ಸೀಗೆಕಾಯಿಕಂಡರೆ ಮೂಗು ಮುರಿಯುತ್ತೀರಾ...? ಹಾಗಿದ್ದರೆ ಈ ವಿಷಯಗಳನ್ನು ನೀವು ತಿಳಿಯಲೇಬೇಕು…

ಸೀಗೆಕಾಯಿ ಮರದಲ್ಲಿ ಬಿಡುವ ಅವರೆಕಾಯಿಯಂತಹ ಕೋಡಿನ ರೂಪದ ಫಲವಾಗಿದ್ದು ಇದರೊಳಗೆ ಬೀನ್ಸ್ ನಂತಹ ಚಿಕ್ಕ ಬೀಜಗಳಿರುತ್ತವೆ. ಆದರೆ, ಕೂದಲ ಆರೈಕೆಗಾಗಿ ಈ ಬೀಜಗಳನ್ನು ನಿವಾರಿಸಿ ಕೇವಲ ಹೊರಕವಚವನ್ನು ಚೆನ್ನಾಗಿ ಒಣಗಿಸಿ ಪುಡಿ ಮಾಡಿ ಬಳಸಲಾಗುತ್ತದೆ.
File photo
ಸಂಗ್ರಹ ಚಿತ್ರ
Updated on

ಕೂದಲ ಆರೈಕೆಗೆ ನೈಸರ್ಗಿಕ ವಿಧಾನಗಳೇ ಅತ್ಯಂತ ಸುರಕ್ಷಿತ. ಕೂದಲ ಆರೋಗ್ಯ ಮತ್ತು ಸೌಂದರ್ಯವನ್ನು ಹೆಚ್ಚಿಸುವ ಗುಣವಿರುವ ಅದ್ಭುತ ಗಿಡಮೂಲಿಗೆ ಎಂದರೆ ಸೀಗೆಕಾಯಿ. ತ್ವಚೆ ಮತ್ತು ಕೂದಲ ಆರೈಕೆಗಾಗಿ ಸೀಗೆಕಾಯಿಯನ್ನು ಸಾವಿರಾರು ವರ್ಷಗಳಿಂದ ಬಳಸಲ್ಪಡುತ್ತಾ ಬರಲಾಗಿದೆ. ಇದರ ಪ್ರಯೋಜನಗಳನ್ನು ಆಯುರ್ವೇದದಲ್ಲಿಯೂ ಉಲ್ಲೇಖಿಸಲಾಗಿದೆ.

ಸೀಗೆಕಾಯಿ ಮರದಲ್ಲಿ ಬಿಡುವ ಅವರೆಕಾಯಿಯಂತಹ ಕೋಡಿನ ರೂಪದ ಫಲವಾಗಿದ್ದು ಇದರೊಳಗೆ ಬೀನ್ಸ್ ನಂತಹ ಚಿಕ್ಕ ಬೀಜಗಳಿರುತ್ತವೆ. ಆದರೆ, ಕೂದಲ ಆರೈಕೆಗಾಗಿ ಈ ಬೀಜಗಳನ್ನು ನಿವಾರಿಸಿ ಕೇವಲ ಹೊರಕವಚವನ್ನು ಚೆನ್ನಾಗಿ ಒಣಗಿಸಿ ಪುಡಿ ಮಾಡಿ ಬಳಸಲಾಗುತ್ತದೆ.

ಆಧುನಿಕತೆ ಬೆಳೆಯುತ್ತಾ ಮಾರುಕಟ್ಟೆಯಲ್ಲಿ ದೊರೆಯುವ ಉತ್ಪನ್ನಗಳನ್ನು ಜನರು ಬಳಸುತ್ತಾ ಹೋದಂತೆ ಅನೇಕ ಸಮಸ್ಯೆಗಳು ಉಲ್ಭಣವಾಗಲು ಪ್ರಾರಂಭವಾಯಿತು. ವಯಸ್ಸಾದವರಲ್ಲಿ ಮಾತ್ರ ಕಂಡು ಬರುತ್ತಿದ್ದ ಬಿಳಿಕೂದಲು, ಇದೀಗ 10 ವರ್ಷದ ಮಗವಿಗೂ ಕಾಣಿಸುತ್ತಿದೆ. ಇದಕ್ಕೆಲ್ಲಾ ಕಾರಣ ನಾವು ಅನುಸರಿಸುತ್ತಿರುವ ಅನಾರೋಗ್ಯಕರವಾದ ಅಭ್ಯಾಸಗಳೇ ಆಗಿವೆ.

ಬೇಸಿಗೆಯ ತಾಪಮಾನ ಏರಿದಂತೆ ನಮ್ಮ ದೇಹದಂತೆಯೇ ತಲೆಚರ್ಮವೂ ಬೆವರಿನಿಂದ ಒದ್ದೆಯಾಗುತ್ತದೆ. ಈ ನಿರಂತರ ತೇವಾಂಶದಿಂದ ಕೂದಲು ಜಡವಾಗುವುದು, ಅಂಟಿಕೊಳ್ಳುವುದು, ಹೊಳಪು ಕಳೆದುಕೊಳ್ಳುವುದು ಸಾಮಾನ್ಯ.

ಕೆಲವೇ ದಿನಗಳಲ್ಲಿ ತಲೆಹೊಟ್ಟೆ, ಉರಿಯೂತ, ಕೂದಲು ಉದುರುವಿಕೆ ಹೆಚ್ಚಾಗುತ್ತದೆ. ಆಗ ನಾವು ತಕ್ಷಣ ಆಂಟಿ-ಡ್ಯಾಂಡ್ರಫ್ ಅಥವಾ ಕೂಲಿಂಗ್ ಶಾಂಪೂಗಳತ್ತ ಮುಖ ಮಾಡುತ್ತೇವೆ. ಆದರೆ, ಈ ರಾಸಾಯನಿಕ ಉತ್ಪನ್ನಗಳು ತಲೆಚರ್ಮದ ನೈಸರ್ಗಿಕ ತೈಲ ಸಮತೋಲನವನ್ನು ಕೆಡಿಸಿ ಸಮಸ್ಯೆಯನ್ನು ಮತ್ತಷ್ಟು ಗಂಭೀರಗೊಳಿಸುವ ಸಾಧ್ಯತೆಗಳಿರುತ್ತವೆ.

File photo
ಸಿಕ್ಕಾಪಟ್ಟೆ ಗೊರಕೆ ಹೊಡೆಯುತ್ತೀರಾ? Vitamin D ಕೊರತೆಯಿರಬಹುದು, ಚೆಕ್ ಮಾಡಿದ್ದೀರಾ?

ಇದಕ್ಕೆ ಶತಮಾನಗಳಿಂದ ಭಾರತೀಯ ಮನೆಗಳಲ್ಲಿ ಬಳಸಲಾಗುತ್ತಿರುವ ಸರಳ, ಪರಿಣಾಮಕಾರಿ ಪರಿಹಾರವೇ Acacia concinna – ಅಂದರೆ ಸೀಗೆಕಾಯಿ.

ಸೀಗೇಕಾಯಿ ಪರಿಣಾಮಕಾರಿ ಹೇಗೆ..?

ಮೃದುವಾದ, ಆಳವಾದ ಶುದ್ಧೀಕರಣ

ಸೀಗೇಕಾಯಿ ಬಳಕೆ ಮಾಡಿದರೆ ಅದು ಕೂದಲಿನಲ್ಲಿರುವ ಧೂಳು, ಬೆವರು, ಹೆಚ್ಚುವರಿ ತೈಲವನ್ನು ತೆಗೆದುಹಾಕುತ್ತದೆ. ಆದರೆ, ತಲೆಚರ್ಮದ ನೈಸರ್ಗಿಕ ರಕ್ಷಣಾತ್ಮಕ ತೈಲವನ್ನು ಸಂಪೂರ್ಣವಾಗಿ ತೆಗೆಯುವುದಿಲ್ಲ.

ತಲೆಹೊಟ್ಟಿಗೆ ನೈಸರ್ಗಿಕ ಚಿಕಿತ್ಸೆ

ಸೀಗೆಕಾಯಿಯ ಆಂಟಿ-ಫಂಗಲ್ ಗುಣಗಳು ತಲೆಹೊಟ್ಟನ್ನು ಸಂಪೂರ್ಣವಾಗಿ ನಿಯಂತ್ರಿಸುತ್ತವೆ. ತಲೆಚರ್ಮದ ತಾಪಮಾನ ಸಮತೋಲನದಲ್ಲಿಡುವ ಮೂಲಕ ಸಮಸ್ಯೆ ಮರುಕಳುಹಿಸುವಿಕೆಯನ್ನು ಕಡಿಮೆ ಮಾಡುತ್ತದೆ.

ಉರಿಯೂತ ಶಮನ

ಬೆವರಿನಿಂದ ಉಂಟಾಗುವ ಕೆಂಪಾಗುವಿಕೆ, ಉರಿಯೂತ ಮತ್ತು ನವೆಯಾಗುವಿಕೆಯನ್ನು ತಕ್ಷಣ ಶಮನಗೊಳಿಸುತ್ತದೆ.

ಕೂದಲು ಬೇರುಗಳಿಗೆ ಪೋಷಣೆ

ವಿಟಮಿನ್ A, C, E, K ಮತ್ತು ಆ್ಯಂಟಿ-ಆಕ್ಸಿಡೆಂಟ್‌ಗಳು ಕೂದಲು ಬೇರುಗಳನ್ನು ಬಲಪಡಿಸಿ, ಉದುರುವಿಕೆಯನ್ನು ಕಡಿಮೆ ಮಾಡುತ್ತವೆ.

ನೈಸರ್ಗಿಕ ಹೊಳಪು ಮತ್ತು ದಪ್ಪ

ಸಾಪೊನಿನ್ ಅಂಶದಿಂದ ಕೂದಲು ಹಗುರವಾಗಿ, ಬೌನ್ಸಿ ಮತ್ತು ಹೊಳೆಯುವಂತೆ ಕಾಣುತ್ತದೆ.

ಸೋಂಕು ನಿವಾರಣೆಗೂ ಉಪಯುಕ್ತ

ಬ್ಯಾಕ್ಟೀರಿಯಾ ಮತ್ತು ಫಂಗಸ್ ವಿರುದ್ಧ ಹೋರಾಡುವ ಗುಣಗಳಿರುವ ಕಾರಣಮಕ್ಕಳಿಂದ ದೊಡ್ಡವರವರೆಗೆ ಸುರಕ್ಷಿತವಾಗಿ ಬಳಸಬಹುದು.

ಹಾಗಾದರೆ ಇದನ್ನು ಬಳಸುವುದು ಹೇಗೆ..?

2–3 ಚಮಚ ಸೀಗೆಕಾಯಿ ಪುಡಿಯನ್ನು ನೀರಿನಲ್ಲಿ ಬೆರೆಸಿ ಮೃದುವಾದ ಪೇಸ್ಟ್ ತಯಾರಿಸಿ. ತೇವವಾದ ತಲೆಚರ್ಮ ಮತ್ತು ಕೂದಲಿಗೆ ಹಚ್ಚಿ 10–15 ನಿಮಿಷ ಬಿಡಿ. ನಂತರ ಚೆನ್ನಾಗಿ ತೊಳೆಯಿರಿ. ವಾರಕ್ಕೆ 1–2 ಬಾರಿ ಶಾಂಪೂ ಬದಲು ಬಳಸಬಹುದು.

ಕೊನೆಯಾದಿ ಹೇಳುವುದಾದರೆ, ಅತ್ಯಾಧುನಿಕ ಸಲೂನ್ ಚಿಕಿತ್ಸೆಗಳು, ದುಬಾರಿ ಸೀರಮ್‌ಗಳು ಎಲ್ಲವೂ ಬಂದರೂ, ನಮ್ಮ ಪರಂಪರೆಯ ನೈಸರ್ಗಿಕ ವಿಧಾನಗಳ ಮಹತ್ವ ಮಾತ್ರ ಇನ್ನೂ ಕಡಿಮೆಯಾಗಿಲ್ಲ.

ಸೀಗೆಕಾಯಿ ಕಡಿಮೆ ವೆಚ್ಚದ, ರಾಸಾಯನಿಕ ರಹಿತ ಮತ್ತು ಕೂದಲಿನ ಸಮಸ್ಯೆಗಳಿಗೆ ನೈಸರ್ಗಿಕ ಪರಿಹಾರವಾಗಿದೆ. ನಿಮ್ಮ ಕೂದಲಿನ ಆರೋಗ್ಯವನ್ನು ಕಾಪಾಡಲು, ಪ್ರಕೃತಿಯೊಂದಿಗೆ ಹೊಂದಿಕೊಂಡ ಈ ಸರಳ ವಿಧಾನವನ್ನು ಒಮ್ಮೆ ಪ್ರಯತ್ನಿಸಿ ನೋಡಿ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com