ಬಾಲ್ಯದಲ್ಲಿಯೇ ಸ್ವಯಂ ನಿಯಂತ್ರಣ ತರಬೇತಿಯಿಂದ ಮಕ್ಕಳಲ್ಲಿ ಶೈಕ್ಷಣಿಕ ಯಶಸ್ಸು ಹೆಚ್ಚಳ

ಪ್ರಾಥಮಿಕ ಶಾಲೆಯಲ್ಲಿರುವಾಗಲೇ ಅವರ ಗಮನ ಮತ್ತು ಪ್ರಚೋದನೆಗಳನ್ನು ಹೇಗೆ ನಿರ್ವಹಿಸಬೇಕು ಎಂಬುದನ್ನು ಮಕ್ಕಳಿಗೆ ಕಲಿಸುವುದರಿಂದ ಅವರ ನಂತರದ ಶೈಕ್ಷಣಿಕ ಯಶಸ್ಸಿನ ಮೇಲೆ ಧನಾತ್ಮಕ ದೀರ್ಘಕಾಲೀನ ಪರಿಣಾಮ ಬೀರುತ್ತದೆ ಎಂದು ಜುರಿಚ್ ಮತ್ತು ಮೈಂಜ್ ವಿಶ್ವವಿದ್ಯಾಲಯಗಳ ಅಧ್ಯಯನದಿಂದ ತಿಳಿದುಬಂದಿದೆ.
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ

ವಾಷಿಂಗ್ಟನ್: ಪ್ರಾಥಮಿಕ ಶಾಲೆಯಲ್ಲಿರುವಾಗಲೇ ಅವರ ಗಮನ ಮತ್ತು ಪ್ರಚೋದನೆಗಳನ್ನು ಹೇಗೆ ನಿರ್ವಹಿಸಬೇಕು ಎಂಬುದನ್ನು ಮಕ್ಕಳಿಗೆ ಕಲಿಸುವುದರಿಂದ ಅದು ಅವರ ನಂತರದ ಶೈಕ್ಷಣಿಕ ಯಶಸ್ಸಿನ ಮೇಲೆ ಧನಾತ್ಮಕ ದೀರ್ಘಕಾಲೀನ ಪರಿಣಾಮ ಬೀರುತ್ತದೆ ಎಂದು ಜುರಿಚ್ ಮತ್ತು ಮೈಂಜ್ ವಿಶ್ವವಿದ್ಯಾಲಯಗಳ ಅಧ್ಯಯನದಿಂದ ತಿಳಿದುಬಂದಿದೆ.

ತಮ್ಮ ಗಮನ, ಭಾವನೆಗಳು ಮತ್ತು ಪ್ರಚೋದನೆಗಳನ್ನು ನಿರ್ವಹಿಸುವ ಸಾಮರ್ಥ್ಯ, ಹಾಗೆಯೇ ತಮ್ಮ ಪರಿಶ್ರಮದಿಂದ ವೈಯಕ್ತಿಕ ಗುರಿಗಳನ್ನು ಸಾಧಿಸುವುದನ್ನು ಸ್ವಯಂ ನಿಯಂತ್ರಣ ಎನ್ನಲಾಗುತ್ತದೆ. ಅಂದರೆ, ನಾವು ಸಾಮಾನ್ಯವಾಗಿ ಚಿಕ್ಕ ಮಕ್ಕಳ ಮೇಲೆ ಇದನ್ನು ಹೇರಲಾಗುವ ಕೌಶಲ್ಯವಲ್ಲ. ಆದಾಗ್ಯೂ, ಸಾಂಕ್ರಾಮಿಕ ರೋಗದಿಂದಾಗಿ ಶಾಲೆಗಳ ಮುಚ್ಚುವಿಕೆಯಿಂದಾಗಿ ಹೆಚ್ಚಿದ ಡಿಜಿಟಲ್ ಮಾಧ್ಯಮದ ಬಳಕೆಯು ಈಗ ಸಾಮರ್ಥ್ಯ ವಿಶೇಷವಾಗಿ ಮಕ್ಕಳಿಗೆ ಎಷ್ಟು ಮುಖ್ಯ ಎಂಬುದನ್ನು ತೋರಿಸಿದೆ.

ಬಾಲ್ಯದಲ್ಲಿ ಸ್ವಯಂ ನಿಯಂತ್ರಣವನ್ನು ಸಾಧಿಸಿದ ಜನರು ಸರಾಸರಿ ಹೆಚ್ಚಿನ ಆದಾಯ, ಉತ್ತಮ ಆರೋಗ್ಯ ಮತ್ತು ಹೆಚ್ಚಿನ ಜೀವನ ತೃಪ್ತಿಯನ್ನು ಹೊಂದುತ್ತಾರೆ ಎಂಬುದನ್ನು ಅಧ್ಯಯನಗಳು ತೋರಿಸಿವೆ. ಹೀಗಾಗಿ, ಬಾಲ್ಯದಲ್ಲಿಯೇ ನಿರ್ದಿಷ್ಟ ರೀತಿಯಲ್ಲಿ ಸ್ವಯಂ ನಿಯಂತ್ರಣವನ್ನು ಸಾಧಿಸುವ ತರಬೇತಿ ನೀಡಬಹುದು ಎನ್ನುತ್ತವೆ.

ಹೆಚ್ಚು ಬೋಧನಾ ಸಮಯವನ್ನು ತೆಗೆದುಕೊಳ್ಳದೆಯೇ ಸ್ವಯಂ ನಿಯಂತ್ರಣ ಕೌಶಲ್ಯಗಳ ತರಬೇತಿಯನ್ನು ಪ್ರಾಥಮಿಕ ಶಾಲಾ ದಿನಗಳಲ್ಲಿ ಹೇಗೆ ಸಂಯೋಜಿಸಬಹುದು? ಯುವ ವಿದ್ಯಾರ್ಥಿಗಳಿಗೆ ಸ್ವಯಂ ನಿಯಂತ್ರಣ ತಂತ್ರವನ್ನು ಸೂಕ್ತ ರೀತಿಯಲ್ಲಿ ಕಲಿಸಲು ಸಾಧ್ಯವೇ? ಅಂತಹ ಕೌಶಲ್ಯಗಳನ್ನು ಕಲಿಸುವುದು ದೀರ್ಘಾವಧಿಯ ಶೈಕ್ಷಣಿಕ ಯಶಸ್ಸನ್ನು ಸುಧಾರಿಸುವ ಸಾಮರ್ಥ್ಯವನ್ನು ಹೊಂದಿದೆಯೇ? ಎನ್ನುವ ಪ್ರಶ್ನೆಗಳಿಗೆ ಅಧ್ಯಯನವು ಉತ್ತರ ಕಂಡುಕೊಂಡಿದೆ.

ಜುರಿಚ್ ವಿಶ್ವವಿದ್ಯಾನಿಲಯದ (ಸ್ವಿಟ್ಜರ್‌ಲೆಡ್) ಅರ್ಥಶಾಸ್ತ್ರ ವಿಭಾಗ ಮತ್ತು ಜೋಹಾನ್ಸ್ ಗುಟೆನ್‌ಬರ್ಗ್‌ ವಿಶ್ವವಿದ್ಯಾನಿಲಯದ ಮೈಂಜ್ (ಜರ್ಮನಿ) ವಿಭಾಗದ ಅಂತರರಾಷ್ಟ್ರೀಯ ತಂಡವು, 500 ಕ್ಕಿಂತ ಹೆಚ್ಚು ವಿದ್ಯಾರ್ಥಿಗಳನ್ನು ಒಳಗೊಂಡ ಪ್ರಾಥಮಿಕ ಶಾಲೆಗಳಲ್ಲಿ ಯಾದೃಚ್ಛಿಕ ನಿಯಂತ್ರಿತ ಅಧ್ಯಯನವನ್ನು ಬಳಸಿಕೊಂಡು ಪರಿಶೀಲಿಸಿತು. ಹೀಗಾಗಿ ಸಂಶೋಧನಾ ತಂಡಕ್ಕೆ, ಸ್ವಯಂ ನಿಯಂತ್ರಣದ ಒಂದು ಸಣ್ಣ ತರಬೇತಿ ನೀಡುವುದರಿಂದ ಗಮನಾರ್ಹ ಮತ್ತು ಸಮರ್ಥನೀಯ ಸುಧಾರಣೆಗೆ ಕಾರಣವಾಯಿತು ಎಂದು ತೋರಿಸಲು ಸಾಧ್ಯವಾಯಿತು.

ಈ ತರಬೇತಿಯು ಸ್ವಯಂ ನಿಯಂತ್ರಣ ಸಾಮರ್ಥ್ಯಗಳ ಮೇಲಷ್ಟೇ ಪರಿಣಾಮ ಬೀರಲಿಲ್ಲ; ಬದಲಿಗೆ ಒಂದು ವರ್ಷದ ನಂತರ ಗಮನಾರ್ಹವಾಗಿ ಮಕ್ಕಳ ಓದುವ ಸಾಮರ್ಥ್ಯ ಸುಧಾರಿಸಿದೆ ಮತ್ತು ಈಗ ಅವರು ಅಸಡ್ಡೆಯಿಂದಾಗುವ ತಪ್ಪುಗಳ ಮೇಲೆ ಸುಧಾರಿತ ಗಮನವನ್ನು ಹೊಂದಿದ್ದಾರೆ.

'ಆರಂಭಿಕ ಹಂತದಲ್ಲಿ ಪ್ರಾಥಮಿಕ ಶಾಲಾ ಬೋಧನೆಯಲ್ಲಿ ಈ ಕೌಶಲ್ಯದ ತರಬೇತಿಯನ್ನು ಹೇಗೆ ಸ್ಪಷ್ಟವಾಗಿ ಅಂತರ್ಗತಗೊಳಿಸಬಹುದು ಎಂಬುದನ್ನು ನಮ್ಮ ಅಧ್ಯಯನವು ತೋರಿಸಿದೆ. ಸ್ವಯಂ ನಿಯಂತ್ರಣವು ಮಕ್ಕಳು ತಮ್ಮ ಸ್ವಂತ ಕಲಿಕೆಗೆ ಹೆಚ್ಚಿನ ಜವಾಬ್ದಾರಿ ಹೊಂದಲು ಮತ್ತು ತಮ್ಮದೇ ಆದ ಗುರಿಗಳನ್ನು ಹೊಂದಲು ಮತ್ತು ಅದರ ಮೇಲೆ ಕೆಲಸ ಮಾಡಲು ನೆರವಾಗುತ್ತದೆ' ಎಂದು ಜ್ಯುರಿಚ್ ವಿಶ್ವವಿದ್ಯಾಲಯದ ಅರ್ಥಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಅರ್ನ್ಸ್ಟ್ ಫೆಹ್ರ್ ಹೇಳುತ್ತಾರೆ.

ನಿಯಮಿತ ವೇಳಾಪಟ್ಟಿಯಲ್ಲಿ ಸುಲಭವಾಗಿ ಸಂಯೋಜನೆ

ಹಿಂದಿನ ಪ್ರಾಯೋಗಿಕ ಅನುಭವದ ಕಳವಳದಿಂದಾಗಿ, ತರಬೇತಿ ಘಟಕಗಳನ್ನು ಅತಿ ಕಡಿಮೆ ವೆಚ್ಚದಲ್ಲಿ ಮತ್ತು ಸಮಯ ಉಳಿತಾಯದ ರೀತಿಯಲ್ಲಿ ವಿನ್ಯಾಸಗೊಳಿಸಿದ್ದಾರೆ. ಇದರಿಂದ ಯಾವುದೇ ಪ್ರಾಥಮಿಕ ಶಾಲಾ ವ್ಯವಸ್ಥೆಯಲ್ಲಿ ಇವುಗಳನ್ನು ಪರಿಚಯಿಸಬಹುದು. ತರಬೇತಿ ಘಟಕವು ಕೇವಲ ಐದು ಗಂಟೆಗಳ ಕಾಲ ನಡೆಯಿತು ಮತ್ತು ಶಿಕ್ಷಕರು ಮೂರು ಗಂಟೆ ತರಬೇತಿಯಲ್ಲಿ ಭಾಗವಹಿಸಿದರು ಮತ್ತು ಸಂಪೂರ್ಣವಾಗಿ ಅಭಿವೃದ್ಧಿಪಡಿಸಿದ ಬೋಧನಾ ಸಾಮಗ್ರಿಗಳನ್ನು ಪಡೆದರು. ಇವುಗಳನ್ನು ನಿಯಮಿತ ತರಗತಿಯ ವೇಳಾಪಟ್ಟಿಯಲ್ಲಿಯೇ ನೇರವಾಗಿ ಸಂಯೋಜಿಸಬಹುದು.

ತರಬೇತಿ ಘಟಕಗಳು MCII ತಂತ್ರವನ್ನು ('ಮೆಂಟಲ್ ಕಾಂಟ್ರಾಸ್ಟಿಂಗ್ ವಿತ್ ಇಂಪ್ಲಿಮೆಂಟೇಶನ್ ಇಂಟೆನ್ಶನ್ಸ್') ಆಧರಿಸಿವೆ. ಶಿಕ್ಷಕರು ಚಿತ್ರ ಪುಸ್ತಕ ಮತ್ತು ಹರ್ಡಲ್ ಜಂಪರ್‌ನ ರೋಲ್ ಮಾಡೆಲ್ ಅನ್ನು ಬಳಸಿಕೊಂಡು ತಮಾಷೆಯ ರೀತಿಯಲ್ಲಿ ಸಾರಾಂಶದ ತಂತ್ರವನ್ನು ಪ್ರಸ್ತುತಪಡಿಸಿದರು. ಮೊದಲ ಹಂತದಲ್ಲಿ, ಮಕ್ಕಳು ಗುರಿಯನ್ನು ತಲುಪುವ ಧನಾತ್ಮಕ ಪರಿಣಾಮಗಳನ್ನು ಊಹಿಸಿದರು. ಅವರು ದಾರಿಯಲ್ಲಿ ಎದುರಾಗುವ ಅಡೆತಡೆಗಳೊಂದಿಗೆ ('ಮೆಂಟಲ್ ಕಾಂಟ್ರಾಸ್ಟಿಂಗ್') ವ್ಯತಿರಿಕ್ತತೆಯನ್ನು ತೋರಿಸಿದರು. ಮಕ್ಕಳು ನಂತರ ಅಡೆತಡೆಗಳನ್ನು ಎದುರಿಸಲು ಮತ್ತು "ಯಾವಾಗ-ನಂತರ" ಯೋಜನೆಗಳನ್ನು (ಇಂಪ್ಲಿಮೆಂಟೇಶನ್ ಇಂಟೆನ್ಶನ್ಸ್) ಅಭಿವೃದ್ಧಿಪಡಿಸಲು ನಿರ್ದಿಷ್ಟ ನಡವಳಿಕೆಗಳನ್ನು ಗುರುತಿಸಿದರು.

ಸಮಾಜದ ಮೇಲೆ ಧನಾತ್ಮಕ ಪರಿಣಾಮ

'ನಮ್ಮ ಅಧ್ಯಯನದ ವಿಶೇಷ ಲಕ್ಷಣವೆಂದರೆ, ಈ ಕಿರು ತರಬೇತಿ ಘಟಕವು ದೀರ್ಘಾವಧಿಯ ಏರಿಳಿತದ ಪರಿಣಾಮಗಳನ್ನು ಹೊಂದಿದೆ. ಇವುಗಳು ಮಗುವಿಗೆ ಪ್ರಯೋಜನವನ್ನು ನೀಡುತ್ತವೆ ಮತ್ತು ಮಗುವಿನ ಜೀವನದ ಅವಧಿಯಲ್ಲಿ ಒಟ್ಟಾರೆಯಾಗಿ ಸಮಾಜಕ್ಕೆ ಅನೇಕ ರೀತಿಯಲ್ಲಿ ವರ್ಗಾಯಿಸಲ್ಪಡುತ್ತವೆ' ಎನ್ನುತ್ತಾರೆ ಜೋಹಾನ್ಸ್ ಗುಟೆನ್‌ಬರ್ಗ್ ವಿಶ್ವವಿದ್ಯಾಲಯದ ಮೈಂಜ್‌ನಲ್ಲಿ ಸಾರ್ವಜನಿಕ ಮತ್ತು ನಡವಳಿಕೆಯ ಅರ್ಥಶಾಸ್ತ್ರದ ಪ್ರಾಧ್ಯಾಪಕ ಡೇನಿಯಲ್ ಶುಂಕ್.

'ಇಂತಹ ಮೂಲಭೂತ ಕೌಶಲ್ಯಗಳಲ್ಲಿ ಆರಂಭಿಕ ಹೂಡಿಕೆಯು ಮಗುವಿಗೆ ಮಾತ್ರವಲ್ಲದೆ ಸಮಾಜಕ್ಕೂ ಪ್ರಯೋಜನವನ್ನು ನೀಡುತ್ತದೆ ಎಂಬ ಅಂಶವು ಶಿಕ್ಷಣ ನೀತಿಯಲ್ಲಿ ಹೆಚ್ಚಿನ ಗಮನವನ್ನು ನೀಡಬೇಕು' ಎನ್ನುತ್ತಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com