
ಜಡ ಜೀವನಶೈಲಿಯು ಅತ್ಯಂತ ಅಪಾಯಕಾರಿಯಾಗಿದ್ದು, ಇದು ನಾನಾ ಕಾಯಿಲೆಗಳನ್ನು ಎದುರು ಮಾಡಲಿದೆ. ಜಡಜೀವನಶೈಲಿಯು ತಮ್ಮ ದೇಹ ಹಾಗೂ ಯೋಗಕ್ಷೇಮದ ಮೇಲೆ ಸಾಕಷ್ಟು ಪರಿಣಾಮ ಬೀರುತ್ತದೆ. ಅತಿಯಾಗಿ ಒಂದೇ ಕಡೆ ಕುಳಿತುಕೊಳ್ಳುವುದು, ವಾಕಿಂಗ್ ಮಾಡದೇ ಇರುವುದು ಅಥವಾ ದೈಹಿಕ ಚಲನೆಗೆ ಒತ್ತು ಕೊಡದೇ ಇರುವುದನ್ನು ಜಡಜೀವನಶೈಲಿ ಎಂದು ಕರೆಯಲಾಗುತ್ತದೆ.
ವರ್ಕ್ ಫ್ರಂ ಹೋಮ್ ಸಂಸ್ಕೃತಿಯು ಜಡಜೀವನ ಶೈಲಿಯನ್ನು ಹೆಚ್ಚಿಸಿದೆ. ಮನೆಯಿಂದಲೇ ಕೆಲಸ ಮಾಡುವಾಗ ನಾವು ಸದಾ ಕುರ್ಚಿಗೆ ಅಂಟಿಕೊಂಡಿರುತ್ತೇವೆ. ಇದರಿಂದ ಹಲವು ರೀತಿಯ ಆರೋಗ್ಯ ಸಮಸ್ಯೆಗಳು ಎದುರಾಗುತ್ತಿವೆ.
ಅತಿಯಾದ ಅಶಿಸ್ತು, ಹೆಚ್ಚಿನ ಕೆಲಸ, ಡೆಡ್ಲೈನ್ ಒತ್ತಡ ಅಥವಾ ಸೋಮಾರಿತನದ ಜೀವನವನ್ನು ಇಂದು ಅನೇಕ ಮಂದಿ ರೂಢಿಸಿಕೊಂಡಿದ್ದಾರೆ. ಇದರಿಂದ ಜನರು ಜೀವನ ಶೈಲಿ ಮತ್ತು ಆಹಾರ ಶೈಲಿಯಲ್ಲಿ ಬಹಳ ಬದಲಾವಣೆ ಕಾಣಬಹುದಾಗಿದೆ.
ಅದರಲ್ಲೂ ಜನರು ನಿಯಮಿತವಾಗಿ ಊಟ ಮಾಡದೇ, ತಮಗೆ ಸಿಕ್ಕ ಸಮಯದಲ್ಲಿ ಊಟ ಅಥವಾ ನಿದ್ದೆ ಮಾಡುತ್ತಾ, ದೀರ್ಘಕಾಲದ ಕೆಲಸವನ್ನು ಮುಂದುವರೆಸುತ್ತಾರೆ. ಈ ಮೂಲಕ ಜನರು ತಮ್ಮ ಜೀವನ ಶೈಲಿಯಲ್ಲಿ ಆರೋಗ್ಯವನ್ನು ನಿರ್ಲಕ್ಷ್ಯ ಮಾಡಿ, ಡೆಡ್ಲೈನ್ ಮುಗಿಸಲು ಕಷ್ಟಪಟ್ಟು ಹೋರಾಡುತ್ತಾರೆ. ಇದರಿಂದ ರಕ್ತದೊತ್ತಡ, ಸಕ್ಕರೆ ಕಾಯಿಲೆ. ಸಿವಿಡಿ ಮರಣ, ಕ್ಯಾನ್ಸರ್ ಅಪಾಯ, ಡಿಎಮ್, ಎಚ್‌ಟಿಎನ್, ಡಿಸ್ಲಿಪಿಡೆಮಿಯಾದಂತಹ ಚಯಾಪಚಯ ಕಾಯಿಲೆಗಳ ಅಪಾಯಗಳು ಮತ್ತು ಮೊಣಕಾಲು ನೋವು ಮತ್ತು ಆಸ್ಟಿಯೊಪೊರೋಸಿಸ್‌ನಂತಹ ಮಸ್ಕ್ಯುಲೋಸ್ಕೆಲಿಟಲ್ ಕಾಯಿಲೆಗಳು ಸೇರಿದಂತೆ ಹಲವಾರು ಸಮಸ್ಯೆಗಳು ಎದುರಾಗುತ್ತಿವೆ. ಕಳೆದ ಕೆಲವು ವರ್ಷಗಳಿಂದ ಎಲ್ಲ ವಯೋಮಾನದವರಲ್ಲಿ ಈ ಜಡ ಜೀವನ ಶೈಲಿಯು ಅನೇಕ ಸಮಸ್ಯೆಗಳನ್ನು ಎದುರು ಮಾಡುತ್ತಿದೆ. ಇದನ್ನು ಆಹಾರ ಪದ್ಧತಿ ಹಾಗೂ ದೈಹಿಕ ಚಟುವಟಿಕೆಗಳಿಂದ ದೂರ ಇರಿಸಬಹುದಾಗಿದೆ. ಈ ಕುರಿತ ಕೆಲವು ಸಲಹೆಗಳು ಇಂತಿವೆ...
ಸಮತೋಲಿತ ಆಹಾರ: ಕೊಬ್ಬಿನ ಅಂಶ ಕಡಿಮ ಇರುವ ಸೇವನೆ ಮಾಡಿ. ಇದರ ಬದಲು ಮೊಟ್ಟೆ, ಮೀನು, ಕೋಳಿ, ದ್ವಿದಳ ಧಾನ್ಯಗಳನ್ನು ಸೇವನೆ ಮಾಡಿ. ಇವು ಸ್ನಾಯುಗಳನ್ನು ಗಟ್ಟಿ ಮಾಡುತ್ತವೆ. ಅಲ್ಲದೆ, ನಿಶಕ್ತಿನ್ನು ಮಾಡುತ್ತವೆ. ಧಾನ್ಯದಲ್ಲಿ ಓಟ್ಸ್ ಬ್ರೌನ್ ರೈಸ್ ಸೇವನೆ ಮಾಡಿ. ಫೈಬರ್ ಮತ್ತು ಕಾರ್ಬೋಹೈಡ್ರೇಟ್‌ಗಳು ದೀರ್ಘಕಾಲೀನ ಏಕಾಗ್ರತೆಗೆ ಸಹಾಯ ಮಾಡುತ್ತವೆ. ಅಲ್ಲದೆ, ಡ್ರೈಫ್ರೂರ್ಟ್ ಸೇವನೆ ಮಾಡಿ. ಅಡುಗೆ ಮಾಡುವಾಗ ಆಲಿವ್ ಆಯಿಲ್ ಬಳಕೆ ಮಾಡಿ. ಇದು ಸ್ನಾಯುಗಳ ಉರಿಯೂತವನ್ನು ಕಡಿಮೆ ಮಾಡುತ್ತದೆ.
ರಕ್ತದಲ್ಲಿನ ಸಕ್ಕರೆ ಅಂಶ ನಿಯಂತ್ರದಲ್ಲಿರುವಂತೆ ನೋಡಿಕೊಳ್ಳಿ: ಅತಿಯಾದ ಸಂಸ್ಕರಿಸಿದ ಕಾರ್ಬೋಹೈಡ್ರೇಟ್ (ಬಿಳಿ ಬ್ರೆಡ್, ಪೇಸ್ಟ್ರಿಗಳು) ಪದಾರ್ಥಗಳ ಸೇವನೆ ನಿಲ್ಲಿಸಿ. ಇದರ ಬದಲು ಫೈಬರ್-ಭರಿತ ಆಹಾರಗಳನ್ನು (ತರಕಾರಿಗಳು, ಸೊಪ್ಪು, ಚಿಯಾ ಸೀಡ್ಸ್) ಸೇವನೆ ಮಾಡಿ.
ಹೆಚ್ಚೆಚ್ಚು ನೀರು ಕುಡಿಯಿರಿ: ನಿರ್ಜಲೀಕರಣವು ಆಯಾಸ, ತಲೆನೋವು ಮತ್ತು ಕಡಿಮೆ ಗಮನಕ್ಕೆ ಕಾರಣವಾಗುತ್ತದೆ. ಪ್ರತಿದಿನ 2-3 ಲೀಟರ್ ನೀರು ಕುಡಿಯಿರಿ. ನಿರ್ಜಲೀಕರಣವನ್ನು ತಡೆಗಟ್ಟಲು ಕಾಫಿ ಸೇವನೆ ಕಡಿಮೆ ಮಾಡಿ. ಇದರ ಬದಲು ಎಳನೀರು, ನಿಂಬೆ ಹಣ್ಣಿನ ಪಾನಕ, ಗಿಡಮೂಲಿಕೆಗಳಿಂದ ಮಾಡಿದ ಚಹಾ ಸೇವನೆ ಮಾಡಿ.
ಕೀಲು ಮತ್ತು ಸ್ನಾಯುಗಳ ಆರೋಗ್ಯ: ದೀರ್ಘಕಾಲ ಕುಳಿತುಕೊಳ್ಳುವುದರಿಂದ ಸ್ನಾಯುಗಳಲ್ಲಿ ಬಿಗಿತ ಮತ್ತು ಉರಿಯೂತ ಉಂಟಾಗುತ್ತದೆ. ಆಕ್ಸಿಡೇಟಿವ್ ಒತ್ತಡವನ್ನು ಎದುರಿಸಲು ಅರಿಶಿನ, ಶುಂಠಿ, ಹಣ್ಣುಗಳು ಮತ್ತು ಹಸಿರು ಸೊಪ್ಪನ್ನು ಸೇರಿಸಿ. ಮೆಗ್ನೀಸಿಯಮ್-ಭರಿತ ಆಹಾರಗಳು (ಕುಂಬಳಕಾಯಿ ಬೀಜಗಳು, ಬಾದಾಮಿ, ಡಾರ್ಕ್ ಚಾಕೊಲೇಟ್) ಸ್ನಾಯುಗಳ ವಿಶ್ರಾಂತಿ ಮತ್ತು ಒತ್ತಡ ನಿರ್ವಹಣೆಗೆ ಸಹಾಯ ಮಾಡುತ್ತವೆ.
ಆರೋಗ್ಯಕರ ಆಹಾರ ಪದ್ಧತಿ: ಹೆಚ್ಚಿನ ಕ್ಯಾಲೋರಿ, ಸಂಸ್ಕರಿಸಿದ ಆಹಾರಗಳ ಸೇವನೆ ಬದಲು ಹುರಿದ ಕಡಲೆ, ಡ್ರೈಫ್ರೂಟ್ಸ್ ಅಥವಾ ಪ್ರೋಟೀನ್ ವುಳ್ಳ ಆಹಾರ ಸೇವನೆ ಮಾಡಿ. ಇದು ನಿಮ್ಮ ದೇಹಕ್ಕೆ ನಿರಂತರ ಶಕ್ತಿಯನ್ನು ಒದಗಿಸಲಿದೆ.
ದೈಹಿಕ ಚಟುವಟಿಕೆ: ವಾರಕ್ಕೆ ಕನಿಷ್ಠ 150 ನಿಮಿಷಗಳ ಮಧ್ಯಮದಿಂದ ಹೆಚ್ಚು ತೀವ್ರತೆಯ ವ್ಯಾಯಾಮಗಳನ್ನು ಮಾಡುವ ಗುರಿ ಇರಿಸಿಕೊಳ್ಳಿ. ನೀವು ಆನಂದಿಸುವ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಿ: ಇದು ನಿಮಗೆ ಸ್ಥಿರವಾಗಿರಲು ಸಹಾಯ ಮಾಡುತ್ತದೆ. ಉದಾಹರಣೆಗೆ ಚುರುಕಾದ ನಡಿಗೆ, ಜಾಗಿಂಗ್, ಸೈಕ್ಲಿಂಗ್, ಈಜು ಅಥವಾ ನೃತ್ಯ ಮಾಡುವುದಾಗಿದೆ. ಪ್ರತಿದಿನ 10 ನಿಮಿಷಗಳ ನಡಿಗೆಯಿಂದ ಪ್ರಾರಂಭಿಸಿ ಮತ್ತು ಕ್ರಮೇಣ ಅವಧಿ ಮತ್ತು ತೀವ್ರತೆಯನ್ನು ಹೆಚ್ಚಿಸಿ.
ಆರೋಗ್ಯಕರ ತೂಕವನ್ನು ಕಾಪಾಡಿಕೊಳ್ಳಿ: ಸ್ವಲ್ಪ ಪ್ರಮಾಣದ ತೂಕವನ್ನು ಕಳೆದುಕೊಳ್ಳುವುದು ಸಹ ಆರೋಗ್ಯ ಸುಧಾರಣೆಗೆ ಸಹಾಯ ಮಾಡುತ್ತದೆ. ಮದ್ಯ ಸೇವನೆಯನ್ನು ಮಿತಿಗೊಳಿಸಿಯ ನೀವು ಮದ್ಯಪಾನ ಮಾಡುವವರಾಗಿದ್ದರೆ, ಮಿತ ಸೇವನೆಗೆ ಆದ್ಯತೆ ನೀಡಿ.
Advertisement