ರಾತ್ರಿಯಿಡೀ ವಿಡಿಯೊ ಗೇಮ್ ನಲ್ಲಿ ಬ್ಯುಸಿ, ಹಗಲು ಪೂರ್ತಿ ನಿದ್ದೆ: ಮಕ್ಕಳ 'ಬಿಂಗ್ ಗೇಮ್' ಚಟ ಪೋಷಕರಿಗೆ ತಲೆನೋವು!

ಕೋವಿಡ್-19 ಸಂಕಷ್ಟದಿಂದಾಗಿ ಶಾಲೆಗಳು ಇನ್ನೂ ಆರಂಭವಾಗಿಲ್ಲ, ಹಗಲಿಡೀ ಮಕ್ಕಳನ್ನು ಮನೆಯಲ್ಲಿ ನೋಡಿಕೊಳ್ಳುವುದು, ಅವರು ಆನ್ ಲೈನ್ ನಲ್ಲಿ ಸರಿಯಾಗಿ ಪಾಠ ಕೇಳುವಂತೆ ಮಾಡುವುದು ಪೋಷಕರಿಗೆ ಸಾಹಸವಾಗಿದೆ. ಅದರ ಜೊತೆಗೆ ಇದೀಗ ಪೋಷಕರಿಗೆ ಮತ್ತೊಂದು ತಲೆನೋವು ಎದುರಾಗಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಕೋವಿಡ್-19 ಸಂಕಷ್ಟದಿಂದಾಗಿ ಶಾಲೆಗಳು ಇನ್ನೂ ಆರಂಭವಾಗಿಲ್ಲ, ಹಗಲಿಡೀ ಮಕ್ಕಳನ್ನು ಮನೆಯಲ್ಲಿ ನೋಡಿಕೊಳ್ಳುವುದು, ಅವರು ಆನ್ ಲೈನ್ ನಲ್ಲಿ ಸರಿಯಾಗಿ ಪಾಠ ಕೇಳುವಂತೆ ಮಾಡುವುದು ಪೋಷಕರಿಗೆ ಸಾಹಸವಾಗಿದೆ. ಅದರ ಜೊತೆಗೆ ಇದೀಗ ಪೋಷಕರಿಗೆ ಮತ್ತೊಂದು ತಲೆನೋವು ಎದುರಾಗಿದೆ.

ಅದು ರಾತ್ರಿಯಿಡೀ ಮಕ್ಕಳು ನಿದ್ದೆ ಮಾಡದೆ ಮೊಬೈಲ್ ನಲ್ಲಿ ವಿಡಿಯೊ ಗೇಮ್, ವೆಬ್ ಸಿರೀಸ್(ಬಿಂಗ್ ಗೇಮ್) ಆಡುತ್ತಿರುತ್ತಾರೆ, ಬೆಳಗ್ಗೆ 10 ಗಂಟೆಯಾದರೂ ಹಾಸಿಗೆಯಿಂದ ಏಳುವುದಿಲ್ಲ ಎಂದು!

ಶಾಲೆಗೆ ಹೋಗಲು ಇಲ್ಲ ಎಂದು ಮಕ್ಕಳು ತಡರಾತ್ರಿಯವರೆಗೆ ನಿದ್ದೆ ಮಾಡದೆ ಮೊಬೈಲ್ ನಲ್ಲಿ ಆಡುತ್ತಿರುತ್ತಾರೆ, ಹಗಲು ಅವರಿಗೆ ನಿದ್ದೆ ಬರುತ್ತದೆ, ಸರಿಯಾಗಿ ಆನ್ ಲೈನ್ ಕ್ಲಾಸ್ ನಲ್ಲಿ ಭಾಗಿಯಾಗುವುದಿಲ್ಲ. ಇದು ಉದ್ಯೋಗಕ್ಕೆ ಹೋಗುವ ಪೋಷಕರಿಗಂತೂ ತುಂಬಾ ಸಮಸ್ಯೆಯಾಗಿದೆ, ಹೀಗಾದರೆ ತಮ್ಮ ಮಕ್ಕಳ ಭವಿಷ್ಯವೇನು ಎಂದು ಆತಂಕದಿಂದ ನಿಮ್ಹಾನ್ಸ್ ನ ತಂತ್ರಜ್ಞಾನ ಬಳಕೆಯ ಆರೋಗ್ಯ ಸೇವೆ(ಶಟ್ ಕ್ಲಿನಿಕ್)ಗೆ ಪ್ರತಿದಿನ ನೂರಾರು ದೂರುಗಳು ಬರುತ್ತಿರುತ್ತದೆ.

ಶಟ್ ಕ್ಲಿನಿಕ್ ನ ಮುಖ್ಯ ಕ್ಲಿನಿಕಲ್ ಮನಃಶಾಸ್ತ್ರಜ್ಞ ಡಾ ಮನೋಜ್ ಶರ್ಮ, ಹಿಂದೆಲ್ಲಾ ವಯಸ್ಕರಲ್ಲಿ ಈ ಬಿಂಗ್ ಗೇಮ್ ಸಾಮಾನ್ಯವಾಗಿರುತ್ತಿತ್ತು. ಈ ಕೊರೋನಾ ಲಾಕ್ ಡೌನ್ ಆದ ಮೇಲೆ ಮಕ್ಕಳಲ್ಲಿಯೂ ಚಟ ಹೆಚ್ಚಾಗುತ್ತಿದೆ. ಎರಡೂ ಗಂಟೆಗೂ ಅಧಿಕ ಯಾವುದೇ ವೆಬ್ ಸಿರೀಸ್ ನೋಡುವುದನ್ನು ಬಿಂಗ್ ಗೇಮಿಂಗ್ ಎಂದು ಕರೆಯಲಾಗುತ್ತಿದ್ದು ಇದು ಆರೋಗ್ಯಕ್ಕೆ ಹಾನಿಕರ. ಅಂತಾರಾಷ್ಟ್ರೀಯ ಮಟ್ಟದಲ್ಲಿ 5 ಗಂಟೆಗೂ ಅಧಿಕ ಕಾಲ ಮಕ್ಕಳು ಈ ರೀತಿ ಮೊಬೈಲ್ ಗೇಮ್ ಆಡುತ್ತಿದ್ದರೆ ಅದನ್ನು ಬಿಂಗ್ ಗೇಮ್ ಎನ್ನುತ್ತಾರೆ. ಆದರೆ ಭಾರತದಲ್ಲಿ ಇತ್ತೀಚೆಗೆ ಕೆಲವು ಮಕ್ಕಳು 10 ಗಂಟೆಗೂ ಅಧಿಕ ಕಾಲ ಮೊಬೈಲ್ ನಲ್ಲಿ ವಿಡಿಯೊ ಗೇಮ್ ಗಳಲ್ಲಿ ಮುಳುಗಿರುತ್ತಾರೆ. ಅದು ರಾತ್ರಿ ಹೊತ್ತಿನಲ್ಲಿ ನಿದ್ದೆ ಬಿಟ್ಟು ಆಡುತ್ತಾರೆ. ಇದರಿಂದ ಮಕ್ಕಳ ಮಾನಸಿಕ ಆರೋಗ್ಯದ ಮೇಲೆ ಖಂಡಿತಾ ದುಷ್ಪರಿಣಾಮ ಬೀರುತ್ತದೆ ಎನ್ನುತ್ತಾರೆ.

ಈ ರೀತಿ ಗೇಮ್ಸ್ ಆಡುವವರು ಹೆಚ್ಚಾಗಿ 15ರಿಂದ 18 ವರ್ಷದೊಳಗಿನವರು. ಶಾಲಾ, ಕಾಲೇಜು ಇಲ್ಲದಿರುವಾಗ ಹೀಗೆ ರಾತ್ರಿಯಿಡೀ ಪೋಷಕರು ನಿದ್ದೆ ಮಾಡುತ್ತಿರುವಾಗ ಆಡುತ್ತಾರೆ ಎನ್ನುತ್ತಾರೆ ಡಾ ಶರ್ಮ.

ಮಕ್ಕಳು ಹಗಲು ಹೊತ್ತಿನಲ್ಲಿ ನಿದ್ದೆಯಲ್ಲಿರುತ್ತಾರೆ, ಏನೂ ಚಟುವಟಿಕೆ ಮಾಡುವುದಿಲ್ಲ, ಮಕ್ಕಳಲ್ಲಿ ಈ ರೀತಿ ಆಟವಾಡಬೇಡಿ ಎಂದು ಹೇಳಿದರೆ ಸಿಟ್ಟು ಮಾಡಿಕೊಂಡು ಎದುರುತ್ತರ ಕೊಡುತ್ತಾರೆ. ರಾತ್ರಿ ಹೊತ್ತಿನಲ್ಲಿ ಅವರಿಗೆ ಆಟವಾಡಲು ಮಜಾ ಬರುತ್ತದೆ.

ಅಂತಾರಾಷ್ಟ್ರೀಯ ಮಟ್ಟದ ಗೇಮ್ ನಲ್ಲಿ ಆಟಗಾರರೊಂದಿಗೆ ಆಟವಾಡಿ ಅದರಲ್ಲಿ ಪಾಯಿಂಟ್ಸ್ ಗಳಿಸಿದಾಗ ಮಕ್ಕಳು ಖುಷಿಯಾಗುತ್ತಾರೆ, ಮನೆಯಲ್ಲಿ ಪೋಷಕರು ಬೈಯುತ್ತಿದ್ದರೆ, ಶಾಲೆಯಲ್ಲಿ ಶಿಕ್ಷಕರಿಂದ ಪ್ರೋತ್ಸಾಹದ ಮಾತುಗಳು ಸಿಗದಿದ್ದಾಗ ಈ ರೀತಿ ವಿಡಿಯೊ ಗೇಮ್ ಗಳ ಚಟಕ್ಕೆ ಬೀಳುತ್ತಾರೆ. ಇದರಿಂದ ಹೊರಬರಲು ಪೋಷಕರು, ವೈದ್ಯರು ಖಂಡಿತಾ ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದು ಡಾ ಶರ್ಮ ಹೇಳುತ್ತಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com