ಸೂರ್ಯನ ಬೆಳಕು ಎಷ್ಟು ಮುಖ್ಯ: ಉತ್ತಮ ಮನಸ್ಥಿತಿ, ಹೆಚ್ಚು ಶಕ್ತಿ ಮತ್ತು ಉತ್ತಮ ನಿದ್ರೆಗಾಗಿ ಇವುಗಳನ್ನು ಫಾಲೋ ಮಾಡಿ
ಸೂರ್ಯನೆಂದರೆ ಜೀವನ. ಸೂರ್ಯನ ಬೆಳಕನ್ನು ಸಮರ್ಪಕವಾಗಿ ಪಡೆಯದವರು ಹಲವಾರು ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಾರೆ. ಚಳಿಗಾಲದ ವೇಳೆ ಸೂರ್ಯನ ಬೆಳಕು ಕಡಿಮೆ ಸಿಗುತ್ತದೆ. ಇದು ಸೀಸನಲ್ ಎಫೆಕ್ಟಿವ್ ಡಿಸಾರ್ಡರ್ (ಎಸ್ಎಡಿ) ಎಂಬ ಸಾಮಾನ್ಯ ಆರೋಗ್ಯ ಸ್ಥಿತಿಗೆ ಕಾರಣವಾಗಬಹುದು.
Published: 29th November 2022 04:20 PM | Last Updated: 29th November 2022 04:20 PM | A+A A-

ಪ್ರಾತಿನಿಧಿಕ ಚಿತ್ರ
ಸೂರ್ಯನೆಂದರೆ ಜೀವನ. ಸೂರ್ಯನ ಬೆಳಕನ್ನು ಸಮರ್ಪಕವಾಗಿ ಪಡೆಯದವರು ಹಲವಾರು ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಾರೆ. ಚಳಿಗಾಲದ ವೇಳೆ ಸೂರ್ಯನ ಬೆಳಕು ಕಡಿಮೆ ಸಿಗುತ್ತದೆ. ಇದು ಸೀಸನಲ್ ಎಫೆಕ್ಟಿವ್ ಡಿಸಾರ್ಡರ್ (ಎಸ್ಎಡಿ) ಎಂಬ ಸಾಮಾನ್ಯ ಆರೋಗ್ಯ ಸ್ಥಿತಿಗೆ ಕಾರಣವಾಗಬಹುದು.
ಚಳಿಗಾಲದ ಈ ಸಮಸ್ಯೆಯನ್ನು ಸೋಲಿಸಲು ಬಿಸಿಲಿಗೆ ಮೈಯನ್ನು ಒಡ್ಡಿಕೊಳ್ಳಬೇಕು.
ಸೂರ್ಯೋದಯಕ್ಕೆ ಮುನ್ನ ಏಳಿ ಮತ್ತು ನಿಮ್ಮ ದೇಹವನ್ನು ಆಗತಾನೆ ಉದಯಿಸಿದ ಸೂರ್ಯನ ತಿಳಿ ಬಿಸಿಲಿಗೆ ಒಡ್ಡಿ. ಉತ್ತಮ ಮನಸ್ಥಿತಿ, ಹೆಚ್ಚು ಶಕ್ತಿ ಮತ್ತು ಉತ್ತಮ ನಿದ್ರೆಗೆ ಸೂರ್ಯನ ಬೆಳಕಿನ ಸ್ನಾನ ತುಂಬಾ ಮುಖ್ಯವಾಗುತ್ತದೆ.
ಸೂರ್ಯನ ನೇರಳಾತೀತ ಕಿರಣಗಳಿಗೆ ದೀರ್ಘಕಾಲದವರೆಗೆ ಒಡ್ಡಿಕೊಂಡರೆ ಹಾನಿಕಾರಕವಾಗಬಹುದು ಎಂಬುದು ನಿಜವಾಗಿದ್ದರೂ, ಎಚ್ಚರಿಕೆಯಿಂದ ಒಡ್ಡಿಕೊಳ್ಳುವುದು ಉತ್ತಮ. ನೀವು ಪ್ರತಿದಿನ ಬೆಳಿಗ್ಗೆ ಸೂರ್ಯ ನಮಸ್ಕಾರವನ್ನು ಮಾಡಬಹುದು ಅಥವಾ 10 ನಿಮಿಷಗಳ ಕಾಲ ಸೂರ್ಯನ ಕಡೆಗೆ ಕುಳಿತುಕೊಳ್ಳಬಹುದು, ಕ್ರಮೇಣ ಈ ಮಿತಿಯನ್ನು 15 ಅಥವಾ 20 ನಿಮಿಷಗಳವರೆಗೆ ಹೆಚ್ಚಿಸಬಹುದು.
ಸೂರ್ಯ ಸ್ನಾನ ಮಾಡುವುದರಿಂದ ನಿಮ್ಮ ದೇಹದಲ್ಲಿನ ವಿಟಮಿನ್ ಡಿ 3 ಮಟ್ಟವನ್ನು ಹೆಚ್ಚಿಸುವುದರ ಜೊತೆಗೆ, ಸೂರ್ಯನ ಅತಿಗೆಂಪು ಕಿರಣಗಳು ಉರಿಯೂತವನ್ನು ಕಡಿಮೆ ಮಾಡಲು ಮತ್ತು ಸೆಲ್ಯುಲರ್ ಮೆಲಟೋನಿನ್ ಅನ್ನು ಉತ್ಪಾದಿಸಲು ಸಹಾಯ ಮಾಡುತ್ತದೆ. ಸೂರ್ಯನ ಬೆಳಕನ್ನು ಮುಂಜಾನೆ ಅಥವಾ ಸೂರ್ಯ ಮುಳುಗುವ ಮೊದಲು ಪಡೆಯಲು ಮರೆಯದಿರಿ. ಸೂರ್ಯನು ಉತ್ತುಂಗದಲ್ಲಿರುವಾಗ ನೀವು ಇದನ್ನು ತಪ್ಪಿಸಬೇಕು.
ನಮ್ಮ ದೇಹವು ನಿದ್ರೆ, ಎಚ್ಚರ ಮತ್ತು ಮುಂತಾದ ಪ್ರಮುಖ ಕಾರ್ಯಗಳನ್ನು ಪ್ರಾರಂಭಿಸಲು ಮತ್ತು ನಿಲ್ಲಿಸಲು ಪ್ರಮುಖ ಸೂಚನೆಗಳಾಗಿ ಬೆಳಕು ಮತ್ತು ಗಾಢತೆಯನ್ನು ಬಳಸಿಕೊಳ್ಳುತ್ತದೆ. ಇವೆಲ್ಲವೂ ನಮ್ಮ ದೇಹದ ಆಂತರಿಕ ಗಡಿಯಾರದಿಂದ ನಿಯಂತ್ರಿಸಲ್ಪಡುತ್ತದೆ ಮತ್ತು ಸೂರ್ಯನ ಬೆಳಕಿನ ಕೊರತೆಯಿಂದಾಗಿ ಅದು ಸರಿಯಾಗಿ ಕಾರ್ಯನಿರ್ವಹಿಸದಿದ್ದರೆ, ಅದು ನಮ್ಮ ಶಕ್ತಿಯ ಮಟ್ಟಗಳು, ನಿದ್ರೆಯ ಸಾಮರ್ಥ್ಯ ಮತ್ತು ಮನಸ್ಥಿತಿಯ ಮೇಲೆ ಪರಿಣಾಮ ಬೀರಬಹುದು.
ಇದನ್ನೂ ಓದಿ: ವಿಟಮಿನ್ ಡಿ3 ಮತ್ತು ವಿಟಮಿನ್ ಬಿ12 ಕೊರತೆ (ಕುಶಲವೇ ಕ್ಷೇಮವೇ)
ಒಂದು ವೇಳೆ ಸೂರ್ಯನ ಬೆಳಕನ್ನು ಪಡೆಯಲಿಲ್ಲವಾದರೆ, ಚಿಕಿತ್ಸೆಯಲ್ಲಿ ನಾವು ಎಸ್ಎಡಿ ದೀಪಗಳು ಅಥವಾ ಲೈಟ್ ಬಾಕ್ಸ್‌ಗಳನ್ನು ಬಳಸಬಹುದು. ಇವು ಚಿಕಿತ್ಸೆಯಲ್ಲಿ ತೀವ್ರತೆಯ ಬೆಳಕನ್ನು ತಲುಪಿಸುತ್ತವೆ ಮತ್ತು ಸೂರ್ಯನ ಬೆಳಕನ್ನು ಅನುಕರಿಸುತ್ತವೆ. ಇನ್ನೊಂದು ಪರ್ಯಾಯವೆಂದರೆ, ಅತಿಗೆಂಪು ವಿಕಿರಣದ ಬಲ್ಬ್‌ಗಳು ಮತ್ತು ಲ್ಯಾಂಪ್‌ಗಳನ್ನು ಬಳಸಬಹುದು.
ಅವು ಬೆಳಕಿನ ವರ್ಣಪಟಲದ ಅತಿಗೆಂಪು ತರಂಗಾಂತರಕ್ಕೆ ಹೊಂದಿಕೆಯಾಗುವ ಬೆಳಕನ್ನು ನೀಡುತ್ತವೆ. ಇದು ಅಂತರ್ಜೀವಕೋಶದ ಮೆಲಟೋನಿನ್ ಬಿಡುಗಡೆಯನ್ನು ಉತ್ತೇಜಿಸುತ್ತದೆ. ಇದು ನಿಯಮಿತ ನಿದ್ರೆ-ಎಚ್ಚರ ಚಕ್ರಕ್ಕೆ ಸಹಾಯ ಮಾಡುವ ಹಾರ್ಮೋನ್ ಮತ್ತು ನಮ್ಮ ದೇಹವನ್ನು ಪೋಷಿಸುವ ಪ್ರಬಲ ಉತ್ಕರ್ಷಣ ನಿರೋಧಕವಾಗಿದೆ.
ಈ ದೀಪಗಳಿಗೆ ಒಡ್ಡಿಕೊಳ್ಳುವುದರಿಂದ ನೋವು, ಊತ ಮತ್ತು ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದು ಸಂಧಿವಾತ ಹೊಂದಿರುವ ವ್ಯಕ್ತಿಗಳಿಗೆ ಸಹಾಯ ಮಾಡುತ್ತದೆ. ಅತಿಗೆಂಪು ವಿಕಿರಣವು ಸಾಮಾನ್ಯವಾಗಿ ನಮ್ಮ ಜೀವಕೋಶಗಳ ಮೈಟೊಕಾಂಡ್ರಿಯಾವನ್ನು ಗುರಿಯಾಗಿಸುತ್ತದೆ ಮತ್ತು ಸೆಲ್ಯುಲಾರ್ ಮಟ್ಟದಲ್ಲಿ ಬಳಕೆ ಮತ್ತು ಶೇಖರಣೆಗಾಗಿ ಶಕ್ತಿಯ ಮೂಲವಾದ ಅಡೆನೊಸಿನ್ ಟ್ರೈಫಾಸ್ಫೇಟ್ (ATP) ಉತ್ಪಾದನೆಯನ್ನು ಉತ್ತೇಜಿಸುತ್ತದೆ. ಹೆಚ್ಚು ಎಟಿಪಿ ಎಂದರೆ ಹೆಚ್ಚು ಶಕ್ತಿ, ಇದು ಸಾಮಾನ್ಯವಾಗಿ ಚಳಿಗಾಲದಲ್ಲಿ ಪ್ರಮುಖ ಕೊರತೆಯಾಗಿರುತ್ತದೆ.
ಇದನ್ನೂ ಓದಿ: ಆರೋಗ್ಯಕ್ಕೆ ಉತ್ತಮ ನಿದ್ದೆ ತುಂಬಾ ಮುಖ್ಯ; ಗಾಢ ನಿದ್ರೆಯಿಂದ ಸಿಗುವ ಪ್ರಯೋಜನಗಳೇನು?
ದಿನಕ್ಕೆ 30 ನಿಮಿಷದಿಂದ ಕೆಲವು ಗಂಟೆಗಳವರೆಗೆ ತನ್ನನ್ನು ತಾನು ಬಿಸಿಲಿಗೆ ಒಡ್ಡಿಕೊಳ್ಳುವುದರಿಂದ ಮನಸ್ಥಿತಿಯ ಮೇಲೆ ಪರಿಣಾಮ ಬೀರುವ ದೇಹದೊಳಗಿನ ರಾಸಾಯನಿಕಗಳು ಮತ್ತು ಹಾರ್ಮೋನುಗಳ ಮಟ್ಟದಲ್ಲಿ ಬದಲಾವಣೆಗೆ ಸಹಾಯ ಮಾಡುತ್ತದೆ. ಆದರೆ, ಚರ್ಮದ ಸ್ಥಿತಿ, ಕತ್ತರಿಸಿದ್ದರೆ, ಸವೆತ ಅಥವಾ ಗಾಯಗಳ ಸಂದರ್ಭದಲ್ಲಿ ಜಾಗರೂಕರಾಗಿರಬೇಕು. ಈ ಸಂದರ್ಭಗಳಲ್ಲಿ ಯಾವುದೇ ರೀತಿಯಲ್ಲೂ ಬಿಸಿಲಿಗೆ ಒಡ್ಡುವಿಕೆಯನ್ನು ತಪ್ಪಿಸುವುದು ಉತ್ತಮ.
ಸೂರ್ಯನ ಬೆಳಕಿನ ಅನುಪಸ್ಥಿತಿಯಲ್ಲಿ ಬೆಳಕನ್ನು ಹುಡುಕುವ ಇನ್ನೊಂದು ಮಾರ್ಗವೆಂದರೆ ಮೇಣದಬತ್ತಿಗಳು ಮತ್ತು ಕ್ಯಾಂಪ್‌ಫೈರ್‌ಗಳು. ಇವುಗಳು ಸೂರ್ಯನ ಬದಲಿಯಾಗಿ ನೋಡಲಾಗುವುದಿಲ್ಲ. ಆದರೆ, ಶೀತ, ಗಾಢವಾದ ಚಳಿಗಾಲದ ದಿನಗಳ ವಿರುದ್ಧ ಹೋರಾಡುವ ಸಾಧನವಾಗಿದೆ.
ಇದು ಚಂಚಲ ಮನಸ್ಸನ್ನು ಶಾಂತಗೊಳಿಸುವುದು ಮಾತ್ರವಲ್ಲದೆ ಮನಸ್ಥಿತಿ, ಶಕ್ತಿ ಮತ್ತು ನಿದ್ರೆಯ ಚಕ್ರಗಳನ್ನು ನಿಯಂತ್ರಿಸುತ್ತದೆ. ಮೇಣದಬತ್ತಿಗಳು ವಿಷಕಾರಿಯಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಬೇಕಿರುತ್ತದೆ. ಸೂರ್ಯನನ್ನು ಯಾವುದೂ ಬದಲಿಸಲು ಸಾಧ್ಯವಿಲ್ಲದಿದ್ದರೂ, ನಿಮ್ಮ ಮನಸ್ಸು ಹರ್ಷದಿಂದಿರಲು ನೀವು ಮಾಡಬಹುದಾದ ಇನ್ನೊಂದು ವಿಷಯವಿದೆ.
ನಿಮ್ಮ ಉತ್ಸಾಹವನ್ನು ಹೆಚ್ಚಿಸಲು ಬಣ್ಣ ಚಿಕಿತ್ಸೆಯ ಶಕ್ತಿಯನ್ನು ಬಳಸಿಕೊಂಡು ಪ್ರಕಾಶಮಾನವಾಗಿ ಮತ್ತು ಧೈರ್ಯದಿಂದ ಹೋಗಿ. ಮನೆಯ ಪೇಂಟಿಂಗ್ ಮೂಲಕ ಬಣ್ಣವನ್ನು ಸೇರಿಸುವುದು, ನಿಮ್ಮ ಅಲಂಕಾರದಲ್ಲಿ ಕೆಲವು ಹೂವುಗಳು ಅಥವಾ ಪರದೆಗಳನ್ನು ಬಳಸುವುದರಿಂದ ನಿಮ್ಮ ಮನಸ್ಸನ್ನು ಮೇಲೆತ್ತಬಹುದು. ಸೂರ್ಯನಿಲ್ಲದೆ ಯಾವುದೇ ಜೀವ ಅಥವಾ ಜೀವಿಯು ಜೀವಂತವಾಗಿರುವುದಿಲ್ಲ. ಆದರೆ, ಸೂರ್ಯನ ಬಿಸಿಲು ನಮ್ಮೆಲ್ಲರಿಗೂ ಉಚಿತವಾಗಿ ಸಿಗುತ್ತಿರುವುದು ನಾವು ಕೃತಜ್ಞರಾಗಿರಲು ನಮಗೆ ಅವಕಾಶವನ್ನು ನೀಡುತ್ತದೆ.
ಲೇಖಕರು: ಲ್ಯೂಕ್ ಕೌಟಿನ್ಹೋ, ಲ್ಯೂಕ್ ಕೌಟಿನ್ಹೋ ಹೋಲಿಸ್ಟಿಕ್ ಹೀಲಿಂಗ್ ಸಿಸ್ಟಮ್ಸ್ ಸಂಸ್ಥಾಪಕ