ಶುರುವಾಯ್ತು ಬೇಸಿಗೆ: ಮೊಡವೆ ಸಮಸ್ಯೆ ಕಾಡುತ್ತಿದೆಯಾ? ಹಾಗಿದ್ದರೆ ಪಿಂಪಲ್ ಪ್ಯಾಚ್ ಬಳಸಿ..!

ಮೊಡವೆ ಸಮಸ್ಯೆಯನ್ನು ಕಡಿಮೆ ಮಾಡಲು ದಿನದಲ್ಲಿ ಕನಿಷ್ಠ ಎರಡು ಬಾರಿ ಮುಖವನ್ನು ಸ್ವಚ್ಛವಾಗಿ ತೊಳೆಯುವುದು ಅಗತ್ಯ.
File photo
ಸಂಗ್ರಹ ಚಿತ್ರ
Updated on

ಬೇಸಿಗೆ ಕಾಲ ಬಂದಾಗ ಚರ್ಮದ ಹಲವು ಸಮಸ್ಯೆಗಳು ಹೆಚ್ಚಾಗುತ್ತವೆ. ವಿಶೇಷವಾಗಿ ಯುವಜನರಲ್ಲಿ ಮೊಡವೆ ಸಮಸ್ಯೆ ಸಾಮಾನ್ಯವಾಗಿ ಕಾಣಿಸಿಕೊಳ್ಳುತ್ತದೆ. ಹೆಚ್ಚಿದ ಉಷ್ಣತೆ, ಬೆವರು, ಧೂಳು ಹಾಗೂ ಮಾಲಿನ್ಯದಿಂದ ಚರ್ಮದ ರಂಧ್ರಗಳು ಮುಚ್ಚಿಕೊಳ್ಳುತ್ತವೆ. ಇದರ ಪರಿಣಾಮವಾಗಿ ಮುಖದಲ್ಲಿ ಮೊಡವೆಗಳು ಕಾಣಿಸಿಕೊಳ್ಳುತ್ತವೆ.

ಇದಲ್ಲದೆ, ಬೇಸಿಗೆಯಲ್ಲಿ ದೇಹದಲ್ಲಿ ಎಣ್ಣೆಯ ಅಂಶ ಕೂಡ ಹೆಚ್ಚಾಗುತ್ತದೆ. ಈ ಎಣ್ಣೆ ಧೂಳು ಮತ್ತು ಮಾಲಿನ್ಯದ ಜೊತೆ ಸೇರಿ ಚರ್ಮದ ರಂಧ್ರಗಳನ್ನು ಮುಚ್ಚುತ್ತದೆ. ಇದರಿಂದ ಬ್ಯಾಕ್ಟೀರಿಯಾ ಬೆಳೆಯಲು ಅನುಕೂಲವಾಗುತ್ತದೆ ಮತ್ತು ಮೊಡವೆ ಸಮಸ್ಯೆ ಉಂಟಾಗುತ್ತದೆ.

ಮೊಡವೆ ಸಮಸ್ಯೆಯನ್ನು ಕಡಿಮೆ ಮಾಡಲು ದಿನದಲ್ಲಿ ಕನಿಷ್ಠ ಎರಡು ಬಾರಿ ಮುಖವನ್ನು ಸ್ವಚ್ಛವಾಗಿ ತೊಳೆಯುವುದು ಅಗತ್ಯ. ಹೊರಗಿನಿಂದ ಮನೆಗೆ ಬಂದ ನಂತರ ಮುಖ ತೊಳೆಯುವುದು ಮತ್ತು ಹೆಚ್ಚು ಬೆವರು ಬಂದಾಗ ಮುಖವನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಚರ್ಮದ ಆರೋಗ್ಯಕ್ಕೆ ಸಹಕಾರಿ. ಜೊತೆಗೆ ಹೆಚ್ಚು ಎಣ್ಣೆಯುಕ್ತ ಆಹಾರವನ್ನು ಕಡಿಮೆ ಮಾಡುವುದು ಮತ್ತು ಸಾಕಷ್ಟು ನೀರು ಕುಡಿಯುವುದು ಕೂಡ ಮುಖ್ಯ.

ಆದರೆ, ಎಷ್ಟೇ ಜಾಗ್ರತೆ ತೆಗೆದುಕೊಂಡರೂ ಕೆಲವೊಮ್ಮೆ ಮೊಡವೆಗಳು ಕಾಣಿಸಿಕೊಳ್ಳುತ್ತಲೇ ಇರುತ್ತವೆ. ಇಂತಹ ಸಂದರ್ಭಗಳಲ್ಲಿ ಔಷಧಿಗಳ ಜೊತೆಗೆ ಈಗ ಮಾರುಕಟ್ಟೆಯಲ್ಲಿ ದೊರೆಯುವ ಪಿಂಪಲ್ ಪ್ಯಾಚ್‌ಗಳು ಸಹ ಉತ್ತಮ ಪರಿಹಾರವಾಗಿ ಬಳಕೆಯಾಗುತ್ತಿವೆ.

ಇತ್ತೀಚೆಗೆ ಮೊಡವೆಗಳಿಗೆ ಪರಿಹಾರವಾಗಿ ಪಿಂಪಲ್ ಪ್ಯಾಚ್‌ಗಳ ಬಳಕೆ ಹೆಚ್ಚಾಗಿದೆ. ಇವು ಸಣ್ಣ ಸ್ಟಿಕ್ಕರ್‌ಗಳಂತೆ ಇರುತ್ತವೆ. ಈ ಸ್ಟಿಕ್ಕರ್'ನ್ನು ಮೊಡವೆ ಇರುವ ಭಾಗದ ಮೇಲೆ ಅಂಟಿಸಿ ಕೆಲವು ಗಂಟೆಗಳು ಅಥವಾ ರಾತ್ರಿ ಪೂರ್ತಿ ಇದ್ದರೆ ಸಾಕು. ಅದು ಎಣ್ಣೆ ಮತ್ತು ಪಸ್ ಅನ್ನು ಹೀರಿಕೊಂಡು ಆ ಭಾಗವನ್ನು ಸ್ವಚ್ಛವಾಗಿಡುತ್ತದೆ. ಇದರಿಂದ ಮೊಡವೆ ಬೇಗ ಗುಣವಾಗಲು ಸಹಾಯವಾಗುತ್ತದೆ.

file photo
ಸಂಗ್ರಹ ಚಿತ್ರ

ಮೊಡವೆ ಗುಣವಾಗಲು ಪಿಂಪಲ್ ಪ್ಯಾಚ್ ಹೇಗೆ ಸಹಾಯ ಮಾಡುತ್ತದೆ?

ಎಣ್ಣೆ ಮತ್ತು ಪಸ್ ಹೀರಿಕೊಳ್ಳುತ್ತದೆ

ಮೊಡವೆಗಳಲ್ಲಿ ಸಾಮಾನ್ಯವಾಗಿ ಎಣ್ಣೆ ಮತ್ತು ಪಸ್ ಸಂಗ್ರಹವಾಗಿರುತ್ತದೆ. ಪಿಂಪಲ್ ಪ್ಯಾಚ್‌ಗಳು ಈ ಅನಗತ್ಯ ದ್ರವಗಳನ್ನು ಹೀರಿಕೊಂಡು ಆ ಭಾಗವನ್ನು ಸ್ವಚ್ಛವಾಗಿಡುತ್ತವೆ. ಇದರಿಂದ ಮೊಡವೆ ಬೇಗ ಒಣಗಿ ಗುಣವಾಗಲು ಸಹಾಯವಾಗುತ್ತದೆ.

ಧೂಳು ಮತ್ತು ಮಾಲಿನ್ಯದಿಂದ ರಕ್ಷಣೆ

ಪಿಂಪಲ್ ಪ್ಯಾಚ್ ಚರ್ಮದ ಮೇಲೆ ರಕ್ಷಣಾತ್ಮಕ ಪದರದಂತೆ ಕೆಲಸ ಮಾಡುತ್ತದೆ. ಇದು ಧೂಳು, ಮಾಲಿನ್ಯ ಮತ್ತು ಬ್ಯಾಕ್ಟೀರಿಯಾಗಳು ಮೊಡವೆ ಭಾಗಕ್ಕೆ ತಾಗದಂತೆ ತಡೆಯುತ್ತದೆ. ಇದರಿಂದ ಸೋಂಕು ಹೆಚ್ಚಾಗುವ ಸಾಧ್ಯತೆ ಕಡಿಮೆಯಾಗುತ್ತದೆ.

ಚರ್ಮಕ್ಕೆ ಅಗತ್ಯವಾದ ತೇವಾಂಶ ನೀಡುತ್ತದೆ

ಹೆಚ್ಚಿನ ಪಿಂಪಲ್ ಪ್ಯಾಚ್‌ಗಳಲ್ಲಿ ಹೈಡ್ರೋಕೊಲಾಯ್ಡ್ ಪದಾರ್ಥವಿರುತ್ತದೆ. ಇದು ಚರ್ಮಕ್ಕೆ ಅಗತ್ಯವಾದ ತೇವಾಂಶವನ್ನು ನೀಡಿ ಗಾಯ ಬೇಗ ಗುಣವಾಗಲು ಸಹಾಯ ಮಾಡುತ್ತದೆ.

File photo
Blood sugar ನಿಯಂತ್ರಣದಲ್ಲಿಲ್ಲವೇ? ನಿರ್ಲಕ್ಷಿಸಿದರೆ ಕಣ್ಣಿನ ದೃಷ್ಟಿ ಕಳೆದುಕೊಳ್ಳುತ್ತೀರಾ ಹುಷಾರ್..!

ಔಷಧೀಯ ಅಂಶಗಳ ಸಹಾಯ

ಕೆಲವು ಪ್ಯಾಚ್‌ಗಳಲ್ಲಿ ಸಾಲಿಸಿಲಿಕ್ ಆ್ಚಸಿಡ್ ಮತ್ತು ಬೆನ್ಜೊಯಿಲ್ ಪೆರಾಕ್ಸೈಡ್ ಮುಂತಾದ ಪದಾರ್ಥಗಳಿರುತ್ತವೆ. ಇವು ಉರಿಯೂತ ಕಡಿಮೆ ಮಾಡುವುದು, ರಂಧ್ರಗಳನ್ನು ಸ್ವಚ್ಛಗೊಳಿಸುವುದು ಮತ್ತು ಬ್ಯಾಕ್ಟೀರಿಯಾಗಳನ್ನು ನಿಯಂತ್ರಿಸುವಲ್ಲಿ ಸಹಾಯ ಮಾಡುತ್ತವೆ.

ಬೇಸಿಗೆಯಲ್ಲಿ ಚರ್ಮದ ಆರೈಕೆ ಅತ್ಯಂತ ಮುಖ್ಯ. ನಿಯಮಿತವಾಗಿ ಮುಖ ತೊಳೆಯುವುದು, ಸ್ವಚ್ಛತೆ ಕಾಪಾಡುವುದು ಮತ್ತು ಅಗತ್ಯವಿದ್ದಾಗ ಪಿಂಪಲ್ ಪ್ಯಾಚ್ ಬಳಸುವುದು ಮೊಡವೆ ಸಮಸ್ಯೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಆದರೆ ಸಮಸ್ಯೆ ಹೆಚ್ಚು ಆಗಿದ್ದರೆ ಚರ್ಮ ತಜ್ಞರ ಸಲಹೆ ಪಡೆಯುವುದು ಉತ್ತಮ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com