
ಪಾಕಿಸ್ತಾನದಲ್ಲಿ ಉಗ್ರರು ಮಕ್ಕಳ ಮೇಲೆ ದಾಳಿ ಮಾಡುವ ಎರಡು ದಿನ ಮುಂಚಿತವಾಗಿ ಇದೇ ಮಾದರಿಯಲ್ಲಿ ಸಿಡ್ನಿಯಲ್ಲಿ ದಾಳಿಯಾಗಿತ್ತು. ಇಸ್ಲಾಂ ಮೂಲಭೂತವಾದಿ ಹಾರನ್ ಮೋನಿಸ್ ಸಿಡ್ನಿಯಲ್ಲಿರುವ ಲಿಂಟ್ ಕಾಫಿ ಕೆಫೆಯನ್ನು ತನ್ನ ಕೈ ವಶ ಮಾಡಿಕೊಂಡಿದ್ದನು. ಕಾಫಿ ಕೆಫೆಗೆ ಬಂದ ಗ್ರಾಹಕರನ್ನು ಒತ್ತೆಯಾಳುಗಾಳಾಗಿರಿಸಿಕೊಂಡಿದ್ದ ಮೋನಿಸ್ ಆಸ್ಚ್ರೇಲಿಯಾ ಪ್ರಧಾನಿ ಅಬಾಟ್ ಅವರೊಂದಿಗೆ ಮಾತನಾಡಬೇಕು ಎಂದು ಬೇಡಿಕೆ ಮುಂದಿಟ್ಟದ್ದ.
ಆ ವೇಳೆಗಾಗಲೇ ಕಾಫಿ ಕೆಫೆಯನ್ನು ಸುತ್ತುವರೆದಿದ್ದ ಶಸ್ತ್ರ ಸಜ್ಜಿತ ಸಿಡ್ನಿ ಪೊಲೀಸರು, ರಕ್ಷಣಾ ಕಾರ್ಯಾಚರಣೆ ನಡೆಸಿ ಹಾರನ್ ಮೋನಿಸ್‌ನನ್ನು ಹೊಡೆದುರುಳಿಸುವಲ್ಲಿ ಯಶಸ್ವಿಯಾಗಿದ್ದರು. ಆದರೆ ದುರಾದೃಷ್ಟವಶಾತ್ ಘಟನೆಯಲ್ಲಿ ಇಬ್ಬರು ಪ್ರಾಣ ಕಳೆದುಕೊಂಡಿದ್ದರು. ಸುಮಾರು 16 ಗಂಟೆಗಳ ಕಾಲ ನಡೆದ ಕಾರ್ಯಾಚರಣೆಯಲ್ಲಿ ಲಿಂಟ್ ಕಾಫಿ ಕೆಫೆ ಮ್ಯಾನೇಜರ್ ಮತ್ತು ಮತ್ತೋರ್ವ ಟೆಕ್ಕಿ ಸಾವನ್ನಪ್ಪಿದ್ದ. ಬಳಿಕ ನಡೆದ ವಿಚಾರಣೆಯಲ್ಲಿ ಹಾರನ್ ಮೋನಿಸ್ ವಿರುದ್ಧ ದಾಖಲಾಗಿದ್ದ ಹಲವು ಪ್ರಕರಣಗಳು ಬಯಲಾಗಿದ್ದವು.
Advertisement