷ್ಟವಾಗುತ್ತಿದೆ ಎನ್ನುವವರು, ಆಹಾರ ತಿಂದ ಕೂಡಲೇ ಬಿಸಿ ನೀರನ್ನು ಕುಡಿಯಬೇಕು. ಪ್ರತಿದಿನ ಬೆಳಿಗ್ಗೆ ಅಥವಾ ಊಟಕ್ಕೆ ಅರ್ಧಗಂಟೆ ಮೊದಲು ಬಿಸಿ ನೀರನ್ನು ಕುಡಿಯುವುದರಿಂದ ಜೀರ್ಣ ಕ್ರಿಯೆ ಚೆನ್ನಾಗಿ ಆಗುತ್ತದೆ. ಇದರಿಂದ ಹೊಟ್ಟೆಯಲ್ಲಿರುವ ಗ್ಯಾಸ್ ರಸ ಉತ್ಪತ್ತಿಯಾಗುವುದು ನಿಯಂತ್ರಣಗೊಳ್ಳುತ್ತದೆ. 
  • ಅಜೀರ್ಣ ತಪ್ಪಿಸಲು  ಸರಿಯಾದ ಸಮಯಕ್ಕೆ ತಿನ್ನುವುದನ್ನು ರೂಪಿಸಿಕೊಳ್ಳಬೇಕು. 
  • ನಾವು ಯಾವ ರೀತಿ ಆಹಾರ ಸೇವಿಸುತ್ತೇವೆಂಬುದು ಕೂಡ ಜೀರ್ಣಕ್ರಿಯೆಯ ಮೇಲೆ ಪರಿಣಾಮ ಬೀರುತ್ತದೆ. ಹೀಗಾಗಿ ಕುಳಿತುಕೊಂಡು ಆರಾಮವಾಗಿ ಆಹಾರವನ್ನು ಸೇವಿಸಿ ಆನಂದಿಸಬೇಕು. 
  • ಅಜೀರ್ಣ ಸಮಸ್ಯೆ ದೂರವಿಡಲು ಸಾಕಷ್ಟು ನೀರನ್ನು ಕುಡಿಯಬೇಕು. ಇದು ದೇಹವನ್ನು ಸ್ವಚ್ಛಗೊಳಿಸುತ್ತದೆ ಅಲ್ಲದೆ, ಅಜೀರ್ಣವಾಗದಂತೆ ನೋಡಿಕೊಳ್ಳುತ್ತದೆ. 
  • ಆರೋಗ್ಯಕರ ಆಹಾರ ಸೇವನೆ ಮಾಡಿ, ಪ್ರತಿನಿತ್ಯ ತಿನ್ನುವ ಆಹಾರದಲ್ಲಿ ತರಕಾರಿ, ಹಣ್ಣುಗಳನ್ನು ಸೇವನೆ ಮಾಡಿ. ತರಕಾರಿಯಿಂದ ಮಾಡಿದ ಸಲಾಡ್ ಸೇವನೆ ಮಾಡಿ. ಪ್ರಮುಖವಾಗಿ ನಾರಿನ ಪದಾರ್ಥವುಳ್ಳ ತರಕಾರಿಗಳನ್ನು ಸೇವಿಸಿರಿ. ಇದರಿಂದ ಮಲಬದ್ಧತೆ ಸಮಸ್ಯೆ ದೂರಾಗುವುದೂ ಅಲ್ಲದೆ, ಜೀರ್ಣ ಕ್ರಿಯೆ ಕೂಡ ಸುಲಭವಾಗುತ್ತದೆ. 
  • ತಿಂದ ಕೂಡಲೇ ಕುಳಿತುಕೊಳ್ಳುವುದು ಹಾಗೂ ಮಲಗುವ ಅಭ್ಯಾಸಗಳಿದ್ದರೆ ಮೊದಲು ಅದನ್ನು ಬಿಡಿ. ದೇಹವನ್ನು ಹೆಚ್ಚು ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವಂತೆ ಮಾಡುವುದರಿಂದ ಇದು ತಿಂದ ಆಹಾರವನ್ನು ಜೀರ್ಣ ಮಾಡಿಕೊಳ್ಳಲು ಸಹಾಯ ಮಾಡುತ್ತದೆ. ಅಲ್ಲದೆ, ರಕ್ತ ಸಂಚಲನವನ್ನು ಸರಾಗವಾಗಿಸುತ್ತದೆ. 
  • ಹೆಚ್ಚೆಚ್ಚು ಬೆಣ್ಣೆ, ತುಪ್ಪ, ಎಣ್ಣೆ ಇರುವ ಆಹಾರದಿಂದ ದೂರವಿರಿ. ಪ್ರೋಟೀನ್ ವುಳ್ಳ ಆಹಾರವನ್ನು ಸೇವನೆ ಮಾಡಿ. ಇದರಿದ ದೇಹದ ಆರೋಗ್ಯ ಉತ್ತಮವಾಗಿರುತ್ತದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com