ಚಳಿಗಾಲ ಶುರುವಾದರೆ ಸಾಕು ಎಲ್ಲರಿಗೂ ಒಂದಲ್ಲಾ ಒಂದು ರೀತಿಯಲ್ಲಿ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಚಳಿಗಾಲವು ರೋಗಕಾರಕಗಳು ಸುಲಭವಾಗಿ ಹರಡಲು ಸೂಕ್ತವಾದ ವಾತಾವರಣವನ್ನು ಒದಗಿಸುತ್ತದೆ. ಶೀತ, ಕೆಮ್ಮು, ಉಸಿರಾಟ ಸಮಸ್ಯೆಗಳು ಸೇರಿದಂತೆ ಮೊದಲಾದ ಆರೋಗ್ಯ ಸಮಸ್ಯೆಗಳಂತೂ ಸಾಮಾನ್ಯವಾಗಿ ಬಿಡುತ್ತವೆ. ಪ್ರಮುಖವಾಗಿ ಮಕ್ಕಳಲ್ಲಿ ಈ ಸಮಸ್ಯೆ ಹೆಚ್ಚಾಗಿ ಕಾಡುತ್ತವೆ. ಹೀಗಾಗಿಯೇ ಚಳಿಗಾಲ ಬಂತೆಂದರೆ ಪೋಷಕರಿಗೆ ದೊಡ್ಡ ತಲೆನೋವು ಶುರುವಾಗುತ್ತದೆ.
ಚಳಿಗಾಲದಲ್ಲಿ ಮಕ್ಕಳ ಆರೋಗ್ಯದ ಕಡೆಗೆ ಹೆಚ್ಚಿನ ಕಾಳಜಿವಹಿಸುವುದು ಅತ್ಯಗತ್ಯವಾಗಿದ್ದು, ಈ ಸಂದರ್ಭದಲ್ಲಿ ಸೋಂಕು ತಡೆಗಟ್ಟುವ ವಿಧಾನಗಳು ಹಾಗೂ ಕೆಲವು ಸತ್ಯ-ಮಿಥ್ಯಗಳನ್ನು ಇಲ್ಲಿ ವಿವರಿಸಲಾಗಿದೆ...
ಮಿಥ್ಯ: ಮಕ್ಕಳಲ್ಲಿ ಪ್ರತೀ ಬಾರಿ ಮೂಗು ಸೋರಿದಾಗಲೂ ಆ್ಯಂಟಿಬಯಾಟಿಕ್ ಬಳಕೆ ಮಾಡುವುದು ಅಗತ್ಯ ಎಂದು ಹೇಳಲಾಗುತ್ತದೆ.
ಸತ್ಯ: ಮೂಗು ಸೋರಿದರೆ ಆ್ಯಂಟಿಬಯಾಟಿಕ್ ಬಳಕೆಯ ಅಗತ್ಯವಿಲ್ಲ. ಶೀತ, ಜ್ವರ ಹಾಗೂ ಶ್ವಾಸಕೋಶಕ್ಕೆ ಸಂಬಂಧಿಸಿದ ಬಹುತೇಕ ಸಮಸ್ಯೆಗಳು ವೈರಸ್ ನಿಂದ ಎದುರಾಗುತ್ತವೆ. ಅನಗತ್ಯವಾಗಿ ಆ್ಯಂಟಿಬಯಾಟಿಕ್ ಬಳಕೆ ಮಾಡಿದರೆ, ಅದು ದೇಹದಲ್ಲಿರುವ ರೋಗ ನಿರೋಧಕ ಶಕ್ತಿಯನ್ನು ಕುಗ್ಗಿಸುವ ಸಾಧ್ಯತೆಗಳು ಹೆಚ್ಚಾಗಿರುತ್ತದೆ.
ಮಿಥ್ಯ: ಮಕ್ಕಳು ಜಾಕೆಟ್ ಇಲ್ಲದೆ ತಂಪಾದ ವಾತಾವರಣದಲ್ಲಿ ಆಟವಾಡಿದರೆ ಶೀತವಾಗುತ್ತದೆ...
ಸತ್ಯ: ಶೀತವು ಸಾಮಾನ್ಯವಾಗಿ ವೈರಸ್ ಗಳಿಂದ ಎದುರಾಗುತ್ತದೆಯೇ ಹೊರತು ಶೀತಯುಕ್ತ ವಾತಾವರಣದಿಂದಲ್ಲ. ಹೀಗಾಗಿ ತಂಪಾದ ವಾತಾವರಣದಲ್ಲೂ ಮಕ್ಕಳು ಆಟವಾಡಬಹುದು.
ಮಿಥ್ಯ: ಫ್ಲೂ ಲಸಿಕೆ ಪಡೆದರೆ ಜ್ವರ ಬರುತ್ತದೆ.
ಸತ್ಯ: ಫ್ಲೂ ಲಸಿಕೆಯನ್ನು ಸತ್ತ ರೋಗಕಾರಕಗಳಿಂದ ತಯಾರಿಸಲಾಗುತ್ತದೆ. ಹೀಗಾಗಿ ಈ ಲಸಿಕೆಗಳಿಂದ ಜ್ವರ ಬರಲು ಸಾಧ್ಯವಿಲ್ಲ.
ಮಿಥ್ಯ: ಹೆಚ್ಚೆಚ್ಚು ಜೀವಸತ್ವಗಳು ಮತ್ತು ಖನಿಜವುಳ್ಳ ಆಹಾರ ಸೇವನೆಯಿಂದ ಮಕ್ಕಳು ಅನಾರೋಗ್ಯದಿಂದ ದೂರ ಉಳಿಯಬಹುದು.
ಸತ್ಯ: ಹೆಚ್ಚೆಚ್ಚು ಜೀವಸತ್ವಗಳು ಮತ್ತು ಖನಿಜವುಳ್ಳ ಆಹಾರ ಸೇವಿಸಿದರೆ ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ ನಿಜ. ಆದರೆ, ಇದು ಮಕ್ಕಳಲ್ಲಿ ಶೀತ, ಜ್ವರ ಬರದಂತೆ ಮಾಡುವುದಿಲ್ಲ.
ಚಳಿಗಾಲದಲ್ಲಿ ಅನಾರೋಗ್ಯದಿಂದ ದೂರ ಉಳಿಯುವುದು ಹೇಗೆ?
ಈ ಕೆಳಕಂಡ ಲಕ್ಷಣಗಳು ಕಂಡು ಬಂದರೆ ಕೂಡಲೇ ಪೋಷಕರು ಜಾಗ್ರತೆ ವಹಿಸಬೇಕು...
Advertisement