ಬೆಳಿಗ್ಗೆನಾ ರಾತ್ರಿನಾ? ಕೂದಲಿಗೆ ಎಣ್ಣೆ ಹಚ್ಚೋಕೆ ಬೆಸ್ಟ್ ಟೈಮ್ ಯಾವುದು?

ಅಜ್ಜಿ ಕಾಲದಿಂದಲೂ ರಾತ್ರಿ ಎಣ್ಣೆ ಹಚ್ಚಿ ಮಲಗು ಅಂತ ಹೇಳ್ತಾರೆ. ಆದ್ರೆ ಇಂದಿನ ವೇಗದ ಜೀವನದಲ್ಲಿ ರಾತ್ರಿ ಎಣ್ಣೆ ಹಚ್ಚಿ ಮಲಗಲು ಕೆಲವರಿಗೆ ಟೈಮ್ ಇರಲ್ಲ! ಮತ್ತೆ ಕೆಲವರು ಯಾವಾಗಲಾದರೂ ಬೆಳಿಗ್ಗೆ ಹಚ್ಚಿ 1 ಗಂಟೆ ಬಿಟ್ಟು ತಲೆ ಸ್ನಾನ ಮಾಡುತ್ತಾರೆ. ಹಾಗಾದರೆ ಕೂದಲಿಗೆ ಎಣ್ಣೆ ಹಚ್ಚಲು ಸರಿಯಾದ ಟೈಮ್ ಯಾವುದು?
Hair Tips
ಕೂದಲಿಗೆ ಎಣ್ಣೆ ಹಚ್ಚೋಕೆ ಬೆಸ್ಟ್ ಟೈಮ್ ಯಾವುದು? Online Desk
Updated on

Hair Tips: ಮಗು ರಾತ್ರಿ ಎಣ್ಣೆ ಹಚ್ಚಿ ಮಲಗು - ಇದು ನಮ್ಮ ಅಜ್ಜಿಯರ ಡೈಲಾಗ್. ಆದರೆ ಆಫೀಸ್, ಮಕ್ಕಳು, ವೇಗದ ಜೀವನದಲ್ಲಿ ರಾತ್ರಿ ತಲೆ ಅಂಟು ಅಂಟು ಆಗೋಕೆ ಯಾರಿಗೆ ಟೈಮ್ ಇದೆ? ಹಾಗಾಗಿ ಬಹಳಷ್ಟು ಜನ ಬೆಳಿಗ್ಗೆ ಹಚ್ಚಿ 1-2 ಗಂಟೆಯಲ್ಲಿ ತೊಳೆದುಬಿಡುತ್ತಾರೆ. ಹಾಗಾದರೆ ನಿಜವಾಗ್ಲೂ ಎಣ್ಣೆ ಹಚ್ಚೋಕೆ ಬೆಸ್ಟ್ ಟೈಮ್ ಯಾವುದು? ಬೆಳಿಗ್ಗೆನಾ ರಾತ್ರಿನಾ? ನಿಮ್ಮ ಕೂದಲಿನ ಸಮಸ್ಯೆಗೆ ತಕ್ಕಂತೆ ಎಣ್ಣೆ ಹಚ್ಚುವ ಸರಿಯಾದ ಸಮಯo ಬಗ್ಗೆ ಇಲ್ಲಿದೆ ಮಾಹಿತಿ...

ಇದಕ್ಕೆ ಸರಿಯಾದ ಉತ್ತರವೆಂದರೆ: ಅದು ನಿಮ್ಮ ಕೂದಲಿನ ಸಮಸ್ಯೆ ಮತ್ತು ನೀವು ಎಣ್ಣೆಯನ್ನು ಎಷ್ಟು ಹೊತ್ತು ಇಡಲು ಬಯಸುತ್ತೀರಿ ಎಂಬುದರ ಮೇಲೆಯೇ ಅವಲಂಬಿತವಾಗಿದೆ.

Hair Tips
ತಲೆ ಸ್ನಾನದ ನಂತರವೂ ಕೂದಲು ಎಣ್ಣೆಯುಕ್ತವಾಗಿ ಕಾಣಿಸುತ್ತಿದೆಯೇ? ಇದರ ಹಿಂದಿನ ಕಾರಣ ಇಲ್ಲಿದೆ..

1. ರಾತ್ರಿ ಎಣ್ಣೆ ಹಚ್ಚುವುದರಿಂದ ಆಗುವ ಲಾಭವೇನು?

ರಾತ್ರಿ ಮಲಗುವ ಮುನ್ನ ಎಣ್ಣೆ ಹಚ್ಚಿ ಮಲಗುವುದು ಡೀಪ್ ಕಂಡಿಷನಿಂಗ್ಗೆ ಬೆಸ್ಟ್.

  • ಕಾರಣವೇನು? ನಾವು ಮಲಗಿರುವಾಗ 7-8 ಗಂಟೆಗಳ ಕಾಲ ಎಣ್ಣೆ ಕೂದಲು ಮತ್ತು ನೆತ್ತಿಗೆ ಹೀರಿಕೊಳ್ಳಲು ಸಮಯ ಸಿಗುತ್ತದೆ. ಇದರಿಂದ ಕೂದಲು ಆಳದಿಂದ ಪೋಷಣೆ ಪಡೆಯುತ್ತದೆ.

  • ಯಾರಿಗೆ ಒಳ್ಳೆಯದು? ಒಣ ಕೂದಲು, ತಲೆಹೊಟ್ಟು, ಕೂದಲು ಉದುರುವಿಕೆ ಮತ್ತು ಬೆಳವಣಿಗೆ ನಿಧಾನವಾಗಿರುವವರಿಗೆ. ತೆಂಗಿನ ಎಣ್ಣೆ, ಬಾದಾಮಿ ಎಣ್ಣೆ, ಕ್ಯಾಸ್ಟರ್ ಎಣ್ಣೆಯನ್ನು ರಾತ್ರಿ ಹಚ್ಚಿ ಮರುದಿನ ತೊಳೆಯಿರಿ.

  • ಜೊತೆಗೆ ಹಳೆಯ ದಿಂಬು ಕವರ್ ಬಳಸಿ ಅಥವಾ ಟವೆಲ್ ಸುತ್ತಿಕೊಳ್ಳಿ.

2. ಬೆಳಿಗ್ಗೆ ಎಣ್ಣೆ ಹಚ್ಚುವುದರಿಂದ ಆಗುವ ಲಾಭವೇನು?

ಬೆಳಿಗ್ಗೆ ಸ್ನಾನಕ್ಕೂ ಮುನ್ನ ಬೆಳಿಗ್ಗೆ 1 ರಿಂದ 2 ಗಂಟೆ ಮುಂಚೆ ಎಣ್ಣೆ ಹಚ್ಚುವುದು.

  • ಕಾರಣವೇನು? ಕೂದಲಿಗೆ ಅಗತ್ಯವಾದ ಪೋಷಣೆ ಸಿಗುತ್ತದೆ ಮತ್ತು ಹೆಚ್ಚು ಹೊತ್ತು ಕೊಳೆ ಅಂಟಿಕೊಳ್ಳುವುದಿಲ್ಲ. ನೀವು ಹೊರಗೆ ಹೋಗುವವರಾದರೆ ಇದು ಬೆಸ್ಟ್.

  • ಯಾರಿಗೆ ಇದು ಒಳ್ಳೆಯದು? ಎಣ್ಣೆ ಕೂದಲು ಇರುವವರು, ತಲೆ ತುಂಬಾ ಬೆವರು ವವರು ಮತ್ತು ಪ್ರತಿದಿನ ಎಣ್ಣೆ ಹಚ್ಚಲು ಇಷ್ಟಪಡುವವರು. ಹಗುರವಾದ ಆರ್ಗನ್ ಎಣ್ಣೆ ಅಥವಾ ಜೋಜೋಬಾ ಎಣ್ಣೆಯನ್ನು ಸ್ವಲ್ಪ ಪ್ರಮಾಣದಲ್ಲಿ ಹಚ್ಚಿ.

  • ಜೊತೆಗೆ ಬಿಸಿಲಿಗೆ ಹೋಗುವ ಮುನ್ನ ಎಣ್ಣೆ ಹಚ್ಚಿ ಹೋಗಬೇಡಿ. ಯಾಕಂದ್ರೆ, ಬಿಸಿಲು ಪ್ಲಸ್ ಎಣ್ಣೆ ಅಂದ್ರೆ ಕೂದಲು ಡ್ಯಾಮೇಜ್.

Hair Tips
One Family One Soap ಬೇಡವೇ ಬೇಡ! ಫ್ಯಾಮಿಲಿಯ ಎಲ್ಲರೂ ಒಂದೇ ಸೋಪ್ ಬಳಸಿದರೆ ಏನಾಗುತ್ತೆ ಗೊತ್ತಾ?

ಹಾಗಾದರೆ ಸರಿಯಾದ ವಿಧಾನ ಯಾವುದು?

  • ವಾರಕ್ಕೆ 2 ಬಾರಿ ರಾತ್ರಿ: ಕೂದಲು ಬೆಳವಣಿಗೆ ಮತ್ತು ಆಳವಾದ ಪೋಷಣೆಗಾಗಿ

  • ವಾರಕ್ಕೆ 1 ಬಾರಿ ಬೆಳಿಗ್ಗೆ: ಕೂದಲಿಗೆ ಹೊಳಪು ಮತ್ತು ಫ್ರಿಜ್ ಕಂಟ್ರೋಲ್‌ಗಾಗಿ

ಏತನ್ಮಧ್ಯೆ, ಎರಡೂ ಟೈಂನಲ್ಲೂ ಎಣ್ಣೆಯನ್ನು ಬಿಸಿ ಮಾಡಿ, ನೆತ್ತಿಗೆ ಚೆನ್ನಾಗಿ ಮಸಾಜ್ ಮಾಡಿ. ಕನಿಷ್ಠ 45 ನಿಮಿಷದಿಂದ 8 ಗಂಟೆಗಳವರೆಗೆ ಬಿಡುವುದು ಮುಖ್ಯ. ಆದರೆ, ಪ್ರತಿದಿನ ಎಣ್ಣೆ ಹಚ್ಚುವುದರಿಂದ ನೆತ್ತಿಯ ರಂಧ್ರಗಳು ಮುಚ್ಚಿ ಕೂದಲು ಉದುರಬಹುದು. ಹಾಗಾಗಿ, ವಾರಕ್ಕೆ 2 ರಿಂದ 3 ಬಾರಿ ಮಾತ್ರವೇ ಸಾಕು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com