ಪೊಲೀಸ್ ವ್ಯವಸ್ಥೆಯನ್ನೇ ಪ್ರಶ್ನಿಸಿದ ಕಬ್ಬನ್ ಪಾರ್ಕ್ ಗ್ಯಾಂಗ್ ರೇಪ್

ನವೆಂಬರ್ 11 ಬುಧವಾರ ರಾತ್ರಿ ಟೆನ್ನಿಲ್ ಕಲಿಕೆಗಾಗಿ ಬೆಂಗಳೂರಿಗೆ ಆಗಮಿಸಿದ್ದ ಮಹಿಳೆಯೊಬ್ಬಳನ್ನು ಕಬ್ಬನ್ ಪಾರ್ಕಿನ ಇಬ್ಬರು ಭದ್ರತಾ ಸಿಬ್ಬಂದಿಗಳೇ ಸಾಮೂಹಿಕ ಅತ್ಯಾಚಾರವೆಸಗಿದ್ದ ಪ್ರಕರಣ ರಾಜ್ಯಾದ್ಯಂತ ಸುದ್ದಿಯಾಗಿತ್ತು...
ಕಬ್ಬನ್ ಪಾರ್ಕ್ ಗ್ಯಾಂಗ್ ರೇಪ್ ಪ್ರಕರಣ
ಕಬ್ಬನ್ ಪಾರ್ಕ್ ಗ್ಯಾಂಗ್ ರೇಪ್ ಪ್ರಕರಣ

ನವೆಂಬರ್ 11 ಬುಧವಾರ ರಾತ್ರಿ ಟೆನ್ನಿಲ್ ಕಲಿಕೆಗಾಗಿ ಬೆಂಗಳೂರಿಗೆ ಆಗಮಿಸಿದ್ದ ಮಹಿಳೆಯೊಬ್ಬಳನ್ನು ಕಬ್ಬನ್ ಪಾರ್ಕಿನ ಇಬ್ಬರು ಭದ್ರತಾ ಸಿಬ್ಬಂದಿಗಳೇ ಸಾಮೂಹಿಕ ಅತ್ಯಾಚಾರವೆಸಗಿದ್ದ ಪ್ರಕರಣ ರಾಜ್ಯಾದ್ಯಂತ ಸುದ್ದಿಯಾಗಿತ್ತು.

ಮೂಲತಃ ತುಮಕೂರಿನವಳಾದ ಮಹಿಳೆ (30) ಬೆಂಗಳೂರಿನ ಟೆನ್ನಿಸ್ ಕ್ಲಬ್ ಗೆ ಸದಸ್ಯತ್ವ ಸ್ಥಾನ ಪಡೆಯಲು ಆಗಮಿಸಿದ್ದಳು. ಬೆಂಗಳೂರಿನ ಕಬ್ಬನ್ ಪಾರ್ಕ್ ಬಳಿ ಇರುವ ಟೆನ್ನಿಸ್ ಅಕಾಡೆಮಿಗೆ ತೆರಳಿದ್ದ ಮಹಿಳೆ ಅಲ್ಲಿನ ಅಧಿಕಾರಿಗಳೊಂದಿಗೆ ತನ್ನ ಟೆನ್ನಿಸ್ ಆಡುವ ಅಭಿಲಾಶೆಯನ್ನು ವ್ಯಕ್ತಪಡಿಸಿದ್ದಳು. ಅಧಿಕಾರಿಗಳೊಂದಿಗೆ ಮಾತುಕತೆ ಮುಗಿಸಿದ್ದ ಮಹಿಳೆ ಕಬ್ಬನ್ ಪಾರ್ಕ್ ಬಳಿ  ಕೆಲಹೊತ್ತು ವಿಶ್ರಾಂತಿ ಪಡೆದಿದ್ದಳು. ಬೆಳಗ್ಗಿನಿಂದಲೇ ಮಹಿಳೆಯ ಚಲನವಲನವನ್ನು ಗಮನಿಸುತ್ತಿದ್ದ ಅಲ್ಲಿನ ಇಬ್ಬರು ಭದ್ರತಾ ಸಿಬ್ಬಂದಿಗಳು ಆಕೆಯ ಮೇಲೆ ಕಣ್ಣಿಟ್ಟಿದ್ದರು.

ಮಹಿಳೆಯ ಚಲನವಲನಗಳ ಮೇಲೆ ಬೆಳಗ್ಗೆಯಿಂದಲೂ ಕಣ್ಣಿಟ್ಟಿದ್ದ ಭದ್ರತಾ ಸಿಬ್ಬಂದಿ ಈಕೆ ಒಂಟಿಯಾಗಿರುವುದನ್ನು ಗೊತ್ತುಪಡಿಸಿಕೊಂಡಿದ್ದಾರೆ. ಅಷ್ಟರಲ್ಲೇ ಟೆನ್ನಿಸ್ ಅಕಾಡೆಮಿಯಲ್ಲಿ ತಡವಾದ ಕಾರಣ ಮಹಿಳೆ ತಾನು ಉಳಿದುಕೊಳ್ಳಲು ವ್ಯವಸ್ಥೆ ಮಾಡುವಂತೆ ಇದೇ ಭದ್ರತಾ ಸಿಬ್ಬಂದಿಗಳ ಬಳಿ ಕೇಳಿದ್ದಾಳೆ. ಇದನ್ನೇ ಬಂಡವಾಳವನ್ನಾಗಿಸಿಕೊಂಡ ಸಿಬ್ಬಂದಿಗಳು ಆಕೆಯನ್ನು ಕಬ್ಬನ್  ಪಾರ್ಕ್ ನ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ಮಾಡಿದ್ದಾರೆ. ಸಭ್ಯರಂತೆ ವರ್ತಿಸಿದ ಸಿಬ್ಬಂದಿ ಆಕೆಗೆ ದಾರಿ ತೋರಿಸುವುದಾಗಿ ಹೇಳಿ ಈ ಕೃತ್ಯ  ಎಸಗಿದ್ದಾರೆ.

ಬಳಿಕ ಸಮೀಪದ ಸಿದ್ದಲಿಂಗಯ್ಯ ಸರ್ಕಲ್ ಬಳಿಯ ಪೊದೆಯೊಳಗೆ ಬಿಸಾಡಿ ಹೋಗಿದ್ದಾರೆ. ಅತ್ಯಾಚಾರದಿಂದಾಗಿ ನಿತ್ರಾಣಗೊಂಡಿದ್ದ ಮಹಿಳೆ ರಾತ್ರಿ ಪಾಳಿ ಪೊಲೀಸರ ಕಣ್ಣಿಗೆ ಬಿದ್ದಿದ್ದು,  ಅಸ್ವಸ್ಥವಾಗಿದ್ದ ಮಹಿಳೆಗೆ ಪೊಲೀಸರು ಪ್ರಥಮ ಚಿಕಿತ್ಸೆ ನೀಡಿದ್ದಾರೆ. ಬಳಿಕ ಆಕೆಯನ್ನು ಬೌರಿಂಗ್ ಆಸ್ಪತ್ರೆಗೆ ದಾಖಲಿಸಿದ್ದರು. ಈ ವಿಚಾರ ಮಾಧ್ಯಮಗಳಲ್ಲಿ ಬೆಳಕಿಗೆ ಬರುತ್ತಿದ್ದಂತೆಯೇ ಎಚ್ಚೆತ್ತ  ಕಬ್ಬನ್ ಪಾರ್ಕ್ ಪೊಲೀಸರು ಅತ್ಯಾಚಾರವೆಸಗಿದ ಇಬ್ಬರು ಭದ್ರತಾ ಸಿಬ್ಬಂದಿಗಳನ್ನು ಬಂಧಿಸಿ, ವಿಚಾರಣೆ ನಡೆಸುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com