ಡಿಹೆಚ್ಎ ಎಂದರೇನು? ಗರ್ಭಿಣಿ ಮಹಿಳೆಯರಿಗೆ ಇದು ಎಷ್ಟು ಮುಖ್ಯ? ಇಲ್ಲಿದೆ ಮಾಹಿತಿ...

ತಾಯಿಯ ಹೊಟ್ಟೆಯಲ್ಲಿದ್ದಾಗ ಮಗು ಎಲ್ಲಾ ರೀತಿಯ ಪೋಷಕಾಂಶಗಳನ್ನು ಪಡೆದುಕೊಳ್ಳುತ್ತಿರುತ್ತದೆ. ಈ ಸಂದರ್ಭದಲ್ಲಿ ಮಹಿಳೆಯರು ಅತೀ ಹೆಚ್ಚು ಪೋಷಕಾಂಶ ಇರುವಂತಹ ಆಹಾರವನ್ನು ಸೇವನೆ ಮಾಡುವುದು ಅತ್ಯವಶ್ಯಕವಾಗಿರುತ್ತದೆ. ಇದರಿಂದ ತಾಯಿಯ ಮತ್ತು ಮಗುವಿನ ಆರೋಗ್ಯ ಉತ್ತಮವಾಗಿರುವುದಲ್ಲದೆ, ಮಗುವಿನ ಬೆಳವಣಿಗೆ ಕೂಡ ಉತ್ತಮವಾಗಿರುತ್ತದೆ. 

Published: 23rd June 2021 02:21 PM  |   Last Updated: 23rd June 2021 02:21 PM   |  A+A-


file photo

ಸಂಗ್ರಹ ಚಿತ್ರ

Posted By : Manjula VN
Source : The New Indian Express

ತಾಯಿಯ ಹೊಟ್ಟೆಯಲ್ಲಿದ್ದಾಗ ಮಗು ಎಲ್ಲಾ ರೀತಿಯ ಪೋಷಕಾಂಶಗಳನ್ನು ಪಡೆದುಕೊಳ್ಳುತ್ತಿರುತ್ತದೆ. ಈ ಸಂದರ್ಭದಲ್ಲಿ ಮಹಿಳೆಯರು ಅತೀ ಹೆಚ್ಚು ಪೋಷಕಾಂಶ ಇರುವಂತಹ ಆಹಾರವನ್ನು ಸೇವನೆ ಮಾಡುವುದು ಅತ್ಯವಶ್ಯಕವಾಗಿರುತ್ತದೆ. ಇದರಿಂದ ತಾಯಿಯ ಮತ್ತು ಮಗುವಿನ ಆರೋಗ್ಯ ಉತ್ತಮವಾಗಿರುವುದಲ್ಲದೆ, ಮಗುವಿನ ಬೆಳವಣಿಗೆ ಕೂಡ ಉತ್ತಮವಾಗಿರುತ್ತದೆ. 

ತಾಯಿಯಾಗುವವರಿಗೆ ಎಲ್ಲಾ ಪೋಷಕಾಂಶಗಳು ಮುಖ್ಯವೇ ಆಗಿದೆ. ಆದರೆ, ಫೋಲಿಕ್ ಆ್ಯಸಿಡ್, ಐರನ್, ವಿಟಮಿನ್ ಡಿ, ಕ್ಯಾಲ್ಶಿಯಂ, ಅಯೋಡಿನ್ ಮತ್ತು ಡಿಹೆಚ್ಎ ಪ್ರಮುಖವಾಗಿವೆ. ಈ ಡಿಹೆಚ್ಎ ಎಲ್ಲಾ ಆಹಾರಗಳಲ್ಲೂ ಸಿಗುವುದಿಲ್ಲ. ಗರ್ಭಧಾರಣೆ ಸಂದರ್ಭದಲ್ಲಿ ಎದುರಾಗುವ ರಕ್ತದೊತ್ತಡ, ಶಿಶುವಿನ ಬೆಳವಣಿಗೆ ವಿಳಂಬವಾಗುವಂತೆ ಮಾಡುವ ಅಪಾಯಗಳನ್ನು ಈ ಡಿಹೆಚ್ಎ ದೂರ ಮಾಡುತ್ತದೆ. 

ಡಿಹೆಚ್ಎ ಎಂದರೇನು? ಗರ್ಭಿಣಿ ಮಹಿಳೆಯರು ಈ ಬಗ್ಗೆ ತಿಳಿದುಕೊಳ್ಳಲೇ ಬೇಕು ಏಕೆ? ಇದಕ್ಕೆ ಇಲ್ಲಿದೆ ಉತ್ತರ...

ಡಿಹೆಚ್ಎಯನ್ನು ಡೊಕೊಸಾಹೆಕ್ಸಿನೋಯಿಕ್ ಆಮ್ಲ ಎಂದು ಕರೆಯಲಾಗುತ್ತದೆ. ಇದು ಒಮೆಗಾ -3 ಗುಂಪಿನಿಂದ ದೀರ್ಘ ಸರಪಳಿ ಕೊಬ್ಬಿನಾಮ್ಲವಾಗಿದ್ದು, ವಿಶೇಷವಾಗಿ ಮೆದುಳಿನ ಅಂಗಾಂಶಗಳಲ್ಲಿ ಕಂಡುಬರುತ್ತದೆ, ಅದಕ್ಕಾಗಿಯೇ ಇದು ನರಕೋಶಗಳ ಸಾಮಾನ್ಯ ಬೆಳವಣಿಗೆಗೆ ಮತ್ತು ಕಲಿಕೆ ಮತ್ತು ಸ್ಮರಣೆಗೆ ಅವಶ್ಯಕವಾಗಿದೆ.

ಡೊಕೊಸಾಹೆಕ್ಸಿನೋಯಿಕ್ ಆಮ್ಲವು ಮೀನು, ಚಿಪ್ಪುಮೀನು, ಮೀನು ತೈಲಗಳು ಮತ್ತು ಕೆಲವು ಬಗೆಯ ಪಾಚಿಗಳಂತಹ ಸಮುದ್ರಾಹಾರಗಳಲ್ಲಿ ಕಂಡುಬರುತ್ತದೆ.

ಇದು ನಮ್ಮ ದೇಹದ ಪ್ರತಿಯೊಂದು ಜೀವಕೋಶದ ಒಂದು ಅಂಶವಾಗಿದೆ ಮತ್ತು ಚರ್ಮ, ಕಣ್ಣು ಮತ್ತು ಮೆದುಳಿನಲ್ಲಿ ಒಂದು ಪ್ರಮುಖ ರಚನಾತ್ಮಕ ಅಂಶವಾಗಿದೆ. ವಾಸ್ತವವಾಗಿ, ಧಮೆದುಳಿನಲ್ಲಿರುವ ಒಮೆಗಾ 3 ಕೊಬ್ಬಿನಾಮ್ಲಗಳಲ್ಲಿ 90% ಕ್ಕಿಂತ ಹೆಚ್ಚು ಮತ್ತು ಒಟ್ಟು ಕೊಬ್ಬಿನಂಶದ 25% ನಷ್ಟಿದೆ.

ಮೆದುಳು ಮತ್ತು ಕಣ್ಣಿನ ಆರೋಗ್ಯಕ್ಕೆ ಡಿಹೆಚ್‌ಎ ಪ್ರಮುಖವಾಗಿದೆ, ಮಗುವಿನಲ್ಲಿ ಮೆದುಳು ಮತ್ತು ಕಣ್ಣಿನ ಬೆಳವಣಿಗೆ ಮತ್ತು ನರಮಂಡಲವನ್ನು ಉತ್ತಮವಾಗಿ ಕಾರ್ಯನಿರ್ವಹಿಸುವಂತೆ ಮಾಡಲು ಇದು ಸಹಾಯ ಮಾಡುತ್ತದೆ. ಇದು ಕೇವಲ ಶಿಶುಗಳಿಗೆ ಮಾತ್ರವಲ್ಲ, ತಾಯಂದಿರಿಗೂ ಮುಖ್ಯವಾಗಿದೆ.

ಗರ್ಭಧಾರಣೆಯ 34ನೇ ವಾರದ ಮೊದಲು ಮಗುವಿನ ಜನನವನ್ನು ಅಕಾಲಿಕವೆಂದು ಪರಿಗಣಿಸಲಾಗುತ್ತದೆ ಮತ್ತು ಇದು ಮಗುವಿನಲ್ಲಿ ಆರೋಗ್ಯ ಸಮಸ್ಯೆಗಳನ್ನು ಸೃಷ್ಟಿಸಿ ಅಪಾಯವನ್ನು ಹೆಚ್ಚಿಸುತ್ತದೆ. ತಾಯಿಯ ದೇಹದಲ್ಲಿ ಡಿಎಚ್‌ಎಯು ಸರಿಯಾದ ಪ್ರಮಾಣದಲ್ಲಿ ಇದ್ದರೆ, ಅವಧಿಪೂರ್ವ ಜನನವನ್ನು ದೂರಾಗಿಸಬಹುದು. ಆರೋಗ್ಯಕರ ತೂಕದಿಂದ ಮಗುವಿಗೆ ಜನ್ಮ ನೀಡಲು ಇದು ಸಹಾಯ ಮಾಡುತ್ತದೆ. ಇದಲ್ಲದೆ, ಹೆರಿಗೆಯ ನಂತರ ತಾಯಿಯ ಮನಸ್ಥಿತಿಯನ್ನು ಡಿಹೆಚ್ಎ ಉತ್ತಮಗೊಳಿಸುತ್ತದೆ. 

ಗರ್ಭಿಣಿ ಮಹಿಳೆಯರಲ್ಲಿ ಎಷ್ಟು ಪ್ರಮಾಣದ ಡಿಎಚ್‌ಎ ಅಗತ್ಯವಿರುತ್ತದೆ? 
ಗರ್ಭಾವಸ್ಥೆಯಲ್ಲಿ, ತಾಯಂದಿರಿಗೆ ಕನಿಷ್ಠ 200 ಮಿಗ್ರಾಂ ಡಿಎಚ್‌ಎ ಅಗತ್ಯವಿರುತ್ತದೆ. ಡಿಹೆಚ್‌ಎ ಡೊಕೊಸಾಹೆಕ್ಸಿನೋಯಿಕ್ ಆಮ್ಲವು ಮೀನುಗಳಲ್ಲಿ ಕಂಡುಬರುವುದರಿಂದ, ಸಸ್ಯಾಹಾರಿಯಾಗಿರುವ ತಾಯಿಯಂದಿರದಲ್ಲಿ ಇದರ ಸಮಸ್ಯೆಗಳು ಎದುರಾಗುವುದು ಹೆಚ್ಚು. ಹೀಗಾಗಿ ಪ್ರತೀಯೊಬ್ಬ ಗರ್ಭಿಣಿ ಮಹಿಳೆಯರು ತಮ್ಮ ದೇಹದ ಡಿಹೆಚ್‌ಎ ಮಟ್ಟವನ್ನು ತಿಳಿದುಕೊಳ್ಳುವುದು ಮುಖ್ಯವಾಗುತ್ತದೆ. ದೇಹದಲ್ಲಿರುವ ಡಿಹೆಚ್‌ಎ ಮಟ್ಟವನ್ನು ತಿಳಿದುಕೊಂಡು ಮಹಿಳೆಯರು ತಮ್ಮ ಆಹಾರ ಪದ್ಧತಿಯನ್ನು ಬದಲಾಯಿಸಿಕೊಳ್ಳಬಹುದು. 

ಕೊರೋನಾ ಸಾಂಕ್ರಾಮಿಕ ರೋಗ ಇರುವ ಹಿನ್ನೆಲೆಯಲ್ಲಿ ಗರ್ಭಿಣಿ ಮಹಿಳೆಯರು ಮನೆಗಳಲ್ಲಿಯೇ ರಕ್ತ ಪರೀಕ್ಷೆಗಳನ್ನು ಮಾಡಿಸಿಕೊಂಡು ಡಿಹೆಚ್‌ಎ ಮಟ್ಟವನ್ನು ತಿಳಿದುಕೊಳ್ಳಬಹುದಾಗಿದೆ.

ಡಿಎಚ್‌ಎ ಮತ್ತು ಸ್ತನ್ಯಪಾನ
ಡಿಎಚ್‌ಎ ಸ್ವಾಭಾವಿಕವಾಗಿ ತಾಯಿಯ ಎದೆಹಾಲಿನಲ್ಲಿರುತ್ತದೆ. ಮಗುವಿನ ಮೆದುಳಿನ ಕಾರ್ಯ ಮತ್ತು ದೃಷ್ಟಿಯನ್ನು ಇದು ಹೆಚ್ಚಿಸುತ್ತದೆ. ಹಾಲುಣಿಸುವ ಶಿಶುಗಳಿಗೆ ಶಿಫಾರಸು ಮಾಡಲಾದ ಡಿಎಚ್‌ಎ ಪ್ರಮಾಣ 0.32% ರಿಂದ 0.35% ರಷ್ಟಿದೆ. 

ಸ್ತನ್ಯಪಾನ ಮಾಡುವ ತಾಯಂದಿರಿಂದ ಡಿಹೆಚ್‌ಎ ಸೇವನೆ ಮತ್ತು ಅದರ ಮಟ್ಟವನ್ನು ಅಳೆಯುವುದು ಕಷ್ಟಕರವಾಗಿರುತ್ತದೆ. ಇದಕ್ಕೆ ಕಾರಣ ಆಹಾರದಲ್ಲಿನ ವೈವಿಧ್ಯಮಯ ಪ್ರಮಾಣಗಳು ಮತ್ತು ವಿಭಿನ್ನ ರೀತಿಯ ಮಾದರಿಗಳನ್ನು ಅನುಸರಿಸಲಾಗುತ್ತದೆ. 

ದೇಹದಲ್ಲಿ ಡಿಎಚ್‌ಎ ಮಟ್ಟ ತಿಳಿಯುವುದು ಹೇಗೆ?
ವೈದ್ಯಕೀಯ ಪರೀಕ್ಷಾ ವರದಿಗಳ ಆಧಾರದ ಮೇಲೆ ನೀವು ತಿಳಿದುಕೊಳ್ಳಬಹುದು. ನಂತರ ನಿಮ್ಮ ವೈದ್ಯರು ಅಥವಾ ಆಹಾರ ತಜ್ಞರನ್ನು ಸಂಪರ್ಕಿಸಿ ನಿಮ್ಮ ಆಹಾರ ಪದ್ಧತಿಗಳನ್ನು ಮಾರ್ಪಾಡು ಮಾಡಿಕೊಳ್ಳಬಹುದು.

ಇತ್ತೀಚಿನ ದಿನಗಳಲ್ಲಿ ಈ ಕುರಿತು ವೈದ್ಯಕೀಯ ಸಲಕರಣೆಗಳು ಲಭ್ಯವಾಗುತ್ತಿದ್ದು, ರಕ್ತ ಹಾಗೂ ಎದೆಹಾಲಿನಲ್ಲಿರುವ ಡಿಹೆಚ್ಎ ಪ್ರಮಾಣವನ್ನು ಮನೆಗಳಲ್ಲಿಯೇ ಕುಳಿತು ತಿಳಿದುಕೊಳ್ಳಬಹುದಾಗಿದೆ. 


Stay up to date on all the latest ಜೀವನಶೈಲಿ news
Poll
lokasbha

ಸಂಸತ್ತಿನ ಕಲಾಪಗಳಿಗೆ ಅಡ್ಡಿಪಡಿಸುವ ಸಂಸದರಿಗೆ ದಂಡ ವಿಧಿಸಬೇಕೇ?


Result
ಹೌದು, ಇವರಿಂದ ಸಮಯ ವ್ಯರ್ಥ
ಬೇಡ, ಅವರು ಪ್ರತಿಭಟಿಸಬೇಕು
flipboard facebook twitter whatsapp