social_icon

ಧ್ಯಾನ ಮಾಡುವುದು ಹೇಗೆ? ಆರಂಭಿಕರು ತಿಳಿದುಕೊಳ್ಳಬೇಕಾದ ವಿಷಯಗಳು ಇಲ್ಲಿವೆ..

“ಧ್ಯಾನ” ಎಂದ ಕೂಡಲೇ ಪರ್ವತದ ಮೇಲೆ, ನೀಲಿ ಮೋಡಗಳ ಕೆಳಗೆ ನಿಂತು ಧ್ಯಾನ ಮಾಡುವ ಯೋಗಿಗಳೆಂದು ನಮ್ಮ ತಲೆಗೆ ಬರುವುದು ಸಹಜ. ಆದರೆ, ಧ್ಯಾನ ಪ್ರತಿಯೊಂದು ಜೀವಿಗೂ ಸಂಬಂಧಿಸಿದ್ದಾಗಿದೆ. ಇತ್ತೀಚಿನ ಒತ್ತಡದ ಜೀವನಗಳಿಂದಾಗಿ ಧ್ಯಾನದ ಮಹತ್ವ ಎಲ್ಲರೂ ತಿಳಿದುಕೊಳ್ಳುವಂತಾಗುತ್ತಿದೆ. 

Published: 29th October 2022 03:20 PM  |   Last Updated: 29th October 2022 04:46 PM   |  A+A-


Representational Image

ಧ್ಯಾನ (ಸಂಗ್ರಹ ಚಿತ್ರ)

Posted By : manjula
Source : The New Indian Express

“ಧ್ಯಾನ” ಎಂದ ಕೂಡಲೇ ಪರ್ವತದ ಮೇಲೆ, ನೀಲಿ ಮೋಡಗಳ ಕೆಳಗೆ ನಿಂತು ಧ್ಯಾನ ಮಾಡುವ ಯೋಗಿಗಳೆಂದು ನಮ್ಮ ತಲೆಗೆ ಬರುವುದು ಸಹಜ. ಆದರೆ, ಧ್ಯಾನ ಪ್ರತಿಯೊಂದು ಜೀವಿಗೂ ಸಂಬಂಧಿಸಿದ್ದಾಗಿದೆ. ಇತ್ತೀಚಿನ ಒತ್ತಡದ ಜೀವನಗಳಿಂದಾಗಿ ಧ್ಯಾನದ ಮಹತ್ವ ಎಲ್ಲರೂ ತಿಳಿದುಕೊಳ್ಳುವಂತಾಗುತ್ತಿದೆ.

ಧ್ಯಾನ ಬರೀ ಯೋಗಿಗಳಿಗಷ್ಟೇ ಸಂಬಂಧಿಸಿದ್ದಲ್ಲ. ಒಬ್ಬ ವ್ಯಕ್ತಿ ಮಾನಸಿಕ ನೆಮ್ಮದಿ ಪಡೆದುಕೊಳ್ಳಲು, ನೆಮ್ಮದಿ ಜೀವನ ಸಾಗಿಸಲು, ಆರೋಗ್ಯಕರ ಜೀವನಕ್ಕೆ ಹಾಗೂ ಅತ್ಯುತ್ತಮ ವ್ಯಕ್ತಿಯಾಗಿ ಬದಲಾಗಲು ಧ್ಯಾನ ಮುಖ್ಯವಾಗಿದೆ. 

ಧ್ಯಾನದಿಂದ ನಮ್ಮ ಗಮನ ಬೇರೆಡೆಗೆ ಹೋಗದಂತೆ ಮಾಡಲು, ಶಾಂತ ಮನಸ್ಸು, ಭಾವನೆಗಳು ಮತ್ತು ಆಲೋಚನೆಗಳ ಸ್ಪಷ್ಟತೆ, ವಿಶ್ರಾಂತಿ, ನವ ಯೌವನ ಪಡೆಯುವುದು, ಆಂತರಿಕ ಶಕ್ತಿ ಮತ್ತು ಒತ್ತಡದ ಸಂದರ್ಭಗಳಲ್ಲಿಯೂ ಕೂಡ ಭಾವನೆಗಳನ್ನು ಸಮತೋಲನದಲ್ಲಿಡುವ ಸಾಮರ್ಥ್ಯವನ್ನು ಪಡೆದುಕೊಳ್ಳಬಹುದಾಗಿದೆ. ಇದರ ಜೊತೆಗೆ, ಧ್ಯಾನವು ಖಿನ್ನತೆ ಮತ್ತು ಆತಂಕದಿಂದ ಎದುರಾಗುವ ಅಸ್ವಸ್ಥತೆಯನ್ನು ಕಡಿಮೆ ಮಾಡುತ್ತದೆ.

ಜೀವನದಲ್ಲಿ ನೆಮ್ಮದಿ ತರಬಲ್ಲ ಈ ಧ್ಯಾನ ಮಾಡುವುದಾದರೂ ಹೇಗೆ? ಆರಂಭಿಕರು ಅನುಸರಿಸಬೇಕಾದ ವಿಷಯಗಳಾದರೂ ಏನು?

ಧ್ಯಾನಕ್ಕೆ ಇಂತಹದ್ದೇ ಸ್ಥಳಬೇಕೆಂದಿಲ್ಲ. ಯಾವುದೇ ಗದ್ದಲವಿಲ್ಲದೆ ಪ್ರಶಾಂತವಾಗಿರುವ ಸ್ಥಳವಾದರೆ ಉತ್ತಮ. ನೀವು ಎಲ್ಲಿ ಬೇಕಾದರೂ ಆರಾಮದಾಯಕ ಸ್ಥಾನದಲ್ಲಿ ಕುಳಿತುಕೊಳ್ಳಬಹುದು, ಕುರ್ಚಿ, ಕುಶನ್, ನೆಲದ ಮೇಲೆ ಅಥವಾ ನೀವು ನಿರಾಳವಾಗಿದ್ದೀರಿ ಎಂದು ಭಾವಿಸುವ ಸ್ಥಳದಲ್ಲಿ ನೇರ ಬೆನ್ನಿನ ಆಸನದಲ್ಲಿ ಕುಳಿತುಕೊಳ್ಳಿ. ನಿಮ್ಮ ಕುತ್ತಿಗೆಯನ್ನು ಸಡಿಲಗೊಳಿಸಿ, ತೊಡೆ ಅಥವಾ ಮೊಣಕಾಲುಗಳ ಮೇಲೆ ಕೈಗಳನ್ನು ಇರಿಸಿ.

ಇದನ್ನೂ ಓದಿ: ಸರಿಯಾದ ರೀತಿಯಲ್ಲಿ ಉಪವಾಸ ಮಾಡುವುದು ನಿಮ್ಮ ದೇಹಕ್ಕೆ ಪ್ರಯೋಜನಕಾರಿ!

ಇನ್ನು ಬಟ್ಟೆಯ ವಿಷಯಕ್ಕೆ ಬಂದಾಗ, ನಿಮಗೆ ಆರಾಮದಾಯಕ ಎನಿಸುವ ಬಟ್ಟೆಯನ್ನು ಧರಿಸಿಕೊಳ್ಳಿ. ಆದಷ್ಟು ಸಡಿಲ ಬಟ್ಟೆಗಳನ್ನು ಆಯ್ಕೆಮಾಡಿಕೊಳ್ಳಿ. ಆಗ ಉಸಿರಾಟಕ್ಕೆ ಅನುಕೂಲವಾಗುತ್ತದೆ.

ನೀವು ಸಮಯವನ್ನು ನಿಗದಿಪಡಿಸಲು ಬಯಸಿದರೆ, ನಿಮ್ಮ ಅನುಕೂಲಕ್ಕೆ ಅನುಗುಣವಾಗಿ ನೀವು ಹಾಗೆ ಮಾಡಬಹುದು. ಆರಂಭದ ದಿನಗಳಲ್ಲಿ 10 ನಿಮಿಷಗಳಿಂದ ಧ್ಯಾನವನ್ನು ಆರಂಭಿಸಬಹುದು. ಒಮ್ಮೆ ನೀವು ನಿಮ್ಮ ಮನಸ್ಸನ್ನು ಚೆನ್ನಾಗಿ ತರಬೇತಿಗೊಳಿಸಿದ ನಂತರ ಧ್ಯಾನದ ಅವಧಿಯನ್ನು 15 ಅಥವಾ 20 ನಿಮಿಷಗಳವರೆಗೆ ಕ್ರಮೇಣ ಹೆಚ್ಚಿಸಬಹುದು.

ಧ್ಯಾನ ಮಾಡಲು ಕೆಲ ಸಲಹೆಗಳು ಇಂತಿವೆ...

ನಿರೀಕ್ಷೆಗಳು ಬೇಡ...
ಧ್ಯಾನವು ನಿಮ್ಮ ಜೀವನದ ಎಲ್ಲಾ ಸಮಸ್ಯೆಗಳಿಗೆ ತ್ವರಿತ ಪರಿಹಾರವಲ್ಲ ಎಂಬುದನ್ನು ನೀವು ಅರ್ಥಮಾಡಿಕೊಳ್ಳಬೇಕು. ಇದರ ಪ್ರಯೋಜನೆಗಳನ್ನು ಪಡೆಯಲು ಸಾಕಷ್ಟು ಹಾಗೂ ಪ್ರಯತ್ನಗಳು ಬೇಕಾಗುತ್ತದೆ. ಆರಂಭಿಕ ದಿನಗಳಲ್ಲಿ ನಿಮ್ಮ ಆಲೋಚನೆಗಳನ್ನು ದೂರವಿಡಲು ಮತ್ತು ನಿಮ್ಮ ಮನಸ್ಸನ್ನು ಶಾಂತಗೊಳಿಸಲು ನಿಮಗೆ ಕಷ್ಟವಾಗುತ್ತದೆ. ಧ್ಯಾನ ಮಾಡುವಾಗ ಇದು ಕಾಲ ಕಳೆದಂತೆ ಸರಿಹೋಗುತ್ತದೆ. ಗಮನ ಬೇರೆಡೆಗೆ ಹೋಗುತ್ತಿದ್ದ ಸಂದರ್ಭದಲ್ಲಿ ನಿಮ್ಮ ಉಸಿರಾಟದ ಮೇಲೆ ಗಮನ ಗರಿಸಿ. 

ಸೂಕ್ತ ಸಮಯವನ್ನು ಆರಿಸಿ...
ಧ್ಯಾನ ಮಾಡಲು ಆರಂಭಿಸುವವರು ಧ್ಯಾನ ಮಾಡಲು ಆರಂಭಿಸಿದಾಗ ಅದರ ಪ್ರಯೋಜನಗಳನ್ನು ಪಡೆಯಲು ಧ್ಯಾನ ಮಾಡಲು ನಿರ್ದಿಷ್ಟ ಸಮಯ ಇರಬೇಕೆಂದು ಭಾವಿಸುತ್ತಾದೆ. ಆದರೆ, ಧ್ಯಾನ ಮಾಡಲು ನಿಗದಿತ ಸಮಯವಿಲ್ಲ. ಧ್ಯಾನ ಮಾಡಲು ನೀವು ಯಾವಾಗ ಸಿದ್ಧರಾಗಿರುತ್ತೀರೋ ಅದೇ ಸೂಕ್ತ ಸಮಯವಾಗುತ್ತದೆ. ನಿಮ್ಮ ಜವಾಬ್ದಾರಿಗಳು ಮತ್ತು ವೇಳಾಪಟ್ಟಿಯೊಂದಿಗೆ ಹೊಂದಿಕೆಯಾಗುವ ಸಮಯದಲ್ಲಿ ನೀವು ಧ್ಯಾನ ಮಾಡಬಹುದು, ಒತ್ತಡಗಳಿಲ್ಲದ ಸಮಯದಲ್ಲಿ ಧ್ಯಾನ ಮಾಡಬಹುದು. ಆದರೆ, ಒಮ್ಮೆ ಒಂದು ಸಮಯದಲ್ಲಿ ಧ್ಯಾನ ಮಾಡಿದರೆ, ಅದೇ ಸಮಯಕ್ಕೆ ಧ್ಯಾನ ಮಾಡಲು ಪ್ರಯತ್ನಿಸಿ. ಇದು ನಿಮ್ಮ ಜೀವನ ಒಂದು ಭಾಗವಾಗುವಂತೆ ಮಾಡಿಕೊಳ್ಳಿ.

ಆರಾಮದಾಯಕವಾಗಿರಿ...
ಧ್ಯಾನದ ಸಂದರ್ಭದಲ್ಲಿ ಕೆಲವರಿಗೆ ಕುಳಿತುಕೊಳ್ಳುವುದೇ ದೊಡ್ಡ ಸಮಸ್ಯೆಯಾಗಿ ಪರಿಣಮಿಸುತ್ತದೆ. ಇದರಿಂದ ಧ್ಯಾನ ಸೂಕ್ತ ರೀತಿಯಲ್ಲಿ ಮಾಡಲು ಸಾಧ್ಯವಾಗುವುದಿಲ್ಲ. ಮನಸ್ಸು ಹತೋಟಿಗೆ ಬರಲು ಹಾಗೂ ದೇಹ ವಿಶ್ರಾಂತಿ ಸ್ಥಿತಿಗೆ ಬರಲು ಸಮಯ ಬೇಕಾಗುತ್ತದೆ. ಧ್ಯಾನಕ್ಕೆ ಇಂತಹದ್ದೇ ಸ್ಥಳಬೇಕೆಂದಿಲ್ಲ. ಯಾವುದೇ ಗದ್ದಲವಿಲ್ಲದೆ ಪ್ರಶಾಂತವಾಗಿರುವ ಸ್ಥಳವಾದರೆ ಉತ್ತಮ. ನೀವು ಎಲ್ಲಿ ಬೇಕಾದರೂ ಆರಾಮದಾಯಕ ಸ್ಥಾನದಲ್ಲಿ ಕುಳಿತುಕೊಳ್ಳಬಹುದು, ಕುರ್ಚಿ, ಕುಶನ್, ನೆಲದ ಮೇಲೆ ಅಥವಾ ನೀವು ನಿರಾಳವಾಗಿದ್ದೀರಿ ಎಂದು ಭಾವಿಸುವ ಸ್ಥಳದಲ್ಲಿ ನೇರ ಬೆನ್ನಿನ ಆಸನದಲ್ಲಿ ಕುಳಿತುಕೊಳ್ಳಿ. ನಿಮ್ಮ ಕುತ್ತಿಗೆಯನ್ನು ಸಡಿಲಗೊಳಿಸಿ, ತೊಡೆ ಅಥವಾ ಮೊಣಕಾಲುಗಳ ಮೇಲೆ ಕೈಗಳನ್ನು ಇರಿಸಿ.

ಇದನ್ನೂ ಓದಿ: ಸಾಮಾಜಿಕ ಮಾಧ್ಯಮ ಬಳಸುವಾಗ ಎಚ್ಚರ ವಹಿಸಿ, ಆರು ತಿಂಗಳೊಳಗೆ ಖಿನ್ನತೆ ಉಂಟಾಗಬಹುದು!

ಅಭ್ಯಾಸವನ್ನು ಮುಂದುವರಿಸಿ...
ಈ ಜಗತ್ತಿನಲ್ಲಿ ಯಾವುದೂ ಸುಲಭವಾಗಿ ಸಿಗುವುದಿಲ್ಲ. ನೀವು ಅಭ್ಯಾಸವನ್ನು ಮುಂದುವರಿಸಲು ಸಾಧ್ಯವಾಗದಿರಲು ಕಾರಣಗಳನ್ನು ಹುಡುಕುವ ಬದಲು, ಮನಸ್ಸನ್ನು ಹತೋಟಿಯಲ್ಲಿಟ್ಟುಕೊಂಡು ನಿಮ್ಮ ಅಭ್ಯಾಸವನ್ನು ಮುಂದುವರೆಸಲು ಪ್ರಯತ್ನಿಸಿ. 

ಧ್ಯಾನ ಇದೇ ರೀತಿ ಮಾಡಬೇಕೆಂಬ ಯಾವುದೇ ನಿಯಮವಿಲ್ಲ. ನಿಮಗೆ ಉತ್ತಮ ರೀತಿಯಲ್ಲಿ ಪ್ರಯೋಜನವಾಗುತ್ತಿದೆ ಎಂದರೆ, ಆ ಅಭ್ಯಾಸವನ್ನು ಅದೇ ರೀತಿ ಪಾಲನೆ ಮಾಡಿ. ಇದರಿಂದ ನೀವು ಶಾಂತಿ, ಸಂತೋಷವನ್ನು ಪಡೆಯಲು ಸಹಾಯವಾಗುತ್ತದೆ. 


Stay up to date on all the latest ಜೀವನಶೈಲಿ news
Poll
Khalistani militant Hardeep Singh Nijjar

ಸಿಖ್ ಪ್ರತ್ಯೇಕತಾವಾದಿ ನಿಜ್ಜರ್ ಹತ್ಯೆಯಲ್ಲಿ ಭಾರತದ ಪಾತ್ರವಿದೆ ಎಂಬ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ಅವರ ಆರೋಪವನ್ನು ನೀವು ನಂಬುತ್ತೀರಾ?


Result
ಹೌದು
ಇಲ್ಲ

Comments

Disclaimer : We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

flipboard facebook twitter whatsapp