ಮಳೆಗಾಲದಲ್ಲಿ ಫ್ರಿಜ್‌ನಲ್ಲಿಡೊ ಪದಾರ್ಥಗಳು ಫ್ರೆಶ್ ಆಗಿರೋಕೆ ಡಯಲ್ ಎಷ್ಟು ಇಡಬೇಕು? ಈ ಕೆಲಸ ಮಾಡಿದ್ರೆ ಎಲ್ಲಾ ವೇಸ್ಟ್ ಆಗೋದು ಪಕ್ಕಾ!

Kitchen Hacks: ಫ್ರಿಜ್‌ನಲ್ಲಿ 1 ಕಡಿಮೆ ಕೂಲ್, 5 ಜಾಸ್ತಿ ಕೂಲ್ ಅಲ್ಲ; ಯಾಕಂದ್ರೆ, ತಪ್ಪು ಸೆಟ್ಟಿಂಗ್‌ನಿಂದ ಬಿಲ್ ಮತ್ತು ಆಹಾರ ಎರಡೂ ವೇಸ್ಟ್ ಆಗುತ್ತೆ! ಹಾಗಾಗಿ ಇಲ್ಲಿದೆ ನೋಡಿ ನಜವಾದ ಸತ್ಯ
Fridge
ಫ್ರಿಜ್‌Online Desk
Updated on

Kitchen Hacks: ಅಯ್ಯೋ ಫ್ರಿಜ್ ಕೂಲ್ ಮಾಡ್ತಿಲ್ಲ, ಡಯಲ್ 5ಕ್ಕೆ ತಿರುಗಿಸು; ಹೇ, ಕರೆಂಟ್ ಬಿಲ್ ಜಾಸ್ತಿ ಬರ್ತಿದೆ, 1ಕ್ಕೆ ಇಡು; ನಾವೆಲ್ಲರೂ ಇದೆ ತಪ್ಪು ಮಾಡ್ತೀವಿ. ಫ್ರಿಜ್‌ನ ಡಯಲ್‌ನಲ್ಲಿ 1 ರಿಂದ 5 ವರೆಗೆ ನಂಬರ್ ಇರುತ್ತೆ. ಬಹಳಷ್ಟು ಜನ 1 ಅಂದ್ರೆ ಕಡಿಮೆ ಕೂಲಿಂಗ್, 5 ಅಂದ್ರೆ ಫುಲ್ ಕೂಲಿಂಗ್ ಅಂತಾನೇ ಅನ್ಕೊಂಡಿರ್ತಾರೆ. ಆದ್ರೆ ಇದು 100% ತಪ್ಪು! ಹಾಗಾದ್ರೆ, ನಿಜವಾದ ಸತ್ಯ ಏನು? ಗೊತ್ತಾದ್ರೆ ನೀವು ಶಾಕ್ ಆಗ್ತೀರಾ ಮತ್ತು ನಿಮ್ಮ ಕರೆಂಟ್ ಬಿಲ್ ಕೂಡ ಕಡಿಮೆ ಆಗುತ್ತೆ.!

ಹೌದು, ಫ್ರಿಜ್‌ನಲ್ಲಿ 1 ಎಂದರೆ ಕಡಿಮೆ ಕೂಲಿಂಗ್ (ಕಡಿಮೆ ತಂಪು) ಮತ್ತು 5 ಎಂದರೆ ಗರಿಷ್ಠ ಕೂಲಿಂಗ್ (ಜಾಸ್ತಿ ತಂಪು) ಎಂದೇ ಅರ್ಥ! ಸಾಮಾನ್ಯವಾಗಿ ಶೇಕಡಾ 90 ರಷ್ಟು ಜನರು ಈ ನಂಬರ್‌ಗಳು ಸೆಲ್ಸಿಯಸ್ ತಾಪಮಾನ ಎಂದು ತಪ್ಪು ತಿಳಿಯುತ್ತಾರೆ. ಅಂದರೆ 1 ಎಂದರೆ 1°C ಮತ್ತು 5 ಎಂದರೆ 5°C ಎಂದು ಭಾವಿಸಿ, ಬೇಸಿಗೆಯಲ್ಲಿ ಹೆಚ್ಚು ತಂಪಾಗಲು 1ಕ್ಕೆ ಇಡುತ್ತಾರೆ. ಆದರೆ ಸತ್ಯಾಂಶವೇ ಬೇರೆ ಇದೆ.

Fridge
ಬೆಳಿಗ್ಗೆನಾ ರಾತ್ರಿನಾ? ಕೂದಲಿಗೆ ಎಣ್ಣೆ ಹಚ್ಚೋಕೆ ಬೆಸ್ಟ್ ಟೈಮ್ ಯಾವುದು?

ಹಾಗಾದ್ರೆ, ಫ್ರಿಜ್‌ನ ಕೂಲಿಂಗ್ ಸಿಸ್ಟಮ್ ವರ್ಕ್ ಆಗೋದು ಹೇಗೆ?

ಕೂಲಿಂಗ್ ಪವರ್: ಫ್ರಿಜ್ ಒಳಗೆ ನೀಡಲಾಗಿರುವ 1 ರಿಂದ 5 ರವರೆಗಿನ ಸಂಖ್ಯೆಗಳು ತಾಪಮಾನವನ್ನು ಸೂಚಿಸುವುದಿಲ್ಲ, ಬದಲಿಗೆ ಅವು ಕೂಲಿಂಗ್‌ನ ಸಾಮರ್ಥ್ಯವನ್ನು (Cooling Power) ಸೂಚಿಸುತ್ತವೆ. ಅದರಂತೆ, ಡಯಲ್‌ನಲ್ಲಿ ಸಂಖ್ಯೆ ಹೆಚ್ಚಾದಂತೆ (ಉದಾಹರಣೆಗೆ 5ಕ್ಕೆ ಇಟ್ಟರೆ), ಫ್ರಿಜ್‌ನ ಕಂಪ್ರೆಸರ್ ಹೆಚ್ಚು ಸಮಯ ಕೆಲಸ ಮಾಡುತ್ತದೆ ಮತ್ತು ಫ್ರಿಜ್ ಅತ್ಯಂತ ತಂಪಾಗುತ್ತದೆ. ಆದ್ರೆ, ಸಂಖ್ಯೆಯನ್ನು 1ಕ್ಕೆ ಇಟ್ಟರೆ ಕೂಲಿಂಗ್ ಸಾಮರ್ಥ್ಯ ಅತ್ಯಂತ ಕಡಿಮೆಯಾಗಿರುತ್ತದೆ.

ತಪ್ಪಾಗಿ ಸೆಟ್ ಮಾಡಿದರೆ ಏನಾಗುತ್ತೆ?

  • ಬೇಸಿಗೆಯಲ್ಲಿ ಹೆಚ್ಚು ಕೂಲ್ ಬೇಕೆಂದು 1 ಅಥವಾ 2ಕ್ಕೆ ಇಟ್ಟರೆ, ಫ್ರಿಜ್‌ನಲ್ಲಿ ಸರಿಯಾದ ತಾಪಮಾನ ಸಿಗದೆ ಹಾಲು ಮತ್ತು ಆಹಾರ ಪದಾರ್ಥ ಗಳು ಬೇಗನೆ ಕೆಡುತ್ತವೆ.

  • ಕೂಲ್ ಕಡಿಮೆ ಮಾಡಲು ಮಾಡಲು 5ಕ್ಕೆ ಇಟ್ಟರೆ, ಫ್ರಿಜ್ ಅತಿಯಾಗಿ ತಂಪಾಗುವುದ್ರರೊಂದಿಗೆ ತರಕಾರಿಗಳು ಫ್ರೀಜ್ ಆಗುತ್ತವೆ ಮತ್ತು ಹಿಂಭಾಗದಲ್ಲಿ ಐಸ್ ಗಡ್ಡೆಗಳು ತುಂಬಿಕೊಳ್ಳುತ್ತವೆ.

Fridge
ಫ್ರಿಜ್‌Online Desk

ಹಾಗಾದರೆ ಫ್ರಿಜ್ ಅನ್ನು ಯಾವ ನಂಬರ್‌ನಲ್ಲಿ ಇಡಬೇಕು?

  • ಸಾಮಾನ್ಯ ದಿನಗಳಲ್ಲಿ: ಯಾವಾಗಲೂ ಮಧ್ಯಮ ಸೆಟ್ಟಿಂಗ್ ಅಂದರೆ 3ನೇ ನಂಬರ್‌ಗೆ ಇಡುವುದು ಸೂಕ್ತ. ಇದು ವಿದ್ಯುತ್ ಉಳಿಸುತ್ತದೆ ಮತ್ತು ಆಹಾರವನ್ನೂ ತಾಜಾವಾಗಿಡುತ್ತದೆ.

  • ಬೇಸಿಗೆ ಕಾಲದಲ್ಲಿ: ಫ್ರಿಜ್‌ನಲ್ಲಿ ಹೆಚ್ಚಿನ ಆಹಾರವಿದ್ದರೆ ಮತ್ತು ಹೊರಗಿನ ತಾಪಮಾನ ಹೆಚ್ಚಾಗಿದ್ದಾಗ 4 ಅಥವಾ 5ಕ್ಕೆ ಸೆಟ್ ಮಾಡಬೇಕು.

  • ಚಳಿಗಾಲ ಹಾಗೂ ಮಳೆಗಾಲದಲ್ಲಿ: ವಾತಾವರಣ ಈಗಾಗಲೇ ತಂಪಾಗಿರುವುದರಿಂದ ಮತ್ತು ಫ್ರಿಜ್‌ನಲ್ಲಿ ಕಡಿಮೆ ಸಾಮಗ್ರಿ ಇದ್ದಾಗ 1 ಅಥವಾ 2ಕ್ಕೆ ಇಡಬಹುದು.

Fridge
Kitchen Hacks: ಮಳೆಗಾಲದಲ್ಲಿ ಉಪ್ಪು ಗಟ್ಟಿಯಾಗುತ್ತಾ? ಸಕ್ಕರೆ ಕರಗದಂತೆ ತಡೆಯಲು ಇಲ್ಲಿದೆ ಸಿಂಪಲ್ ಹಾಕ್ಸ್! ಏನು ಗೊತ್ತಾ?

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com